ನೀವೂ ಡಯಟ್ ಮಾಡ್ತೀರಾ? ಲೈಂಗಿಕಾಸಕ್ತಿ ಮೇಲಾಗಲಿದೆ ಈ EFFECT

ಹಲವು ಜನರು ಫ್ಯಾಟಿ ಫುಡ್ ಆಹಾರಗಳಿಂದ ದೂರ ಇರುತ್ತಾರೆ. ಕಾರಣ ಇಂತಹ ಆಹಾರಗಳಿಂದ ನಮ್ಮ ಶರೀರ ಕಾಯಿಲೆಗಳಿಗೆ ಮನೆಯಾಗುತ್ತದೆ ಎಂಬುದು ಅವರ ಅನಿಸಿಕೆ.

Last Updated : Jan 14, 2020, 07:32 PM IST
ನೀವೂ ಡಯಟ್ ಮಾಡ್ತೀರಾ? ಲೈಂಗಿಕಾಸಕ್ತಿ ಮೇಲಾಗಲಿದೆ ಈ EFFECT title=

ಹಲವು ಜನರು ಫ್ಯಾಟಿ ಫುಡ್ ಆಹಾರಗಳಿಂದ ದೂರ ಇರುತ್ತಾರೆ. ಕಾರಣ ಇಂತಹ ಆಹಾರಗಳಿಂದ ನಮ್ಮ ಶರೀರ ಕಾಯಿಲೆಗಳಿಗೆ ಮನೆಯಾಗುತ್ತದೆ ಎಂಬುದು ಅವರ ಅನಿಸಿಕೆ. ಆದರೆ, ಕೊಬ್ಬಿನಾಂಶ ಹೊಂದಿದ ಆಹಾರದಿಂದ ದೂರವಿರುವವರೂ ಕೂಡ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂಬುದು ಇತ್ತೀಚೆಗೆ ನಡೆಸಲಾದ ಒಂದು ಸಂಶೋಧನೆಯಿಂದ ತಿಳಿದುಬಂದಿದೆ. 

ಅಮೆರಿಕಾದ ಚಿಕಾಗೋ ವಿವಿ ಸಂಶೋಧಕ ಜೆಟ್ ಫಂಟಸ್ ಈ ಕುರಿತು ಒಂದು ಅಧ್ಯಯನ ನಡೆಸಿದ್ದು, "ಕೊಬ್ಬು ನಿರ್ಬಂಧಿತ ಆಹಾರ ಪದ್ಧತಿ  ಅನುಸರಿಸದ ಪುರುಷರಿಗಿಂತ ಕೊಬ್ಬು ನಿರ್ಬಂಧಿತ ಆಹಾರ ಪದ್ಧತಿ ಅನುಸರಿಸಿದವರು ಕಡಿಮೆ ಸೀರಮ್ ಟೆಸ್ಟೋಸ್ಟೆರಾನ್ ಹೊಂದಿರುವುದು ಕಂಡುಬಂದಿದೆ ಎಂದಿದ್ದಾರೆ. ಆದರೆ, ಆಹಾರದಲ್ಲಿ ಸೀರಮ್ ಟೆಸ್ಟೋಸ್ಟೆರಾನ್  ನಲ್ಲಿ ಉಂಟಾಗುವ ಈ  ಸಣ್ಣ ವ್ಯತ್ಯಾಸಗಳ ವೈದ್ಯಕೀಯ ಮಹತ್ವ ಇನ್ನೂ ಸ್ಪಷ್ಟವಾಗಿಲ್ಲ" ಎಂದಿದ್ದಾರೆ.

