ನಿಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿ ರವೆ! ಇದರಲ್ಲಡಗಿದೆ ಹಲವು ಪ್ರಯೋಜನ
ರವೆ ಕಬ್ಬಿಣದಿಂದ ಸಮೃದ್ಧವಾಗಿದೆ ಮತ್ತು ಅದನ್ನು ತಿನ್ನುವುದರಿಂದ ರಕ್ತಹೀನತೆಯಂತಹ ಸಮಸ್ಯೆ ಉಂಟಾಗುವುದಿಲ್ಲ.
ನವದೆಹಲಿ: ನಮ್ಮ ಮನೆಯ ಅಡುಗೆಮನೆಯಲ್ಲಿ ಆರೋಗ್ಯ ಮತ್ತು ರುಚಿ ಎರಡರ ಅತ್ಯುತ್ತಮ ಕಾಂಬೊ ಇರುವಂತಹ ಅನೇಕ ವಿಷಯಗಳಿವೆ. ಅಂತಹ ಒಂದು ವಿಷಯವೆಂದರೆ ರವೆ. ಇದನ್ನು ನಾವು ರವೆ ಎಂದೂ ರವಾ ಎಂದು ಕರೆಯುತ್ತೇವೆ. ಎಲ್ಲರೂ ರವೆ ಉಪ್ಪಿಟ್ಟನ್ನು ಇಷ್ಟಪಡುತ್ತಾರೆ. ರವೆ ರುಚಿಯ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ, ಆದರೆ ಅದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ. ಅದರ ಕೆಲವು ಪ್ರಯೋಜನಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ.
- ರವೆಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಬಹಳ ಕಡಿಮೆ ಇರುತ್ತದೆ. ಈ ಕಾರಣದಿಂದಾಗಿ ಇದು ಮಧುಮೇಹ (diabetes) ರೋಗಿಗಳಿಗೆ ಉತ್ತಮ ಆಹಾರವಾಗಿದೆ.
- ನೀವು ತೂಕ (weight) ನಿಯಂತ್ರಣ ಮಾಡಲು ಪ್ರಯತ್ನಿಸುತ್ತಿದ್ದರೆ, ನಂತರ ನಿಮ್ಮ ಆಹಾರದಲ್ಲಿ ರವೆ ಸೇರಿಸಿ. ಇದು ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಗಮವಾಗಿಡಲು ಸಹಾಯ ಮಾಡುತ್ತದೆ.
ಕರೋನಾ ಜೊತೆಗಿನ ಯುದ್ಧದಲ್ಲಿ ಗೇಮ್ ಚೇಂಜರ್ ಆಗಲಿದೆಯೇ ಭಾರತದ 'ಫೆಲುಡಾ' !
- ದೇಹದಲ್ಲಿ ಶಕ್ತಿಯನ್ನು ಉಳಿಸಿಕೊಳ್ಳಲು, ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳು ಬೇಕಾಗುತ್ತವೆ ಮತ್ತು ಇವೆಲ್ಲವೂ ರವೆಗಳಲ್ಲಿ ಸಾಕಷ್ಟು ಇರುತ್ತವೆ. ಇದು ಹೃದಯ ಮತ್ತು ಮೂತ್ರಪಿಂಡಗಳ ದಕ್ಷತೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ ಮತ್ತು ಹೆಚ್ಚುವರಿಯಾಗಿ ಇದು ಸ್ನಾಯುಗಳು ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
-ರವೆಯಲ್ಲಿ ಕಬ್ಬಿಣದ (Iron) ಪ್ರಮಾಣ ಸಮೃದ್ಧವಾಗಿದೆ ಮತ್ತು ಅದನ್ನು ತಿನ್ನುವುದರಿಂದ ರಕ್ತಹೀನತೆಯಂತಹ ಸಮಸ್ಯೆ ಉಂಟಾಗುವುದಿಲ್ಲ. ಒಂದೊಮ್ಮೆ ಯಾರಿಗಾದರೂ ರಕ್ತಹೀನತೆ ಸಮಸ್ಯೆ ಇದ್ದರೆ ರವೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅದನ್ನು ಕಡಿಮೆ ಮಾಡಬಹುದು.
ಸಿಹಿತಿಂಡಿ ತಿನ್ನುವಾಗ ಈ ವಿಧಾನ ಅಳವಡಿಸಿಕೊಂಡರೆ ಹೆಚ್ಚಾಗಲ್ಲ ನಿಮ್ಮ ತೂಕ
- ರವೆಯಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇರುವುದಿಲ್ಲ, ಆದ್ದರಿಂದ ಕೊಲೆಸ್ಟ್ರಾಲ್ ಅಧಿಕವಾಗಿದ್ದರೆ ಅದನ್ನು ಕಡಿಮೆ ಮಾಡಲು ಇದು ಒಳ್ಳೆಯದು.