ಎಚ್ಚರಿಕೆ: ಮೊಬೈಲ್‌ನಲ್ಲಿ Night Mode ತಂದೊಡ್ಡಲಿದೆ ಈ ಅಪಾಯ!

ಮೊಬೈಲ್‌ನಲ್ಲಿ ರಾತ್ರಿ ಮೋಡ್(Night Mode) ಅಪಾಯಕಾರಿ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ. ಈ ಮೋಡ್ ಈಗಾಗಲೇ ಮೊಬೈಲ್ ಫೋನ್‌ನಲ್ಲಿ ಇರುವುದರಿಂದ, ನಾವು ಏನೂ ಯೋಚಿಸದೆ ಫೋನ್ ಸೆಟ್ಟಿಂಗ್‌ಗಳಲ್ಲಿ ರಾತ್ರಿಯಿಡೀ Night Mode ಅನ್ನು ಆನ್ ಮಾಡುತ್ತೇವೆ. 

Last Updated : Dec 20, 2019, 11:19 AM IST
ಎಚ್ಚರಿಕೆ: ಮೊಬೈಲ್‌ನಲ್ಲಿ Night Mode ತಂದೊಡ್ಡಲಿದೆ ಈ ಅಪಾಯ! title=

ನವದೆಹಲಿ: ಮೊಬೈಲ್‌ನಲ್ಲಿ ರಾತ್ರಿ ಮೋಡ್(Night Mode) ಅಪಾಯಕಾರಿ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ. ಈ ಮೋಡ್ ಈಗಾಗಲೇ ಮೊಬೈಲ್ ಫೋನ್‌ನಲ್ಲಿ ಇರುವುದರಿಂದ, ನಾವು ಏನೂ ಯೋಚಿಸದೆ ಫೋನ್ ಸೆಟ್ಟಿಂಗ್‌ಗಳಲ್ಲಿ ರಾತ್ರಿಯಿಡೀ Night Mode ಅನ್ನು ಆನ್ ಮಾಡುತ್ತೇವೆ. ತಿಳಿ ಹಳದಿ ಪರದೆಯಲ್ಲಿ, ರಾತ್ರಿಯಲ್ಲಿ ಮೊಬೈಲ್ ಬಳಸುವಾಗಲೂ ನಮಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಇತ್ತೀಚಿನ ವರದಿಯು ನೈಟ್ ಮೋಡ್ ನಿಮ್ಮ ನಿದ್ರೆಗೆ ಮಾರಕವೆಂದು ಬಹಿರಂಗಪಡಿಸಿದೆ. ಇದು ಮಾತ್ರವಲ್ಲ, ಹಳದಿ ಬಣ್ಣದ ಪರದೆಯು ಕಣ್ಣುಗಳಿಗೆ ಹೆಚ್ಚು ಪ್ರಯೋಜನಕಾರಿಯಲ್ಲ ಎಂದು ಸಂಶೋಧನೆಯಲ್ಲಿಯೂ ಹೇಳಲಾಗಿದೆ.