ಜರ್ನಲ್ ಆಫ್ ಯುರಾಲಾಜಿಯಲ್ಲಿ  ಪ್ರಕಟವಾದ ಅಧ್ಯಯನಕ್ಕಾಗಿ ರಾಷ್ಟ್ರವ್ಯಾಪಿ ಆರೋಗ್ಯ ಅಧ್ಯಯನದಿಂದ (ರಾಷ್ಟ್ರೀಯ ಆರೋಗ್ಯ ಮತ್ತು ಪೋಷಣೆ ಪರೀಕ್ಷೆಯ ಸಮೀಕ್ಷೆ ನಡೆಸಲಾಗಿದ್ದು,  3,100 ಕ್ಕೂ ಅಧಿಕ ಪುರುಷರ  ದತ್ತಾಂಶಗಳನ್ನು  ಸಂಶೋಧನಾ ತಂಡ ವಿಶ್ಲೇಷಿಸಿದೆ. ಭಾಗವಹಿಸಿದ ಎಲ್ಲರಲ್ಲಿಯೂ ಕೂಡ ಆಹಾರ ಮತ್ತು ಸೀರಮ್ ಟೆಸ್ಟೋಸ್ಟೆರಾನ್ ದತ್ತಾಂಶಗಳನ್ನು ಹೊಂದಿದ್ದರು.

ಅಮೆರಿಕಾದ ಹಾರ್ಟ್ ಅಸ್ಸೋಸಿಯೇಶನ್  ಕಡಿಮೆ ಕೊಬ್ಬಿನಾಂಶ ಆಹಾರದ ಮಾನದಂಡಗಳನ್ನು ಶೇ.14.6 ರಷ್ಟು ಪುರುಷರು ಪೂರೈಸಿದ್ದಾರೆ ಎಂದು ಹೇಳಿದೆ. ಇನ್ನೊಂದೆಡೆ ಇತರ ಶೇ.24.4 ರಷ್ಟು ಪುರುಷರು ಹಣ್ಣುಗಳು, ತರಕಾರಿ ಮತ್ತು ದ್ವಿದಳ ಧಾನ್ಯ ಸೇವಿಸಿದ್ದರು ಮತ್ತು ಇವರು ಪಶುಗಳಿಂದ ಪ್ರಾಪ್ತವಾದ ಪ್ರೋಟಿನ್ ಹಾಗೂ ಡೆರಿ ಉತ್ಪನ್ನಗಳಿಂದ ದೂರವಿದ್ದರು. ಈ ಅಧ್ಯಯನದಲ್ಲಿ ನಿರ್ಭಂದಿತ ಆಹಾರ ಸೇವಿಸಿದ ಪುರುಷರಲ್ಲಿ ಸಿರಮ್ ಟೆಸ್ಟೋಸ್ಟೆರಾನ್ ಕಡಿಮೆಯಾಗಿರುವುದು ಕಂಡುಬಂದಿದೆ. ಹಾಗೂ ಕೊಬ್ಬು ನಿರ್ಬಂಧಿತ ಆಹಾರ ಪದ್ಧತಿ ಅನುಸರಿಸದ ಪುರುಷರಲ್ಲಿ  ಸಿರಮ್ ಟೆಸ್ಟೋಸ್ಟೆರಾನ್ ಮಟ್ಟ 411 ng/dl ಇರುವುದು ಕಂಡು ಬಂದಿದೆ.

ಟೆಸ್ಟೋಸ್ಟೆರಾನ್ ಒಂದು ಹಾರ್ಮೋನ್ ಆಗಿದ್ದು, ಇದು ಪುರುಷರ ವೃಷಣದಲ್ಲಿ ಕಂಡುಬರುತ್ತದೆ. ಇದು ಪುರುಷರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ. ಜೊತೆಗೆ ಮಾಂಸ ಖಂಡಗಳು ಹಾಗೂ ರಕ್ತದಲ್ಲಿ ಕೆಂಪುರಕ್ತ ಕಣಗಳ ನಿರ್ಧಿಷ್ಟ ಮಟ್ಟವನ್ನು ಕಾಯುವಲ್ಲಿ ಸಹಕಾರಿಯಾಗಿದೆ. ಈ ಹಾರ್ಮೋನು ಪುರುಷರಲ್ಲಿ ಲೈಂಗಿಕ ಕ್ರಿಯೆಯ ವೇಳೆ ಹೆಚ್ಚು ಸಹಕರಿಸುತ್ತದೆ.

Trending News