)
ಮಾಂಸಾಹಾರಿಗಳು ಚಿಕನ್, ಮಟನ್, ಮೀನುಗಳನ್ನು ವಾರಕ್ಕೆ ಒಮ್ಮೆಯಾದರೂ ತಿಂದೇ ತಿನ್ನುತ್ತಾರೆ. ಇತ್ತೀಚೆಗೆ ಚಿಕನ್ ಲಿವರ್ ಹಾಗೂ ಮಟನ್ ಲಿವರ್ ತಿನ್ನುವವರು ಅಧಿಕವಾಗುತ್ತಿದ್ದಾರೆ. ಇವೆರಡೂ ಕೂಡ ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ ಆಹಾರಗಳು ಆಗಿವೆ. ಆದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ, ತಿನ್ನಲು ಯಾವುದು ಒಳ್ಳೆಯದು ಎಂಬುದರ ಕುರಿತ ಮಾಹಿತಿ ಇಲ್ಲಿ ನೀಡಲಾಗಿದೆ.
ಚಿಕನ್ ಲಿವರ್ ತಿನ್ನೊದರಿಂದ ದೇಹಕ್ಕೆ ಅನೇಕ ಅನುಕೂಲಗಳು ಇವೆ. ಚಿಕನ್ ಲಿವರ್ನಲ್ಲಿ ಕಬ್ಬಿಣ, ಸಲೆನಿಯಂ, ವಿಟಮಿನ್ ಎ, ಬಿ12, ಪೊಲೇಟ್, ಪ್ರೋಟಿನ್ಗಳು ಸಮೃದ್ಧವಾಗಿವೆ. ಇದರಲ್ಲಿರುವ ಸಲೆನಿಯಂ ಅಂಶ ಕ್ಯಾನ್ಸರ್ ಅಪಾಯವನ್ನು ತಡೆಯಲು ಸಹಾಯ ಮಾಡುತ್ತದೆ. ಜೊತೆಗೆ ವಿಟಮಿನ್ ಎ, ಬಿ12 ಕಣ್ಣಿನ ಹಾಗೂ ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತವೆ. ನೀವು ಮಧುಮೇಹಿಗಳು ಆಗಿದ್ರೆ ಸಕ್ಕರೆ ಮಟ್ಟವನ್ನ ನಿಯಂತ್ರಿಸುತ್ತೆ. ಬೇಯಿಸಿದ ಲಿವರ್ ತಿನ್ನುವುದರಿಂದ ದೇಹದಲ್ಲಿನ ಕೊಬ್ಬು ಕಡಿಮೆ ಆಗುತ್ತದೆ.
ಹಲವಾರು ಜನರು ಚಿಕನ್ ಲಿವರ್ಗಿಂತ ಮಟನ್ ಲಿವರ್ ತಿನ್ನಲು ಹೆಚ್ಚು ಇಷ್ಟ ಪಡುತ್ತಾರೆ. ಮಟನ್ ಹೆಚ್ಚಿಗೆ ಕೊಬ್ಬಿನಿಂದ ಕೂಡಿದ್ದರಿಂದ ಮೊದಲು ಅದನ್ನು ಬೇಯಿಸುವುದನ್ನು ಹಲವರು ಮಾಡುತ್ತಾರೆ. ಇದರಲ್ಲಿ ಜೀವಸತ್ವ ಎ, ಡಿ, ಬಿ12, ಸತು, ಪೊಟ್ಯಾಷಿಯಂ, ತಾಮ್ರದಂತಹ ಪೋಷಕಾಂಗಳು ಇವೆ. ಹೀಗಾಗಿ ಇದನ್ನು ತಿನ್ನುವುದರಿಂದ ದೇಹದಲ್ಲಿ ಆಮ್ಲಜನ ಪೂರೈಕೆ ಸುಧಾರಿಸುತ್ತದೆ.
ಕೆಲವೊಬ್ಬರಿಗೆ ದೇಹದಲ್ಲಿ ರಕ್ತ ಕಡಿಮೆಯಾಗಿ ರಕ್ತಹೀನತೆ ಕಾಡುತ್ತಿರುತ್ತದೆ. ಇಂತಹವರಿಗೆ ಮಟನ್ ಲಿವರ್ ಒಳ್ಳೆಯ ಆಹಾರವಾಗಿದೆ. ವಿಟಮಿನ್ ಬಿ12 ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸಿ ಸೋಂಕುಗಳಿಂದ ನಿಮ್ಮನ್ನು ರಕ್ಷಣೆ ಮಾಡುತ್ತದೆ. ಇನ್ನು ಚಿಕನ್, ಮಟನ್ ಲಿವರ್ ಅನ್ನು ಯಾರು ತಿನ್ನಬಾರದು ಎಂದರೆ, ಕಿಡ್ನಿ ಸ್ಟೋನ್ ಇದ್ದವರು, ಕೊಲೆಸ್ಟ್ರಾಲ್ನಿಂದ ಬಳಲುತ್ತಿರವವರು, ಹೃದಯ ಸಂಬಂಧಿ ಕಾಯಿಲೆ ಇರುವವರು, ಗರ್ಭಿಣಿಯರು ಇವುಗಳನ್ನು ತಿನ್ನಲೇಬಾರದು ಎಂದು ಹೇಳಲಾಗುತ್ತದೆ.