)
ಬೆಂಗಳೂರು : ಯಕೃತ್ತು ನಮ್ಮ ದೇಹದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ದೇಹದಿಂದ ವಿಷವನ್ನು ಹೊರ ಹಾಕುವಲ್ಲಿ, ಜೀರ್ಣಕ್ರಿಯೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಮೂಲಕ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಇದು ಅನೇಕ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದರ ಹೊರತಾಗಿಯೂ, ಸಮಸ್ಯೆ ಉದ್ಭವಿಸುವವರೆಗೂ ಅನೇಕ ಜನರು ಲಿವರ್ ಬಗ್ಗೆ ಗಮನ ಹರಿಸುವುದಿಲ್ಲ. ಆರಂಭದಲ್ಲಿಯೇ ಲಿವರ್ ಸಮಸ್ಯೆಯನ್ನು ಗುರುತಿಸಿಕೊಂಡರೆ ಹೆಚ್ಚಿನ ಅಪಾಯ ಆಗುವುದನ್ನು ತಪ್ಪಿಸಬಹುದು. ಇದಕ್ಕಾಗಿ ಲಿವರ್ ಕಾಯಿಲೆಯ ಆರಂಭಿಕ ಚಿಹ್ನೆಗಳನ್ನು ನಾವು ಗುರುತಿಸಿಕೊಳ್ಳಬೇಕು. ಲಿವರ್ ಕಾಯಿಲೆಯ ಆರಂಭಿಕ ಸಂಕೇತಗಳು ಮುಖ, ಕುತ್ತಿಗೆ ಮತ್ತು ಗಂಟಲಿನಲ್ಲಿಯೂ ಕಾಣಿಸಿಕೊಳ್ಳುತ್ತದೆ.
"ಹೆಚ್ಚಿನ ಜನರು ದೇಹದ ಸೂಕ್ಷ್ಮ ಸಂಕೇತಗಳನ್ನು ನಿರ್ಲಕ್ಷಿಸುತ್ತಾರೆ. ಕೇವಲ "ಒತ್ತಡ" ಅಥವಾ "ವಯಸ್ಸಿನ ಕಾರಣದಿಂದ ಹೀಗಾಗುತ್ತದೆ ಎಂದು ಭಾವಿಸಿ ಸುಮ್ಮನಾಗುತ್ತಾರೆ. ಆದರೆ ಈ ಆರಂಭಿಕ ಸಂಕೇತಗಳು ನಿಮ್ಮ ಯಕೃತ್ತು ನಿರ್ವಿಷಗೊಳಿಸಲು, ಹಾರ್ಮೋನುಗಳನ್ನು ನಿಯಂತ್ರಿಸಲು ಮತ್ತು ಚಯಾಪಚಯ ಸಮತೋಲನವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿದೆ ಎಂದು ಅರ್ಥೈಸಬಹುದು. ಲಿವರ್ ನ ಯಾವೆಲ್ಲಾ ಅಪಾಯಕಾರಿ ಲಕ್ಷಣಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
1. ಹಸಿವಿನ ಕೊರತೆ ಅಥವಾ ಆಗಾಗ ವಾಕರಿಕೆ :
ನಿರಂತರವಾಗಿ ಊಟ ಮಾಡಲು ಸಾಧ್ಯವಾಗದೇ ಇದ್ದರೆ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ವಾಕರಿಕೆ ಬಂದರೆ, ಅದು ಯಕೃತ್ತಿನ ಸಮಸ್ಯೆಯಾಗಿರಬಹುದು.
2. ಹೊಟ್ಟೆಯ ಕೊಬ್ಬು :
"ತೂಕ ಹೆಚ್ಚಾಗುವುದು, ವಿಶೇಷವಾಗಿ ಹೊಟ್ಟೆಯ ಸುತ್ತ ಕೊಬ್ಬು ಬೆಳೆಯುತ್ತಿದ್ದರೆ ನಿಮ್ಮ ಯಕೃತ್ತು ಕೊಬ್ಬನ್ನು ಸರಿಯಾಗಿ ಚಯಾಪಚಯಗೊಳಿಸುತ್ತಿಲ್ಲ ಎಂದರ್ಥ.
3. ಮುಖ, ಕುತ್ತಿಗೆ ಅಥವಾ ತೋಳುಗಳ ಮೇಲೆ ಕಪ್ಪು ಕಲೆಗಳು :
"ಈ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಪಿಗ್ಮೆನ್ ಟೆಶನ್ ಲಿವರ್ ನೀಡುತ್ತಿರು ಎಚ್ಚರಿಕೆಯಾಗಿರಬಹುದು.ಇದು ಯಕೃತ್ತಿನ ಒತ್ತಡಕ್ಕೆ ಸಂಬಂಧಿಸಿದ ಇನ್ಸುಲಿನ್ ಪ್ರತಿರೋಧದ ಸಾಮಾನ್ಯ ಸಂಕೇತವಾಗಿದೆ.
4. ನಿಮ್ಮ ಹೊಟ್ಟೆಯ ಬಲಭಾಗದಲ್ಲಿ ಕಿರಿಕಿರಿ :
"ನಿಮ್ಮ ಹೊಟ್ಟೆಯ ಮೇಲಿನ ಬಲಭಾಗದಲ್ಲಿ, ಅಂದರೆ ವೈದ್ಯಕೀಯವಾಗಿ ರೈಟ್ ಹೈಪೋಕಾಂಡ್ರಿಯಾಕ್ ರೀಜನ್ ಎಂದು ಕರೆಯಲ್ಪಡುವ ಜಾಗದಲ್ಲಿ ಯಾವುದೇ ನೋವು ಅಥವಾ ಬಿಗಿತ ಕಂಡು ಬಂದರೆ ಅದು ಯಕೃತ್ತಿನ ಉರಿಯೂತವನ್ನು ಸೂಚಿಸುತ್ತದೆ.
5.ವಿಶ್ರಾಂತಿ ಪಡೆದರೂ ಹೋಗದ ಆಯಾಸ :
ಪೂರ್ಣ ರಾತ್ರಿಯ ನಿದ್ರೆ ಅಥವಾ ವಿಶ್ರಾಂತಿ ನಂತರವೂ ದಣಿವಾಗುತ್ತಿರುವುದು. ನಿಮ್ಮ ಎನರ್ಜಿ ಲೆವೆಲ್ ಕಡಿಮೆಯಿದ್ದರೆ, ಅದಕ್ಕೆ ನಿಮ್ಮ ಯಕೃತ್ತು ಮೂಲ ಕಾರಣವಾಗಿರಬಹುದು.
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.