ಮಾರುಕಟ್ಟೆಗೆ ಬಂದಿದೆ LED Face Mask, ಇಲ್ಲಿದೆ ಬಳಕೆ, ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

 ಕೋವಿಡ್ -19 ಹಿನ್ನೆಲೆ ಪ್ರತಿಯೊಬ್ಬರೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

Updated: Jul 27, 2020 , 04:00 PM IST
ಮಾರುಕಟ್ಟೆಗೆ ಬಂದಿದೆ LED Face Mask, ಇಲ್ಲಿದೆ ಬಳಕೆ, ಬೆಲೆ ಹಾಗೂ ವೈಶಿಷ್ಟ್ಯಗಳ ವಿವರ

ನವದೆಹಲಿ: ಕೋವಿಡ್ -19 ಹಿನ್ನೆಲೆ ಪ್ರತಿಯೊಬ್ಬರೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಈ ನೀರಸ ಮುಖವಾಡಗಳನ್ನು ಧರಿಸುವುದು ಕೆಲವರಿಗೆ ತುಂಬಾ ಬೋರಿಂಗ್ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಫೇಸ್ ಮಾಸ್ಕ್ ಗಳಿಗೆ ಆಸಕ್ತಿಕರ ನೋಟ ಮತ್ತು ಭಾವನೆಯನ್ನು ನೀಡುವ ಉದ್ದೇಶದಿಂದ ಹೊಸ ತಂಪಾದ ಎಲ್ಇಡಿ ಫೇಸ್ ಮಾಸ್ಕ್ ಅನ್ನು ಪರಿಚಯಿಸಲಾಗಿದೆ. ಈ ಮುಖವಾಡಗಳನ್ನು  Lumen Couture ಫ್ಯಾಷನ್ ಡಿಸೈನರ್ Chelsea Klukas ವಿನ್ಯಾಸಗೊಳಿಸಿದ್ದಾರೆ.

The Vergeನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಈ LED ಮಾಸ್ಕ್ ಗಳಿಗೆ ಡುಅಲ್ ಲೇಯರ್ ಕಾಟನ್ ನಿಂದ ತಯಾರಿಸಲಾಗಿದೆ. ಇದರಲ್ಲಿ ಚಾರ್ಜೆಬಲ್ LED ಫ್ಲೆಕ್ಸ್ ಪ್ಯಾನೆಲ್ ನೀಡಲಾಗಿದೆ. ಮಾಸ್ಕ್ ಅನ್ನು ಸ್ಯಾನಿಟೈಸರ್ ಮಾಡುವಾಗ ಅಥವಾ ಸ್ವಚ್ಛಗೊಳಿಸುವಾಗ ಈ ಪ್ಯಾನೆಲ್ ಅನ್ನು ತೆಗೆಯಬಹುದಾಗಿದೆ. ಈ ಮಾಸ್ಕ್ ಗಳು ಒಂದು ಬ್ಯಾಟರಿ ಹಾಗೂ ಚಾರ್ಜೆಬಲ್ ಕೇಬಲ್ ಒಳಗೊಂಡಿವೆ. ಮಾರುಕಟ್ಟೆಯಲ್ಲಿ ಈ ಮಾಸ್ಕ್ ಗಳ ಬೆಲೆಯನ್ನು ರೂ.7000 ನಿಗದಿಪಡಿಸಲಾಗಿದ್ದು, ಇವುಗಳನ್ನು Lumen Couture ವೆಬ್ಸೈಟ್ ಮೂಲಕ ಖರೀದಿಸಬಹುದಾಗಿದೆ. ಫ್ಯಾಷನ್ ಡಿಸೈನರ್ ಗಳು ಹೇಳುವ ಪ್ರಕಾರ, ಕೊವಿಡ್ 19 ಮಹಾಮಾರಿಯ ಕಾಲದಲ್ಲಿ ಮಾಸ್ಕ್ ಗಳ ಮೂಲಕ ಲಾಭ ಗಳಿಕೆಯಾಗಿರಲಿಲ್ಲ.  Lumen Couture ಪ್ರಕಾರ, ಜೂನ್‌ನಲ್ಲಿ ಮಾಸ್ಕ್ ಮಾರಾತದಿಂದಾದ ಗಳಿಕೆಯಿಂದ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ರಿಲೀಫ್ ಫಂಡ್‌ ಗೆ ಸುಮಾರು 3,72,962 ರೂ. ನೀಡಲು ನಿರ್ಧರಿಸಲಾಗಿದೆ.

LED ಡಿಸ್ಪ್ಲೆ ಹೊಂದಿರುವ ವಿಶೇಷ ರೀತಿಯ ಮಾಸ್ಕ್ ಗಳು ತೆಳುವಾದ ಎಲ್ಇಡಿ ಮ್ಯಾಟ್ರಿಕ್ಸ್ ಪರದೆಯೊಂದಿಗೆ ಬರಲಿದ್ದು, ಬಳಕೆದಾರರು ಮೊಬೈಲ್ ಅಪ್ಲಿಕೇಶನ್‌ನ ಸಹಾಯದಿಂದ ಗ್ರಾಹಕೀಯಗೊಳಿಸಬಹುದು. ಅಪ್ಲಿಕೇಶನ್‌ನ ಸಹಾಯದಿಂದ, ಡ್ರಾಯಿಂಗ್, ಪಠ್ಯ ಮತ್ತು ಧ್ವನಿಯನ್ನು ಮುಖವಾಡಕ್ಕೆ ಸೇರಿಸಬಹುದು. ಬಟ್ಟೆಯಿಂದ ಮಾಡಿದ ಮುಖವಾಡದಿಂದ ಉಸಿರಾಡಲು ಯಾವುದೇ ತೊಂದರೆ ಇರುವುದಿಲ್ಲ. ಅಲ್ಲದೆ, ಅದರ ಕೆಳಗೆ ಸೈಡ್ ಸ್ಕ್ರೀನ್ ಇದೆ. ಮುಖವಾಡದ ಎಲ್ಇಡಿ ಫಲಕದಲ್ಲಿ ಮೈಕ್ರೊಫೋನ್ ಇನ್ಪುಟ್ ಒದಗಿಸಲಾಗಿದೆ. ಸ್ಟ್ಯಾಂಡ್ ಬ್ಯಾಕ್ ಅಥವಾ 6 ಅಡಿಗಳಂತಹ ಸಾಮಾಜಿಕ ದೂರ ಸಂದೇಶಗಳನ್ನು ಬಳಕೆದಾರರ ಮುಖವಾಡದಲ್ಲಿ ಹಂಚಿಕೊಳ್ಳಬಹುದು. ಮುಖವಾಡದಿಂದ ಮುಚ್ಚಿದ ಬಾಯಿ ಮತ್ತು ಮೂಗಿನಿಂದ ವಾಸ್ತವವಾಗಿ ಮಾತನಾಡುವುದು ಸುಲಭವಲ್ಲ. ಈ ಸಂದರ್ಭದಲ್ಲಿ, ಎಲ್ಇಡಿ ಮುಖವಾಡದ ಸಹಾಯದಿಂದ ಈ ಸಮಸ್ಯೆಯನ್ನು ಪರಿಹರಿಸಬಹುದು.