ಉತ್ತಮ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ತಿನ್ನಲೇಬೇಕಾದ ಆಹಾರಗಳಿವು

Health Tips: ಬೇಸಿಗೆಯ ಬಿಸಿ ಗಾಳಿ, ತಾಪದಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ, ನಿಮ್ಮ ಆಹಾರಪದ್ದತಿಯಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

Written by - Yashaswini V | Last Updated : May 1, 2025, 01:28 PM IST
  • ಬೇಸಿಗೆಯಲ್ಲಿ ಕೇವಲ ಚರ್ಮದ ಬಗ್ಗೆ ಕಾಳಜಿವಹಿಸುವುದಷ್ಟೇ ಅಲ್ಲ
  • ಬೇಸಿಗೆ ಕಾಲದಲ್ಲಿ ಒಟ್ಟಾರೆ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ಅಗತ್ಯವಾಗಿದೆ
  • ಬೇಸಿಗೆಯಲ್ಲಿ ಕೆಲವು ಆಹಾರಗಳ ಸೇವನೆಯಿಂದ ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾಗಿದೆ.
ಉತ್ತಮ ಆರೋಗ್ಯಕ್ಕಾಗಿ ಬೇಸಿಗೆಯಲ್ಲಿ ತಿನ್ನಲೇಬೇಕಾದ ಆಹಾರಗಳಿವು

Summer Health Tips: ಬೇಸಿಗೆಯಲ್ಲಿ ಬದಲಾದ ಬಿಸಿ ವಾತಾವರಣವು ದೇಹ ಬೇಗ ಬಳಲುವಂತೆ ಮಾಡುತ್ತದೆ. ಜೊತೆಗೆ ದೇಹದಲ್ಲಿ ನೀರಿನ ಅಂಶ ಕೊರತೆಯಾಗುವುದರಿಂದಲೂ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇವೆಲ್ಲವನ್ನೂ ನಿಭಾಯಿಸಲು ಆಹಾರದಲ್ಲಿ ಬದಲಾವಣೆ ತುಂಬಾ ಅಗತ್ಯ. ಆರೋಗ್ಯ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಕೆಲವು ಆಹಾರಗಳನ್ನು ನಮ್ಮ ಡಯಟ್ ಭಾಗವಾಗಿಸಿದರೆ ಬಹಳ ಸುಲಭವಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 

Add Zee News as a Preferred Source

ವಾಸ್ತವವಾಗಿ, ಹವಾಮಾನ ಬದಲಾವಣೆ ವಿಪರೀತ ಬಿಸಿಲು, ಬೆಂಕಿಯಂತ ಶಾಖ ಎಲ್ಲವೂ ನಮ್ಮ ದೇಹದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದು ಜೀರ್ಣಕ್ರಿಯೆಯ ಮೇಲೆಯೂ ಹೆಚ್ಚು ಪರಿಣಾಮ ಉಂಟು ಮಾಡುತ್ತದೆ. ಅತಿಯಾದ ಜಿಡ್ಡು, ಮಸಾಲೆಯುಕ್ತ ಆಹಾರಗಳನ್ನು ಸೇವಿಸುವುದರಿಂದ ಇದು ಆರೋಗ್ಯವನ್ನು ಮತ್ತಷ್ಟು ಹದಗೆಡಿಸುವ ಸಂಭವವಿದೆ. 

ಇದನ್ನೂ ಓದಿ- ಬಾಯಿಹುಣ್ಣುಗಳ ಸಮಸ್ಯೆಗೆ ಪರಿಣಾಮಕಾರಿ ಮನೆಮದ್ದುಗಳು

ಆರೋಗ್ಯ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಹೆಚ್ಚು ನೀರಿನ ಅಂಶವುಳ್ಳ ಹಣ್ಣು, ತರಕಾರಿಗಳನ್ನು ನಮ್ಮ ಆಹಾರದ ಭಾಗವಾಗಿಸುವುದರಿಂದ ದೇಹವನ್ನು ತಂಪಾಗಿ ಇಡಬಹುದು. ಮಾತ್ರವಲ್ಲ, ಬಿರು ಬೇಸಿಗೆಯಲ್ಲಿ ಬಾಧಿಸುವ ಕೆಲವು ಆರೋಗ್ಯ ಸಮಸ್ಯೆಗಳಿಂದ ರಕ್ಷಣೆಯನ್ನೂ ಸಹ ಪಡೆಯಬಹುದು. ಅಂತಹ ಆಹಾರಗಳೆಂದರೆ.... 

