Natural hair Dye: ಬುಡದಿಂದಲೇ ಕೂದಲನ್ನು ಕಪ್ಪಾಗಿಸಿ ಮತ್ತೆ ಬಿಳಿ ಕೂದಲು ಬರದಂತೆ ತಡೆಯಲು, ಕೊಬ್ಬರಿ ಎಣ್ಣೆಗೆ ಈ ಮೂರು ಪದಾರ್ಥ ಬೆರೆಸಿ ಹಚ್ಚಿ

White Hair: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಬಿಳಿ ಕೂದಲಿನ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ, ಅತೀ ಸಣ್ಣ ವಯಸ್ಸಿನಲ್ಲಿಯೇ ಯುವಕ ಹಾಗೂ ಯುವತಿಯರಿಗೆ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತಿದೆ. ಈ ಸಮಸ್ಯೆಗೆ ಜೀವನಶೈಲಿ, ಮಾಲಿನ್ಯ, ನೀರು ಸೇರಿ ಹಲವಾರು ಕಾರಣಗಳಿರಬಹುದು.   

Written by - Zee Kannada News Desk | Last Updated : Mar 25, 2025, 11:27 AM IST
  • ಹೇರ್‌ ಡೈ ದುಬಾರಿ ಹೇರ್‌ ಟ್ರೀಟ್‌ಮೆಂಟ್‌ನಂತಹ ಹಲವಾರು ವಿಧಾನಗಳನ್ನು ಬಳಸುತ್ತಾರೆ.
  • ನಿಮಗೆ ಬುಡದಿಂದಲೇ ಕಪ್ಪು ಕೂದಲು ಬೇಕೆಂದಲ್ಲಿ ನೀವು ಕೆಲವು ಮನೆಮದ್ದುಗಳನ್ನು ಪಾಲಿಸಲೇ ಬೇಕು.
  • ಈ ರೀತಿ ಮನೆಯಲ್ಲಿಯೇ ನಾವು ಕೆಲವು ಮನೆಮದ್ದುಗಳನ್ನು ಪಾಲಿಸುವುದರಿಂದ ಬಿಳಿ ಕೂದಲನ್ನು ತಡೆದು ಹಾಕಬಹುದು.
Natural hair Dye: ಬುಡದಿಂದಲೇ ಕೂದಲನ್ನು ಕಪ್ಪಾಗಿಸಿ ಮತ್ತೆ ಬಿಳಿ ಕೂದಲು ಬರದಂತೆ ತಡೆಯಲು, ಕೊಬ್ಬರಿ ಎಣ್ಣೆಗೆ ಈ ಮೂರು ಪದಾರ್ಥ ಬೆರೆಸಿ ಹಚ್ಚಿ

Natural Hair Dye: ಸಾಮಾನ್ಯವಾಗಿ ಬಿಳಿ ಕೂದಲನ್ನು ಹೋಗಲಾಡಿಸಲು ಜನರು ರಾಸಾಯನಿಕಗಳ ಮೊರೆ ಹೋಗುತ್ತಾರೆ, ಹೇರ್‌ ಡೈ ದುಬಾರಿ ಹೇರ್‌ ಟ್ರೀಟ್‌ಮೆಂಟ್‌ನಂತಹ ಹಲವಾರು ವಿಧಾನಗಳನ್ನು ಬಳಸುತ್ತಾರೆ. ಇವೆಲ್ಲವೂ ಕೇವಲ ತಾತ್ಕಾಲಿಕವಷ್ಟೇ, ಇವುಗಳನ್ನು ಬಳಸುವುದರಿಂದ ಕೇವಲ ಕೆಲ ತಿಂಗಳುಗಳವರೆಗೆ ಕೂದಲು ಕಪ್ಪಾಗಿರಲು ಸಾಧ್ಯ, ನಂತರ ಮತ್ತೆ ನೀವು ಹೇರ್‌ ಕಲರ್‌ ಅಥವಾ ಟ್ರೀಟ್‌ಮೆಂಟ್‌ನ ಮೊರೆ ಹೋಗಬೇಕಾಗುತ್ತದೆ.

Add Zee News as a Preferred Source

ಆದರೆ, ಬಿಳಿ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಿ, ನಿಮಗೆ ಬುಡದಿಂದಲೇ ಕಪ್ಪು ಕೂದಲು ಬೇಕೆಂದಲ್ಲಿ ನೀವು ಕೆಲವು ಮನೆಮದ್ದುಗಳನ್ನು ಪಾಲಿಸಲೇ ಬೇಕು. ಹೌದು, ನಮ್ಮ ಸುತ್ತ ಮುತ್ತ ಇರುವ ವಸ್ತುಗಳನ್ನು, ಇಲ್ಲವೆಂದರೆ ನಮ್ಮ ಅಡುಗೆ ಮನೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವ ಪದಾರ್ಥಗಳೇ ನಮ್ಮ ಕೂದಲನ್ನು ಕಪ್ಪಾಗಿಸುವ ಗುನವನ್ನು ಹೊಂದಿವೆ ಎಂದು ತಿಳಿಯದೆ ನಾವು ರಾಸಾಯನಿಕಗಳಿಗೆ ಹಣ ಸುರಿಯುತ್ತೇವೆ.

ಇದನ್ನೂ ಓದಿ: ಹಾರ್ಟ್‌ಅಟ್ಯಾಕ್‌ ಆಗದಂತೆ ತಡೆಯುತ್ತೆ ಬೇಸಿಗೆಯಲ್ಲಿ ಮಾತ್ರ ಸಿಗುವ ಅಪರೂಪದ ಹಣ್ಣು! ಕ್ಯಾನ್ಸರ್‌ ರೋಗಕ್ಕೂ ಇದೇ ಮದ್ದು..

