ಜಿಮ್, ಡಯಟ್ ಬೇಕಿಲ್ಲ..! ನೀರಿನಲ್ಲಿ ಈ ಎಲೆ ಬೆರೆಸಿ ಕುಡಿದ್ರೆ ಬೆಣ್ಣೆಯಂತೆ ಕರಗುತ್ತೆ ಡೊಳ್ಳು ಹೊಟ್ಟೆ...!

Weight Loss Tips: ದೇಹದ ತೂಕ ಇಳಿಸುವುದು ಅಷ್ಟು ಸುಲಭದ ವಿಷಯವಲ್ಲ ಎಂಬುದು ಅದರ ಪ್ರಯತ್ನದಲ್ಲಿರುವವರಿಗೆ ಮಾತ್ರವೇ ಗೊತ್ತಿರುವ ವಿಷಯ.  ಇಷ್ಟವಾದ ತಿನಿಸುಗಳನ್ನು ತ್ಯಾಗ ಮಾಡಿ ಕಠಿಣವಾದ ಡಯಟ್, ವ್ಯಾಯಾಮ ಮಾಡಿದರೂ ಸಹ ತೂಕ ಇಳಿಕೆ ಆಗುವುದೇ ಇಲ್ಲ. ಆದರೆ, ಸುಲಭವಾಗಿ ಲಭ್ಯವಿರುವ ಒಂದು ಎಲೆ/ಸೊಪ್ಪಿನ ಸಹಾಯದಿಂದ ಕಠಿಣಾತಿ ಕಠಿಣ ಕೊಬ್ಬನ್ನೂ ಸಹ ಮಂಜಿನಂತೆ ಕರಗಿಸಬಹುದು. 

Written by - Yashaswini V | Last Updated : Apr 21, 2025, 02:34 PM IST
  • ಪುದೀನ ಸೊಪ್ಪು ಆಹಾರ ರುಚಿಯಷ್ಟೇ ಹೆಚ್ಚಿಸುವುದಿಲ್ಲ...
  • ಪುದೀನ ಸೊಪ್ಪಿನ ಬಳಕೆಯಿಂದ ಆರೋಗ್ಯವೂ ವೃದ್ಧಿಯಾಗುತ್ತದೆ.
  • ನೀವು ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿದ್ದರೆ ಈ ನೀರು ತುಂಬಾ ಲಾಭದಾಯಕವಾಗಿದೆ.
ಜಿಮ್, ಡಯಟ್ ಬೇಕಿಲ್ಲ..! ನೀರಿನಲ್ಲಿ ಈ ಎಲೆ ಬೆರೆಸಿ ಕುಡಿದ್ರೆ ಬೆಣ್ಣೆಯಂತೆ ಕರಗುತ್ತೆ ಡೊಳ್ಳು ಹೊಟ್ಟೆ...!

Weight Loss Drinks: ಓಟದ ಬದುಕು, ಒತ್ತಡಭರಿತ ಜೀವನಶೈಲಿಯಿಂದಾಗಿ ತೂಕ ಹೆಚ್ಚಳ, ಸ್ಥೂಲಕಾಯತೆ ಸಾಮಾನ್ಯ ಸಮಸ್ಯೆ ಆಗಿದೆ. ಕಠಿಣ ಆಹಾರ ಪದ್ದತಿ ಅನುಸರಿಸಿ ತಿನ್ನುವ ಆಹಾರದಿಂದ ಉಪ್ಪು, ಸಕ್ಕರೆ, ಎಣ್ಣೆ ಇತ್ಯಾದಿಯನ್ನು ದೂರ ಇಟ್ಟರೂ, ಜಿಮ್, ವ್ಯಾಯಾಮ ಎಂದು ಎಷ್ಟೇ ಬೆವರು ಸುರಿಸಿದರೂ ಸಹ ದೇಹದ ತೂಕ ಇಳಿಸಿಕೊಳ್ಳುವುದು, ಡೊಳ್ಳಾದ ಹೊಟ್ಟೆಯನ್ನು ಕರಗಿಸುವುದು ಮಾತ್ರ ಸುಲಭದ ವಿಷಯ ಅಲ್ಲವೇ ಅಲ್ಲ ಎಂಬುದು ಹಲವರ ವಾದ. ಆದರೆ, ಬಹಳ ಸುಲಭವಾಗಿ ಸಿಗುವ ಪುದೀನ ಸೊಪ್ಪಿನಿಂದ ತೂಕ ಇಳಿಕೆ ತುಂಬಾ ಸುಲಭ ಎಂದು ಆಯುರ್ವೇದ ಹೇಳುತ್ತದೆ. 

