ಈ ಪುಡಿಯನ್ನು ಸೇವಿಸಿದರೆ ಹಣ್ಣು ಹಣ್ಣು ಮುದುಕರಾಗುವವರೆಗೂ ಹೃದಯಾಘಾತದ ಭಯವೇ ಇರುವುದಿಲ್ಲ !

ಈ ಪುಡಿಯನ್ನು 5 ಗ್ರಾಂ ನಷ್ಟು ಸೇವಿಸಿದರೆ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಹೃದಯ ಕಾಯಿಲೆಗಳನ್ನು ತಡೆಯಲು ಇದು ಹೆಚ್ಚಿನ ಮಟ್ಟದಲ್ಲಿ ಸಹಾಯ ಮಾಡುತ್ತದೆ.   

Written by - Ranjitha R K | Last Updated : May 19, 2025, 05:41 PM IST
  • ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ತಣ್ಣನೆಯ ಆಹಾರ
  • ದೇಹವನ್ನು ತಂಪಾಗಿರಿಸಲು ಇರುವ ಸುಲಭ ಮಾರ್ಗವೆಂದರೆ ಲೈಕೋರೈಸ್.
  • ಲೈಕೋರೈಸ್ ಅಂದರೆ ಜೇಷ್ಠ ಮಧು.
ಈ ಪುಡಿಯನ್ನು ಸೇವಿಸಿದರೆ ಹಣ್ಣು ಹಣ್ಣು ಮುದುಕರಾಗುವವರೆಗೂ  ಹೃದಯಾಘಾತದ ಭಯವೇ ಇರುವುದಿಲ್ಲ !

ಬೆಂಗಳೂರು : ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ತಣ್ಣನೆಯ ಆಹಾರವನ್ನು ಸೇವಿಸುವುದು ಮುಖ್ಯ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಹೀಗೆ ದೇಹವನ್ನು ತಂಪಾಗಿರಿಸಲು ಇರುವ ಸುಲಭ ಮಾರ್ಗವೆಂದರೆ  ಲೈಕೋರೈಸ್. ಲೈಕೋರೈಸ್  ಅಂದರೆ ಜೇಷ್ಠ ಮಧು.  ಭಾರತೀಯ ಪಾಕಪದ್ಧತಿಯಲ್ಲಿ ಕಂಡುಬರುವ ಲೈಕೋರೈಸ್‌ಗೆ ಆಯುರ್ವೇದದಲ್ಲೂ ವಿಶೇಷ ಸ್ಥಾನವಿದೆ. ಇದು  ಕ್ಯಾನ್ಸರ್ ನಂಥಹ ಕಾಯಿಲೆಯ ಅಪಾಯವನ್ನು ತಡೆಯುತ್ತದೆ. 

ಕ್ಯಾನ್ಸರ್ ನಿಂದ ಪರಿಹಾರ : 
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳ ಜೊತೆಗೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೂ ಚಿಕಿತ್ಸೆ ನೀಡಲು ಲೈಕೋರೈಸ್ ಅನ್ನು ಬಳಸಲಾಗುತ್ತದೆ. ಹಾಂಗ್ ಕಾಂಗ್ ಬ್ಯಾಪ್ಟಿಸ್ಟ್ ವಿಶ್ವವಿದ್ಯಾಲಯದ ಹೊಸ ಅಧ್ಯಯನವು ಲೈಕೋರೈಸ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎನ್ನುವ ಅಂಶವನ್ನು ಬಹಿರಂಗಪಡಿಸಿದೆ. ಇದರಲ್ಲಿರುವ ಐಸೊಲಿಕ್ವಿರಿಡಿಜೆನಿನ್ ಎಂಬ ಅಂಶವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳ ಲಕ್ಷಣಗಳನ್ನು ನಿಗ್ರಹಿಸುವಲ್ಲಿ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ : ಈ ಹಣ್ಣಲ್ಲ ಇದರ ಸಿಪ್ಪೆ ಸೇವಿಸಿದರೆ ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ನಾರ್ಮಲ್ ಆಗುವುದು ! ಯಾವ ಪಥ್ಯದ ಅಗತ್ಯವೂ ಇರುವುದಿಲ್ಲ

ಜೀರ್ಣಕ್ರಿಯೆಗೆ ಸಹಕಾರಿ : 
ಲೈಕೋರೈಸ್ ಕಷಾಯವು ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಹೊಟ್ಟೆಯ ಶಾಖವನ್ನು ಶಮನಗೊಳಿಸುತ್ತದೆ. ಇದರ ತಂಪಾಗಿಸುವ ಪರಿಣಾಮದಿಂದಾಗಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಗ್ಯಾಸ್, ಅಜೀರ್ಣ, ಹುಳಿ ತೇಗು, ಹೊಟ್ಟೆ   ನೋವು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸಬಹುದು.

ಹೃದಯಾಘಾತದಿಂದ ರಕ್ಷಣೆ :
ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಲೈಕೋರೈಸ್ ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತದೆ. ಲೈಕೋರೈಸ್ ಸೇವನೆಯು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ಹೃದಯಕ್ಕೆ ರಕ್ತ ಪೂರೈಕೆ ಸುಗಮವಾಗಿ ಆಗುವಂತೆ ಮಾಡುತ್ತದೆ. ಈ ಮೂಲಕ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಲೈಕೋರೈಸ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಪ್ರೋಟೀನ್‌ಗಳಂತಹ ಅಂಶಗಳು ಹೃದಯ ಸ್ನಾಯುಗಳನ್ನು ಬಲಪಡಿಸುತ್ತವೆ. ಇದರಿಂದಾಗಿ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ. ಲೈಕೋರೈಸ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ : ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ ಪತ್ತೆ!! ಈ ಪ್ರಾಸ್ಟೇಟ್ ಕ್ಯಾನ್ಸರ್ ಎಷ್ಟು ಅಪಾಯಕಾರಿ?

ಹೃದ್ರೋಗಿಗಳು ಇದನ್ನು ಹೇಗೆ ಸೇವಿಸಬೇಕು? : 
ಹೃದಯ ರೋಗಿಗಳು ಪ್ರತಿದಿನ 3 ರಿಂದ 5 ಗ್ರಾಂ ಲೈಕೋರೈಸ್ ಪುಡಿಯನ್ನು 15 ರಿಂದ 20 ಗ್ರಾಂ ಸಕ್ಕರೆ ನೀರಿನೊಂದಿಗೆ ಬೆರೆಸಿ ಸೇವಿಸಲು ಸೂಚಿಸಲಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಲೈಕೋರೈಸ್‌ನ ಉರಿಯೂತ ನಿವಾರಕ ಗುಣಲಕ್ಷಣಗಳು ಹೃದಯದ ಮೇಲಿನ ಉರಿಯೂತ ಮತ್ತು ಒತ್ತಡವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದ್ದು, ಇದು ಹೃದಯ ಕಾಯಿಲೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎದೆಯುರಿಯ ಹೊರತಾಗಿ, ಲೈಕೋರೈಸ್ ಅನ್ನು ಬಾಯಿ ಹುಣ್ಣು, ಗಂಟಲು ನೋವು ಮತ್ತು ಕೆಮ್ಮುಗಳಿಗೆ ಸಹ ಬಳಸಲಾಗುತ್ತದೆ. ಇದರ ರಸವನ್ನು ಸೇವಿಸುವುದರಿಂದ ದೀರ್ಘಕಾಲದ ಕೆಮ್ಮು ಕೂಡ ಗುಣವಾಗುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

(ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Trending News