ಈ ರೀತಿ ಮನೆಯಲ್ಲಿಯೇ ನಾವು ಕೆಲವು ಮನೆಮದ್ದುಗಳನ್ನು ಪಾಲಿಸುವುದರಿಂದ ಬಿಳಿ ಕೂದಲನ್ನು ತಡೆದು ಹಾಕಬಹುದು, ಅಷ್ಟೇ ಅಲ್ಲದೆ ಮತ್ತೆ ಬಿಳಿ ಕೂದಲು ಬರದಂತೆ ತಡೆಯಬಹುದು. 

ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವುದು ಹೇಗೆ:
ನೈಸರ್ಗಿಕವಾಗಿ ನಿಮಗೆ ಕೂದಲನ್ನು ಕಪ್ಪಾಗಿಸಲು ಯಾವುದೇ ರೀತಿಯ ದುಬಾರಿ ಪದಾರ್ಥಗಳು ಬೇಕಾಗುವುದಿಲ್ಲ, ಕೇವಲ ನಿಮ್ಮ ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ನಾವು ಕೂದಲನ್ನು ಕಪ್ಪಾಗಿಸಬಹುದು.

ಇದನ್ನೂ ಓದಿ: ಕತ್ತೆ ಹಾಲಿನ ʼಈʼ ಪ್ರಯೋಜನಗಳನ್ನ ತಿಳಿದ್ರೆ ಇಂದಿನಿಂದಲೇ ಹುಡುಕಿ ತಂದು ಕುಡಿಯುತ್ತೀರಿ!!

ಬೇಕಾಗುವ ಪದಾರ್ಥಗಳು: 
ಆಮ್ಲಾ ಪುಡಿ -1 ಟೀ ಚಮಚ
ಕಲೋಂಜಿ ಬೀಜಗಳು -3 ರಿಂದ 4 ಟೀ ಚಮಚ
ಭೃಂಗರಾಜ ಪುಡಿ -1 ಟೀ ಚಮಚ
ತೆಂಗಿನ ಎಣ್ಣೆ - 1/2 ಟೀ ಚಮಚ

ಇದನ್ನೂ ಓದಿ: ಅಂಜೂರ ಹಣ್ಣು ನಿಜಕ್ಕೂ ಮಧುಮೇಹ ನಿಯಂತ್ರಿಸುತ್ತದೆಯೇ? ತಜ್ಞರು ಹೇಳುವುದೇನು?

ತಯಾರಿಸುವ ವಿಧಾನ: 
• ಮೊದಲಿಗೆ ಒಂದು ಬಾಣಲೆಯಲ್ಲಿ ಅರ್ಧ ಟೀ ತೆಂಗಿನ ಎಣ್ಣೆಯನ್ನು ಹಾಕಿ ಅದಕ್ಕೆ ಕಲೋಜಿ ಬೀಜಗಳನ್ನು ಹಾಕಿ ಹುರಿದುಕೊಳ್ಳಿ.

• ಸಲ್ಪ ಕಾಲ ಇದನ್ನು ತಣ್ಣಗಾಗಲು ಬಿಟ್ಟು ಇದನ್ನು ನಯವಾಗಿ ರುಬ್ಬಿಕೊಳ್ಳಿ.

• ಈ ಪೇಸ್ಟ್‌ಗೆ ಸಮಾನ ಪ್ರಮಾಣಗಳಲ್ಲಿ ಆಮ್ಲಾ ಪುಡಿ ಹಾಗೂ ಭೃಂಗರಾಜ್‌ ಪುಡಿಯನ್ನು ಬೆರೆಸಿ ಚೆನ್ನಾಗಿ ಮಿಕ್ಸ್‌ ಮಾಡಿ.

• ಈ ಮಿಶ್ರಣ ಮೆತುವಾಗಿರಬೇಕು, ತುಂಬಾ ಗಟ್ಟಿಯಾಗಿ ಮುದ್ದೆಯ ಪದ ಇದ್ದರೆ ಇದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಬೆರೆಸಿಕೊಳ್ಳಿ.

• ಇದೀಗ ರುಬ್ಬಿಕೊಂಡ ಈ ಮಿಶ್ರಣವನ್ನು ಕನಿಷ್ಠ ಕಾಲು ಗಂಟೆಯಾದರೂ ಪಕ್ಕಕ್ಕೆ ಇರಿಸಬೇಕು. 

• ನಂತರ ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ, ಎರಡರಿಂದ ಮೂರು ಗಂಟೆಯ ಕಾಲ ಬಿಟ್ಟು ಕೂದಲನ್ನು ಬೆಚ್ಚಗಿನ ನೀರಿನಿಂದ ಚೆನ್ನಾಗಿ ತೊಳೆಯಿರಿ.

• ಈ ರೀತಿ ಮಿಶ್ರಣವನ್ನು ಮಾಡಿ ವಾರದಲ್ಲಿ ಕನಿಷ್ಠ ಎರಡು ಬಾರಿ ಹಚ್ಚುವುದರಿಂದ ಬೂದು ಕೂದಲು ಕ್ರಮೇಣ ಕಡಿಮೆಯಾಗುತ್ತದೆ ಮತ್ತೆ ಬೂದು ಕೂದಲು ಬೆಳೆಯದಂತೆ ತಡೆಯುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News