ಸೌತೆಕಾಯಿ: 
ಬೇಸಿಗೆಯಲ್ಲಿ ಬಹಳ ಸುಲಭವಾಗಿ ಸಿಗುವ ಸೌತೆಕಾಯಿಯನ್ನು ಆಗಾಗ್ಗೆ ತಿನ್ನುತ್ತಿರಬೇಕು. ಇದೊಂದು ಹೈಡ್ರೇಟಿಂಗ್ ಹಾಗೂ ಕಡಿಮೆ ಕ್ಯಾಲೋರಿಯಾ ಆಹಾರವಾಗಿದೆ. ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕುವಲ್ಲಿ ಪರಿಣಾಮಕಾರಿ ಆಗಿರುವ ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ದೇಹವನ್ನು ತಂಪಾಗಿರಿಸುತ್ತದೆ. 

ಎಳನೀರು: 
ನೈಸರ್ಗಿಕ ತಂಪು ಪಾನೀಯವಾಗಿರುವ ಎಳನೀರಿನಲ್ಲಿ ಆರೋಗ್ಯಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ಸಮೃದ್ಧವಾಗಿವೆ. ಎಳನೀರಿನಲ್ಲಿರುವ ಸೋಡಿಯಮ್, ಮೇಗ್ನೀಸಿಯಮ್, ಪೊಟ್ಯಾಸಿಯಮ್ ಹಾಗೂ ಎಳೆಕ್ಟ್ರೋಲೈಟ್ ನಂತಹ ಅಂಶಗಳು ಬಿಸಿ ವಾತಾವರಣದಲ್ಲಿ ದೇಹವನ್ನು ಆರೋಗ್ಯಕರವಾಗಿರಿಸಲು ಸಹಾಯಕವಾಗಿದೆ. 

ಕಲ್ಲಂಗಡಿ ಹಣ್ಣು: 
ಎಲ್ಲರಿಗೂ ತಿಳಿದಿರುವಂತೆ ಕಲ್ಲಂಗಡಿ ಹಣ್ಣಿನಲ್ಲಿ ಶೇ. 90ರಷ್ಟು ನೀರಿನ ಅಂಶವಿದೆ. ಸಾಮಾನ್ಯವಾಗಿ ಕಳ್ಳಂಗಡಿಯ ಕೆಂಪಾದ ಭಾಗಕ್ಕಿಂತ ಬಿಳಿ ಭಾಗದಲ್ಲಿ ನೀರಿನ ಅಂಶ ಹೆಚ್ಚಾಗಿದೆ. ಅಷ್ಟೇ ಅಲ್ಲ, ಕಲ್ಲಂಗಡಿಯಲ್ಲಿ ವಿಟಮಿನ್ ಎ, ಸಿ, ಪೊಟ್ಯಾಸಿಯಮ್, ಎಲೆಕ್ಟ್ರೋಲೈಟ್ ಉತ್ತಮ ಪ್ರಮಾಣದಲ್ಲಿದ್ದು ಇದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಆಗಿದೆ.  

ಇದನ್ನೂ ಓದಿ- ಬಿರು ಬಿಸಿಲಿನಲ್ಲಿ ದಾಹ ನೀಗಿಸುವುದಷ್ಟೇ ಅಲ್ಲ ಡೊಳ್ಳು ಹೊಟ್ಟೆಯನ್ನು ಬೆಣ್ಣೆಯಂತೆ ಕರಗಿಸುತ್ತೆ ಎಳನೀರು 

ಮಜ್ಜಿಗೆ: 
ಮೊಸರು ಅಥವಾ ಮಜ್ಜಿಗೆಯಲ್ಲಿ ಪ್ರೋಬಯಾಟಿಕ್ ಅಧಿಕವಾಗಿದೆ. ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ದೇಹದ ಶಾಖವನ್ನು ನಿಗ್ರಹಿಸಲು ಪ್ರಯೋಜನಕಾರಿ ಆಗಿದೆ. ಬೇಸಿಗೆಯಲ್ಲಿ ನಿತ್ಯ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಉತ್ತಮ ಆರೋಗ್ಯವನ್ನು ಅನುಭವಿಸಬಹುದು. 

ಪುದೀನಾ ನೀರು: 
ಪುದೀನಾ ಸೊಪ್ಪಿನಲ್ಲಿರುವ ಮೆಂಥಾಲ್ ದೇಹವನ್ನು ತಂಪಾಗಿರಿಸುವುದರ ಜೊತೆಗೆ ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಬೇಸಿಗೆ ಕಾಲದಲ್ಲಿ ನೀರಿನಲ್ಲಿ ಪುದೀನಾ ನೆನೆಸಿಟ್ಟು ಆಗಾಗ್ಗೆ ಈ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಆಗದಂತೆ ತಡೆಯಬಹುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News