ರಾತ್ರಿ ಮೋಡ್‌ಗಿಂತ(Night Mode) ನೀಲಿ ಮತ್ತು ಪ್ರಕಾಶಮಾನವಾದ ಪರದೆ ಉತ್ತಮ:
ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಇತ್ತೀಚಿನ ವರದಿಯ ಪ್ರಕಾರ, ಗಾಢ ಬಣ್ಣ ಅಥವಾ ನೀಲಿ ಪರದೆಯು ಕಣ್ಣುಗಳಿಗೆ ಹೆಚ್ಚು ಸಾಮಾನ್ಯವಾಗಿದೆ. ಇಲಿಗಳ ಮೇಲೆ ನಡೆಸಿದ ಸಂಶೋಧನೆಯ ಪ್ರಕಾರ, ನೈಟ್ ಮೋಡ್ ಅನ್ನು ಆನ್ ಮಾಡಿದ ನಂತರ, ಅವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದಿದೆ. ಅಂದರೆ, ನೀವು ರಾತ್ರಿಯಲ್ಲಿ ಕತ್ತಲೆಯಲ್ಲಿ ರಾತ್ರಿ ಮೋಡ್(Night Mode) ಅನ್ನು ಬಳಸಿದರೆ, ಅದರ ನಂತರ ನಿದ್ರೆ ಬರದಿರುವ ಸಾಧ್ಯತೆ ಹೆಚ್ಚು. ಇದಕ್ಕೆ ವಿರುದ್ಧವಾಗಿ, ಸಾಮಾನ್ಯ ಮೋಡ್‌ನ ಪ್ರಕಾಶಮಾನವಾದ ಪರದೆಯನ್ನು ನೋಡಿದರೂ, ಸಾಮಾನ್ಯ ನಿದ್ರೆ ಪಡೆಯುವ ಹೆಚ್ಚಿನ ಅವಕಾಶವಿದೆ ಎಂದು ಹೇಳಲಾಗಿದೆ.

ಇದರ ಹಿಂದಿನ ವೈಜ್ಞಾನಿಕ ಕಾರಣ?
ವಿಜ್ಞಾನಿಗಳ ಪ್ರಕಾರ ಕಣ್ಣಿನೊಳಗೆ ಮೆಲನೊಪ್ಸಿನ್ ಎಂಬ ಫೋಟೊಸೆನ್ಸಿಟಿವ್ ಪ್ರೋಟೀನ್ ವರ್ಣದ್ರವ್ಯವಿದೆ. ನೀಲಿ ಮತ್ತು ಗಾಢ ಬಣ್ಣಗಳೊಂದಿಗೆ ಮೊಲ್ಲನೋಪ್ಸಿನ್‌ಗಳು ಅತ್ಯಂತ ಸಹಾಯಕವಾಗಿವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಈ ಬಣ್ಣವನ್ನು ನೋಡುವುದರಿಂದ ಕಣ್ಣುಗಳಿಗೆ ಯಾವುದೇ ತೊಂದರೆ ಇಲ್ಲದಿರುವುದು. ಆದರೆ ಹಳದಿ ಮತ್ತು ಕಡಿಮೆ ಬೆಳಕು ಮೆಲನೊಪ್ಸಿನ್ ಅನ್ನು ಕಾಡುತ್ತದೆ. ಈ ಕಾರಣದಿಂದಾಗಿ, ಕಣ್ಣುಗಳು ವಿಚಲಿತವಾಗುತ್ತವೆ ಮತ್ತು ಇದು ನಿದ್ರಾ ಹೀನತೆಗೆ ಕಾರಣವಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಆದಾಗ್ಯೂ, ಮೊಬೈಲ್ ಮತ್ತು ಮನುಷ್ಯರಿಗೆ ಸಂಬಂಧಿಸಿದ ಇಂತಹ ಹಲವು ಸಂಶೋಧನೆಗಳನ್ನು ಮಾಡಲಾಗಿದೆ. ಇನ್ನೂ ಕೆಲ ಸಂಶೋಧನೆಗಳು ನಡೆಯುತ್ತಿವೆ. ಆದರೆ ಕೇವಲ ಕಣ್ಣುಗಳು ಮತ್ತು ಮೊಬೈಲ್‌ಗಳಿಗೆ ಸಂಬಂಧಿಸಿದ ಹೆಚ್ಚಿನ ಸಂಶೋಧನೆ ಇಲ್ಲ. ಈ ರೀತಿಯ ಸಂಶೋಧನೆಯು ಮೊಬೈಲ್ ಮೋಡ್ ಮತ್ತು ನಿದ್ರೆಯ ನಡುವೆ ಹೊಸ ಆವಿಷ್ಕಾರವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದೆ.

Trending News