ತೂಕ ಇಳಿಸಿಕೊಳ್ಳಲು ಯಾವುದೇ ವ್ಯಾಯಾಮ ಬೇಕಿಲ್ಲ! ಇವುಗಳನ್ನು ತಿಂದರೆ ಸಾಕು ಎಷ್ಟೇ ದಪ್ಪ ಇದ್ದರೂ ತೆಳ್ಳಗಾಗ್ತಿರಾ..!

 ಎಷ್ಟೋ ಜನ ತೂಕ ಇಳಿಸಿಕೊಳ್ಳಬೇಕು ಮತ್ತು ತಮ್ಮ ದೇಹವನ್ನು  ಸುಂದರವಾಗಿ, ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಅಂತಾ ಯೋಚಿಸುತ್ತಾರೆ. ಅದರಲ್ಲೂ ಹುಡುಗಿಯರಂತೂ ದೇಹ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ, ಇದಕ್ಕಂತಲೇ ದುಬಾರಿ ತೂಕ ಇಳಿಸುವ ಪ್ರೋಟೀನ್‌ ಡ್ರಿಂಕ್ಸ್ ಅಥವಾ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ  ಇಂತವುಗಳನ್ನು ಯಾವುದೇ ವೈದ್ಯರ ಸಲಹೆ ಇಲ್ಲದೇ ತೆಗೆದುಕೊಂಡರೆ ದೇಹಕ್ಕೆ ಅಡ್ಡ ಪರಿಣಾಮ ಆಗುವುದು ಹೆಚ್ಚು. ಆದ್ದರಿಂದ ನೀವೆನಾದರೂ ತೂಕ ಇಳಿಸಬೇಕು ಅಂದುಕೊಂಡಿದ್ದರೆ ನೈಸರ್ಗಿಕವಾಗಿಯೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. 

Written by - Yashaswini V | Edited by - Yashaswini V | Last Updated : Mar 11, 2025, 12:34 PM IST
  • ಬರೀ ಜಿಮ್ ಗೆ ಹೋಗಿ ವ್ಯಾಯಾಮ ಮಾಡುವ ಮೂಲಕ ದೇಹದಂಡಿಸಿದರೆ ಬೊಜ್ಜು ಕರಗುವುದಿಲ್ಲ
  • ಜೊತೆಗೆ ನಿಮ್ಮ ದೇಹಕ್ಕೆ ತೆಗೆದುಕೊಳ್ಳುವ ಆಹಾರವೂ ಸಹ ಬಹಳ ಮುಖ್ಯವಾಗುತ್ತದೆ
  • ನೀವೆನಾದರೂ ನಿಯಮಿತವಾಗಿ ಈ ಕೆಲವು ತೂಕ ಇಳಿಸಲು ಸಹಕಾರಿಯಾಗುವ ಆಹಾರವನನ್ನು ದಿನನಿತ್ಯ ಸೇವಿಸುತ್ತಾ ಬಂದಾಗ ಸುಲಭವಾಗಿ ದೇಹದ ತೂಕ ಇಳಿಸಿಕೊಂಡು ಆರೋಗ್ಯವಾಗಿ ಕಾಣಬಹುದು
ತೂಕ ಇಳಿಸಿಕೊಳ್ಳಲು ಯಾವುದೇ ವ್ಯಾಯಾಮ ಬೇಕಿಲ್ಲ! ಇವುಗಳನ್ನು ತಿಂದರೆ ಸಾಕು ಎಷ್ಟೇ ದಪ್ಪ ಇದ್ದರೂ ತೆಳ್ಳಗಾಗ್ತಿರಾ..!

Weight Loss Without Gym and Exercise:  ಎಷ್ಟೋ ಜನ ತೂಕ ಇಳಿಸಿಕೊಳ್ಳಬೇಕು ಮತ್ತು ತಮ್ಮ ದೇಹವನ್ನು  ಸುಂದರವಾಗಿ, ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಅಂತಾ ಯೋಚಿಸುತ್ತಾರೆ. ಅದರಲ್ಲೂ ಹುಡುಗಿಯರಂತೂ ದೇಹ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ, ಇದಕ್ಕಂತಲೇ ದುಬಾರಿ ತೂಕ ಇಳಿಸುವ ಪ್ರೋಟೀನ್‌ ಡ್ರಿಂಕ್ಸ್ ಅಥವಾ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ  ಇಂತವುಗಳನ್ನು ಯಾವುದೇ ವೈದ್ಯರ ಸಲಹೆ ಇಲ್ಲದೇ ತೆಗೆದುಕೊಂಡರೆ ದೇಹಕ್ಕೆ ಅಡ್ಡ ಪರಿಣಾಮ ಆಗುವುದು ಹೆಚ್ಚು. ಆದ್ದರಿಂದ ನೀವೆನಾದರೂ ತೂಕ ಇಳಿಸಬೇಕು ಅಂದುಕೊಂಡಿದ್ದರೆ ನೈಸರ್ಗಿಕವಾಗಿಯೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. 

