)
Uric Acid Home Remedies: ಬದಲಾದ ಜೀವನ ಶೈಲಿಯಲ್ಲಿ ಕಳಪೆ ಆಹಾರಪದ್ದತಿ, ವೇಗದ ಬದುಕಿನಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಯೂರಿಕ್ ಆಸಿಡ್ ಸಮಸ್ಯೆಯೂ ಒಂದು. ಯೂರಿಕ್ ಆಸಿಡ್ ಸಮಸ್ಯೆ ಇದ್ದವರಲ್ಲಿ ಕೀಲುಗಳಲ್ಲಿ ಯೂರಿಕ್ ಆಮ್ಲ ಹರಳುಗಳ ರೂಪದಲ್ಲಿ ಸಂಗ್ರಹಗೊಂಡು ಅತೀವವಾದ ನೋವನ್ನು ಉಂಟು ಮಾಡುತ್ತದೆ.
ಮೊದಲೇ ತಿಳಿಸಿದಂತೆ ಕಳಪೆ ಆಹಾರಪದ್ದತಿ, ಜೀವನಶೈಲಿಯಿಂದ ಯೂರಿಕ್ ಆಮ್ಲ ರೂಪುಗೊಳ್ಳುತ್ತದೆ. ಉದಾಹರಣೆಗೆ, ಕೆಂಪು ಮಾಂಸ ಮತ್ತು ಆಲ್ಕೋಹಾಲ್ನಂತಹ ಆಹಾರಗಳಲ್ಲಿ ಯತೇಚ್ಛವಾಗಿರುವ ಪ್ಯೂರಿನ್ಗಳನ್ನು ಒಡೆಯುವಾಗ ದೇಹದಲ್ಲಿ ಯೂರಿಕ್ ಆಮ್ಲವು ರೂಪುಗೊಳ್ಳುತ್ತದೆ. ಆದಾಗ್ಯೂ, ಔಷಧಿಗಳ ಬದಲಿಗೆ ಕೆಲವು ಆಹಾರಗಳ ಸಹಾಯದಿಂದ ನೈಸರ್ಗಿಕವಾಗಿ ಕೀಲುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಮ್ಲವನ್ನು ಕರಗಿಸಬಹುದು.
ನಿಂಬೆ ನೀರು:
ನಿಂಬೆಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದಲ್ಲಿನ ಯೂರಿಕ್ ಆಸಿಡ್ ಅನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಜರ್ನಲ್ ಆಫ್ ಕ್ಲಿನಿಕಲ್ ಬಯೋಕೆಮಿಸ್ಟ್ರಿ ಅಂಡ್ ನ್ಯೂಟ್ರಿಷನ್ನಲ್ಲಿ ಪ್ರಕಟವಾದ 2017ರ ಅಧ್ಯಯನದ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧ ಓಳು ನಿಂಬೆ ರಸವನ್ನು ಹಿಂಡಿ ಮಿಕ್ಸ್ ಮಡಿ ಕುಡಿದರೆ ಕೆಲವೇ ನಿಮಿಷಗಳಲ್ಲಿ ಕೀಲುಗಳಲ್ಲಿ ಹರಳುಗಟ್ಟಿದ ಯೂರಿಕ್ ಆಸಿಡ್ ಕರಗಿ ನೀರಾಗುತ್ತದೆ ಎನ್ನಲಾಗಿದೆ.
ಕೊತ್ತಂಬರಿ ಬೀಜ:
ಕೊತ್ತಂಬರಿ ಬೀಜದಲ್ಲಿ ಉರಿಯೂತವನ್ನು ನಿವಾರಿಸುವ ಗುಣವಿದೆ, ಅಲ್ಲದೆ, ಇದು ನೈಸರ್ಗಿಕ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುವುದರಿಂದ ಗೌಟ್/ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಇದು ದಿವ್ಯೌಷಧವಾಗಿದೆ. ಕೊತ್ತಂಬರಿ ಬೀಜ ಬಳಸಿ ಕಷಾಯ ತಯಾರಿಸಿ ಕುಡಿಯುವುದು ಗೌಟ್ ಸಮಸ್ಯೆ ಇದ್ದವರಿಗೆ ವರದಾನಕ್ಕಿಂತ ಕಡಿಮೆ ಇಲ್ಲ.
ಗ್ರೀನ್ ಟೀ:
ಕ್ಯಾಟೆಚಿನ್ಗಳಲ್ಲಿ ಸಮೃದ್ಧವಾಗಿರುವ ಗ್ರೀನ್ ಟೀ ಕೇವಲ ತೂಕ ಇಳಿಕೆಗಾಗಿ ಮಾತ್ರವಲ್ಲ, ಇದರಲ್ಲಿರುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಕೆಲವೇ ಕ್ಷಣದಲ್ಲಿ ಕೀಲುಗಳಲ್ಲಿ ಹರಳು ಗಟ್ಟಿದ ಯೂರಿಕ್ ಆಸಿಡ್ ಕರಗಿಸಲು ಪರಿಣಾಮಕಾರಿ ಆಗಿದೆ. ಗೌಟ್ ಸಮಸ್ಯೆ ಇದ್ದವರು, ದಿನಕ್ಕೆ ಎರಡು ಬಾರಿ ಗ್ರೀನ್ ಟೀ ಕುಡಿಯುವುದು ಉತ್ತಮ ಆರೋಗ್ಯವನ್ನು ಸಹ ಬೆಂಬಲಿಸುತ್ತದೆ.
ಸೌತೆಕಾಯಿ:
ಎಲ್ಲಾ ಋತುಗಳಲ್ಲೂ ತುಂಬಾ ಸುಲಭವಾಗಿ ಲಭ್ಯವಿರುವ ಸೌತೆಕಾಯಿ ಹೆಚ್ಚಿನ ನೀರನ್ನು, ಜೊತೆಗೆ ಉತ್ತಮ ಪ್ರಮಾಣದಲ್ಲಿ ಪೊಟ್ಯಾಸಿಯಮ್ ಅನ್ನು ಸಹ ಒಳಗೊಂಡಿರುತ್ತದೆ. ದಿನವಿಡೀ, ಆಗಾಗ್ಗೆ, ಸೌತೆಕಾಯಿ ತಿನ್ನುವುದರಿಂದ ಇದು ದೇಹದಲ್ಲಿ ಯೂರಿಕ್ ಆಮ್ಲದ ಹರಳುಗಳ ರಚನೆಯನ್ನು ತಡೆಯುವಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಲಿದೆ.
ಸೇಬು:
ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರ ಇಡಬಹುದು ಎಂದು ನೀವು ಕೇಳಿರಬಹುದು. ಫೈಬರ್ ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿರುವ ಸೇಬಿನ ಸೇವನೆಯಿಂದ ದೇಹದಲ್ಲಿ ಯೂರಿಕ್ ಆಮ್ಲದ ರಚನೆಯನ್ನು ತಡೆಯಬಹುದಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.