Jackfruit: ಹಲಸು ತಿಂದ ನಂತರ ಈ ಆಹಾರಗಳನ್ನು ಸೇವಿಸಲೇಬಾರದು
Jackfruit: ಹಲಸಿನ ಹಣ್ಣು ತಿನ್ನಲು ಬಲು ರುಚಿ. ಆದರೆ ಅದನ್ನು ತಿಂದ ನಂತರ ಕೆಲವು ಆಹಾರಗಳ ಸೇವನೆಯು ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ?
ಹಲಸಿನ ಹಣ್ಣಿನ ಸೇವನೆ ಬಳಿಕ ಇವುಗಳ ಬಗ್ಗೆ ಇರಲಿ ಎಚ್ಚರ: ಹಲಸಿನ ಹಣ್ಣೆಂದರೆ ಕೆಲವರಿಗೆ ಬಲು ಪ್ರಿಯ. ಆದರೆ, ಹಲಸಿನ ಹಣ್ಣನ್ನು ತಿಂದ ಬಳಿಕ ಕೆಲವು ಆಹಾರಗಳ ಸೇವನೆಯನ್ನು ತಪ್ಪಿಸಬೇಕು ಎಂದು ತಿಳಿದಿರುವುದು ಬಹಳ ಮುಖ್ಯ. ಇಲ್ಲವೇ, ಇದರಿಂದ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಹೌದು, ಹಲಸನ್ನು ಅಸಿದು ತಿನ್ನಬೇಕು ಎಂಬ ಮಾತಿದೆ. ಅಂದರೆ ಹೊಟ್ಟೆ ಖಾಲಿ ಇರುವಾಗ ಈ ಹಣ್ಣಿನ ಸೇವನೆ ಬಲು ಪ್ರಯೋಜನಕಾರಿ. ಅಂತೆಯೇ, ಹಲಸಿನ ಹಣ್ಣಿನ ಜೊತೆ ಅಥವಾ ಹಲಸಿನ ಹಣ್ಣನ್ನು ಸೇವಿಸಿದ ತಕ್ಷಣ ಕೆಲವು ಆಹಾರ ಪದಾರ್ಥಗಳನ್ನು ತಿನ್ನದೇ ಇರುವುದು ಉತ್ತಮ. ಇಲ್ಲವೇ, ಆರೋಗ್ಯ ಹದಗೆಡಬಹುದು. ಹಾಗಾದರೆ, ಹಲಸಿನ ಹಣ್ಣಿನ ಸೇವನೆ ಬಳಿಕ ಯಾವ ಆಹಾರಗಳಿಂದ ಅಂತರ ಕಾಯ್ದುಕೊಂಡರೆ ಉತ್ತಮ ಎಂದು ತಿಳಿಯೋಣ...
ಇದನ್ನೂ ಓದಿ- Skin Care Mistakes: ಮೊಡವೆಗಳಿಂದ ಮುಕ್ತಿ ಬೇಕೆಂದರೆ ಇಂದೇ ನಿಮ್ಮ ಈ ಅಭ್ಯಾಸ ಬದಲಿಸಿ
ಹಲಸಿನ ಹಣ್ಣಿನ ಸೇವನೆ ನಂತರ ಇವುಗಳ ಸೇವನೆಯನ್ನು ತಪ್ಪಿಸಿ:
ಹಲಸಿನ ಹಣ್ಣನ್ನು ತಿಂದು ನಂತರ ಎಂದಿಗೂ ಸಹ ಹಾಲು ಸೇವಿಸಬೇಡಿ:
ಕೆಲವರು ಹಲಸಿನ ಹಣ್ಣನ್ನು ತಿಂದು ಬಳಿಕ ಹಾಲು ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಈ ತಪ್ಪನ್ನು ಎಂದಿಗೂ ಮಾಡಬೇಡಿ. ಇದು ನಿಮ್ಮ ಆರೋಗ್ಯವನ್ನು ಹದಗೆಡಿಸಬಹುದು. ಹಲಸಿನ ಹಣ್ಣನ್ನು ತಿಂದ ಬಳಿಕ ಹಾಲು ಸೇವಿಸುವುದರಿಂದ ಜೀರ್ಣಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಬಹುದು. ಇದು ಚರ್ಮಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳನ್ನೂ ಉಂಟು ಮಾಡಬಹುದು ಎಂದು ಹೇಳಲಾಗುತ್ತದೆ.
ಹಲಸಿನ ಹಣ್ಣಿನೊಂದಿಗೆ ಜೇನು ತುಪ್ಪ:
ಕೆಲವರು ಹಲಸಿನ ಹಣ್ಣಿನ ರಸಾಯನ ಮಾಡಿ ತಿನ್ನಲು ಇಷ್ಟಪಡುತ್ತಾರೆ. ಈ ರಸಾಯನಕ್ಕೆ ಜೇನುತುಪ್ಪವನ್ನು ಸೇರಿಸುತ್ತಾರೆ. ಆದರೆ, ಹಲಸಿನೊಂದಿಗೆ ಜೇನುತುಪ್ಪವನ್ನು ತಿನ್ನಬಾರದು. ಹಲಸಿನಹಣ್ಣಿನೊಂದಿಗೆ ಮಾತ್ರವಲ್ಲ ಹಲಸನ್ನು ತಿಂದ ಬಳಿಕವೂ ಜೇನುತುಪ್ಪವನ್ನು ಸೇವಿಸಬಾರದು. ಇದು ಆರೋಗ್ಯವನ್ನು ಹಾಲು ಮಾಡುತ್ತದೆ. ಹೀಗೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಮತ್ತ ಹೆಚ್ಚಾಗಬಹುದು. ಹಾಗಾಗಿ ಮಧುಮೇಹ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಲೇಬಾರದು.
ಇದನ್ನೂ ಓದಿ- Diabetes Diet: ಮಧುಮೇಹಿಗಳಿಗೆ ಅಪಾರ ಪ್ರಯೋಜನ ನೀಡಲಿದೆ ಈ ಬೀಜ
ಹಲಸಿನ ಹಣ್ಣನ್ನು ತಿಂದ ಬಳಿಕ ಪಪ್ಪಾಯಿಯಿಂದ ದೂರವಿರಿ :
ಹಲಸಿನ ಹಣ್ಣಿನ ಸೇವನೆ ನಂತರ ಪರಂಗಿ ಹಣ್ಣನ್ನು ತಿನ್ನಬಾರದು ಎಂದು ನಿಮಗೆ ತಿಳಿದಿದೆಯೇ? ಕೆಲವರು ಹಲಸಿನ ಹಣ್ಣನ್ನು ತಿಂದ ಬಳಿಕ ಪರಂಗಿ ಹಣ್ಣನ್ನು ತಿನ್ನುವುದರಿಂದ ಆಹಾರ ಜೀರ್ಣವಾಗುತ್ತದೆ ಎಂದು ಭಾವಿಸುತ್ತಾರೆ, ಆದರೆ ಹೀಗೆ ಮಾಡಿದರೆ ಅಜೀರ್ಣ ಸಮಸ್ಯೆ ನಿಮ್ಮನ್ನು ಕಾಡಬಹುದು. ಇದಲ್ಲದೆ, ನಿಮ್ಮ ದೇಹದಲ್ಲಿ ಉರಿಯೂತದ ಸಮಸ್ಯೆಯೂ ಉಂಟಾಗಬಹುದು ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.