Add Zee News as a Preferred Source

ಬರೀ ಜಿಮ್ ಗಳಿಗೆ ಹೋಗಿ ವ್ಯಾಯಾಮ ಮಾಡುವ ಮೂಲಕ ದೇಹದಂಡಿಸಿದರೆ ಬೊಜ್ಜು ಕರಗುವುದಿಲ್ಲ, ಇದರ ಜೊತೆಗೆ ನಿಮ್ಮ ದೇಹಕ್ಕೆ ತೆಗೆದುಕೊಳ್ಳುವ ಆಹಾರವೂ ಸಹ ಬಹಳ ಮುಖ್ಯವಾಗುತ್ತದೆ. ನೀವೆನಾದರೂ ನಿಯಮಿತವಾಗಿ ಈ ಕೆಲವು ತೂಕ ಇಳಿಸಲು ಸಹಕಾರಿಯಾಗುವ  ಆಹಾರವನನ್ನು ಸೇವಿಸುತ್ತಾ ಬಂದಾಗ ಸುಲಭವಾಗಿ ದೇಹದ ತೂಕ ಇಳಿಸಿಕೊಂಡು ಆರೋಗ್ಯವಾಗಿ ಮತ್ತು ಸುಂದರವಾಗಿ ಕಾಣಬಹುದು.

ಇದನ್ನೂ ಓದಿ- ಬೆಳಿಗ್ಗೆ ಎದ್ದ ತಕ್ಷಣ ಈ ಲಕ್ಷಣಗಳು ಕಂಡು ಬಂದರೆ 'ಡಯಾಬಿಟಿಸ್' ಇದೆ ಎಂದರ್ಥ! ನಿಮಗೂ ಹೀಗಾಗುತ್ತಿದ್ದರೆ ಕೂಡಲೇ ಬ್ಲಡ್ ಟೆಸ್ಟ್ ಮಾಡಿಸಿ..! 

ನಾವು ಸೇವಿಸುವ ಆಹಾರದಲ್ಲಿ ಆರೋಗ್ಯದ ದೃಷ್ಟಿಯಿಂದ ಪ್ರೋಟೀನ್ ಇರಲೇಬೇಕು. ಅಷ್ಟೇ ಅಲ್ಲ, ಇದು ತೂಕ ಇಳಿಸಲು ಸಹ ತುಂಬಾ ಸಹಕಾರಿಯಾಗುತ್ತದೆ. ಸ್ನಾಯುಗಳನ್ನು ಗಟ್ಟಿಯಾಗಿಸಲು, ಚಯಾಪಚನ ಕ್ರಿಯೆಯುನ್ನು ಸುಗಮಗೊಳಿಸಲು ಇದು ಬಹಳ ಮುಖ್ಯ. ಇನ್ನು ಪ್ರೋಟೀನ್ ಹೇರಳವಾಗಿರುವ ಆಹಾರವನ್ನು ನಾವು ದಿನನಿತ್ಯ ಸೇವಿಸಿದಾಗ ತೂಕ ಬೇಗ ಇಳಿಯುತ್ತದೆ.
  
ತೂಕ ಇಳಿಸಿಕೊಳ್ಳಲು ಹೆಚ್ಚು ಸಹಕಾರಿಯಾಗುವ  ಪ್ರೋಟೀನ್ ಸಮೃದ್ಧವಾಗಿರುವ ಆಹಾರಗಳು:- 
ಮೊಟ್ಟೆ:

ನೀವು ಒಂದು ಬೇಯಿಸಿದ ಮೊಟ್ಟೆಯನ್ನು ತಿಂದರೆ ಅದರಲ್ಲಿ ಸುಮಾರು 6 ಗ್ರಾಂ ಪ್ರೋಟೀನ್‌ ಇರುತ್ತದೆ. ಇದು ನಿಮ್ಮ ಸ್ನಾಯುಗಳ ಬೆಳವಣಿಗೆಗೆ ಹೆಚ್ಚು ಸಹಕಾರಿ ಮತ್ತು ಕೂದಲು ಬೆಳವಣಿಗೆಗೂ ಕೂಡ ಒಳ್ಳೆಯದು. ಬೆಳಗಿನ ಉಪಹಾರದಲ್ಲಿ ಮೊಟ್ಟೆ ಸೇವಿಸುವುದು ತೂಕ ಇಳಿಕೆಗೆ ಸಹಕಾರಿ ಆಗಲಿದೆ. 

