)
Liver failure symptoms : ಯಕೃತ್ತು ನಮ್ಮ ದೇಹದ ಪ್ರಮುಖ ಅಂಗವಾಗಿದೆ.. ಒಂದು ವೇಳೆ ನಿಮ್ಮ ಲಿವರ್ ಹಾನಿಗೊಳಗಾಗಿದ್ದರೆ, ಅದರ ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡುಬರುತ್ತವೆ. ಈ ಲಕ್ಷಣಗಳನ್ನು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ಅದು ನಿಮಗೆ ಅಪಾಯವಾಗಿ ಪರಿಣಮಿಸಬಹುದು. ಅದಕ್ಕಾಗಿ ಲಿವರ್ ಡ್ಯಾಮೇಜ್ (Liver failure) ಲಕ್ಷಣಗಳನ್ನು ತಿಳಿದುಕೊಳ್ಳಿ..
ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು : ಕಾಮಾಲೆ ಮತ್ತು ಸ್ಕ್ಲೆರಲ್ ಐಕ್ಟೆರಸ್, ಅಂದರೆ ಚರ್ಮ ಮತ್ತು ಕಣ್ಣುಗಳ ಹಳದಿ ಬಣ್ಣಕ್ಕೆ ತಿರುಗುವುದು, ಲಿವರ್ ಹಾನಿಯ (liver damage) ಗಂಭೀರ ಲಕ್ಷಣಗಳಲ್ಲಿ ಒಂದು.. ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಚರ್ಮ, ಉಗುರುಗಳು ಅಥವಾ ಕಣ್ಣುಗಳ ಹಳದಿ ಬಣ್ಣಕ್ಕೆ ಬಂದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಹೊಟ್ಟೆಯಲ್ಲಿ ಊತ : ಹೊಟ್ಟೆ ಊತ, ದಿನಗಳು ಕಳೆದರೂ ಊತ ಕಡಿಮೆಯಾಗಲಿಲ್ಲ ಅಂದ್ರೆ, ಅದು ಕೂಡ ಯಕೃತ್ತಿನ (liver damage) ಸಮಸ್ಯೆಗಳ ಸಂಕೇತ ಎಂದು ಗ್ಯಾಸ್ಟ್ರೋಎಂಟರಾಲಜಿಸ್ಟ್ ಹೇಳಿದ್ದಾರೆ. ಇದರರ್ಥ ನಿಮ್ಮ ಯಕೃತ್ತು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅರ್ಥ. ಲಿವರ್ ಸರಿಯಾಗಿ ಕೆಲಸ ಮಾಡದಿದ್ದಾಗ, ದ್ರವವು ನಿಮ್ಮ ಹೊಟ್ಟೆಯಲ್ಲಿ ಮತ್ತು ನಿಮ್ಮ ಕಾಲುಗಳಲ್ಲಿಯೂ ಸಂಗ್ರಹವಾಗುತ್ತದೆ.
ವಾಕರಿಕೆ ಮತ್ತು ವಾಂತಿ : ಯಾವುದೇ ಕಾರಣವಿಲ್ಲದೆ ನಿಮಗೆ ವಾಕರಿಕೆ ಮತ್ತು ವಾಂತಿ ಅನುಭವವಾದರೆ, ಅದು ಒಳ್ಳೆಯದಲ್ಲ. ವಿಶೇಷವಾಗಿ ಮದ್ಯಪಾನ ಮಾಡಿದ ನಂತರ ಈ ಸ್ಥಿತಿ ಹದಗೆಟ್ಟರೆ, ಇದು ಯಕೃತ್ತಿನ ಹಾನಿಯ ದೊಡ್ಡ (liver damage) ಎಚ್ಚರಿಕೆಯ ಸಂಕೇತವಾಗಿದೆ.. ತಕ್ಷಣ ವೈದ್ಯರನ್ನು ಸಂಪರ್ಕಿಸಿ..
ಹೊಟ್ಟೆಯ ಮೇಲ್ಬಾಗದಲ್ಲಿ ನೋವು : ಹೊಟ್ಟೆಯ ಮೇಲಿನ ಬಲಭಾಗದಲ್ಲಿ ನೋವು ಇದ್ದು ಅದು ಕಡಿಮೆಯಾಗದಿದ್ದರೆ, ಇದು ಯಕೃತ್ತಿನ ಹಾನಿಯ ಮತ್ತೊಂದು ಲಕ್ಷಣ. ಗ್ಯಾಸ್ಟ್ರೋಎಂಟರಾಲಜಿಸ್ಟ್ ಹೇಳುವಂತೆ, ಇದು ಹೆಪಟೈಟಿಸ್ನಿಂದಾಗಿರಬಹುದು. ಅಂದರೆ ಯಕೃತ್ತಿನಲ್ಲಿ ಉರಿಯೂತದ ಸಂಕೇತ. ವೈರಲ್ ಸೋಂಕು (liver damage) ಅಥವಾ ಆಲ್ಕೋಹಾಲ್ನಿಂದ ಇದು ಉಂಟಾಗಬಹುದು.
ಸೂಚನೆ: ಪ್ರಿಯ ಓದುಗರೇ, ಈ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಇದನ್ನು ನಾವು ನಿಮಗೆ ಸಲಹೆಗಳು ಮತ್ತು ಸಾಮಾನ್ಯ ಜ್ಞಾನ ನೀಡುವ ಉದ್ದೇಶದಿಂದ ಬರೆದಿದ್ದೇವೆ.. ನೀವು ಯಾವುದೇ ಆರೋಗ್ಯ ಸಂಬಂಧಿತ ಪರಿಹಾರವನ್ನು ಪ್ರಯತ್ನಿಸುವ ಮೊದಲು, ವೈದ್ಯರನ್ನು ಸಂಪರ್ಕಿಸಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