ಚಿಕನ್: 
ಚಿಕನ್‌ನ ಎದೆಯಭಾಗದಿಂದ ಮಾಡಿದ ಖಾದ್ಯಗಳು ತೂಕ ಇಳಿಸಲು ಹೆಚ್ಚು ಸಹಕಾರಿಯಾಗುತ್ತವೆ, ಇದರ 100 ಗ್ರಾಂ ಮಾಂಸದಲ್ಲಿ 31 ಗ್ರಾಂ ಪ್ರೋಟೀನ್‌ ಇರುತ್ತದೆ ಮತ್ತು ಇದು ದೇಹದಲ್ಲಿ ಕೊಬ್ಬಿನಾಂಶವನ್ನು ಕರಗಿಸಲು ಸಹರಿಸುತ್ತದೆ. ಆಹಾರ ತಜ್ಞರ ಪ್ರಕಾರ, ಮಧ್ಯಾಹ್ನದ ಭೋಜನದ ಸಮಯದಲ್ಲಿ ಚಿಕನ್ ಸೇವಿಸುವುದರಿಂದ ವೇಗವಾಗಿ ತೂಕ ಇಳಿಸಬಹುದು

ಇದನ್ನೂ ಓದಿ- Belly Fat ಖರಗಿಸಲು 'ನೀರು' ಕುಡಿಯಲು ಈ ವಿಧಾನ ಅನುಸರಿಸಿ.. ಕೆಲವೇ ದಿನದಲ್ಲಿ ಚಪ್ಪಟೆಯಾಗುತ್ತೆ ಡೊಳ್ಳು ಹೊಟ್ಟೆ..!

ಯೋಗರ್ಟ್ ಮತ್ತು ಪನೀರ್:
ಇವೆರಡನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಯೋಗರ್ಟ್‌ ಅಥವಾ ಕೆನೆಮೊಸರು ಹೆಚ್ಚು ಕ್ಯಾಲ್ಸಿಯಂನ್ನು ಹೊಂದಿರುವುದರಿಂದ ನಿಮ್ಮ ದೇಹದ ಮೂಳೆಗಳನ್ನು ಗಟ್ಟಿಗೊಳಿಸಲು ಇದು ಹೆಚ್ಚು ಉಪಯುಕ್ತವಾಗಿದೆ. ಇದರೊಂದಿಗೆ ಕಾಟೇಜ್‌‌ ಚೀಸ್ ಎಂದು ಕರೆಯುವ ಪನೀರ್ ಸಹ ತೂಕ ಇಳಿಸಿಕೊಳ್ಳಲು ಬಹಳ ಮುಖ್ಯವಾಗಿದೆ ಮತ್ತು ಕಾಟೇಜ್ ಚೀಸ್ ಕ್ಯಾಲ್ಸಿಯಂ ಹಾಗೂ ಪ್ರೊಟೀನ್ ನ ಉತ್ತಮ ಮೂಲವಾಗಿದೆ.

ನವಣೆ ಮತ್ತು ಇತರ ಕಾಳುಗಳು:
ನವಣೆಯಲ್ಲಿ ದೇಹಕ್ಕೆ ಬೇಕಾದ ಎಲ್ಲಾ ಅಮೈನೋ ಆಮ್ಲಗಳು ಇರುತ್ತದೆ. ಇದು ದೇಹದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುವುದರೊಂದಿಗೆ, ಪದೇ ಪದೇ ಹಸಿವಾಗುವುದನ್ನು ಕಡಿಮೆ ಮಾಡುತ್ತದೆ. ಇನ್ನು ಕಡಲೆ ಬೇಳೆ ಮತ್ತು ಹೆಸರುಕಾಳು ವಿವಿಧ ಪೋಷಕಾಂಶ ನೀಡುವ ಧಾನ್ಯಗಳು  ದೇಹದ ತೂಕ ಇಳಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದಾಗ್ಯೂ, ಯಾವುದನ್ನೂ ಸಹ ಅತಿಯಾಗಿ ತಿನ್ನದಿರುವುದು ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.  

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News