Add Zee News as a Preferred Source

ಹೌದು, ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಜಿಮ್, ಡಯಟ್ ಯಾವುದೂ ಇಲ್ಲದೆ ಸೊಂಟದ ಸುತ್ತ ಶೇಖರವಾಗಿರುವ ಕೊಬ್ಬನ್ನು ಕರಗಿಸಲು ಪುದೀನ ಸೊಪ್ಪಿನ ನೀರು ಸಹಕಾರಿ ಆಗಬಲ್ಲದು ಎಂದು ಹೇಳಲಾಗುತ್ತದೆ. ಈ ಕುರಿತಂತೆ ಇಲ್ಲಿದೆ ಸಂಪೂರ್ಣ ಮಾಹಿತಿ... 

ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ ಪುದೀನಾ ನೀರು ತುಂಬಾ ಲಾಭದಾಯಕ ಎಂದು ಸಾಬೀತುಪಡಿಸುವುದರಲ್ಲಿ ಅನುಮಾನವೇ ಇಲ್ಲ. ಹೌದು, ಪುದೀನಾ ನೀರು ಅತ್ಯುತ್ತಮವಾದ ಡಿಟಾಕ್ಸ್ ನೀರಾಗಿದೆ, ಇದರಲ್ಲಿ ಕಬ್ಬಿಣದ ಅಂಶ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ, ಬೇಸಿಗೆಯಲ್ಲಿ ಪುದೀನ ನೀರನ್ನು ಕುಡಿಯುವುದು ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಆರೋಗ್ಯ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ಪುದೀನ ವಾಟರ್ ಕುಡಿಯುವುದರಿಂದ ಇದು ದೇಹವನ್ನು ಡಿಟಾಕ್ಸ್ ಮಾಡುತ್ತದೆ. ಜೊತೆಗೆ ಸುಸ್ತು, ಆಯಾಸ ಇಲ್ಲದೆ ಲವಲವಿಕೆಯಿಂದ ಇರಲು ಕೂಡ ಸಹಕಾರಿ ಆಗಿದೆ. ಮಾತ್ರವಲ್ಲ, ಆರೋಗ್ಯಕರವಾಗಿ ತೂಕ ಇಳಿಕೆಯಾಗುತ್ತದೆ. 

ಇದನ್ನೂ ಓದಿ- ಆಧುನಿಕ ಜೀವನಶೈಲಿಯಲ್ಲಿ ಒತ್ತಡ ನಿರ್ವಹಣೆಗೆ ಪತಂಜಲಿ ಯೋಗಾಭ್ಯಾಸ ಪ್ರಬಲ ಸಾಧನ..! ಹೇಗ್ ಗೊತ್ತಾ....

ಪುದೀನಾ ನೀರು ಕುಡಿಯುವುದರಿಂದ ದೇಹಕ್ಕಿರುವ ಇತರ ಪ್ರಯೋಜನಗಳು: 
ಪುದೀನ ನೀರು ಕುಡಿಯುವುದರಿಂದ ಡೊಳ್ಳು ಹೊಟ್ಟೆ ಕರಗುವುದಷ್ಟೇ ಅಲ್ಲ ಇದು ನಿಮ್ಮ ಹಾರ್ಮೋನ್‌ಗಳನ್ನು ಬ್ಯಾಲೆನ್ಸ್ ಮಾಡುತ್ತದೆ. ಜೊತೆಗೆ ಪಿಸಿಒಎಸ್, ಪಿಸಿಓಡಿ, ಮೆನೋಪಸ್, ಥೈರಾಯ್ಡ್‌ ಸಮಸ್ಯೆ ತಡೆಗಟ್ಟಲು, ಹಾರ್ಮೋನ್‌ ಸಮತೋಲನದಲ್ಲಿಡಲು ಸಹ ಸಹಕಾರಿ ಆಗಿದೆ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳಲು ಕೂಡ ಇದು ಅತ್ಯುತ್ತಮ ಪಾನೀಯವಾಗಿದೆ. 

ಇದನ್ನೂ ಓದಿ- ಕರಿಬೇವು ರುಚಿಯ ಜೊತೆಗೆ ಮಧುಮೇಹ ಮತ್ತು ರಕ್ತದೊತ್ತಡ ನಿಯಂತ್ರಣಕ್ಕೂ ವರದಾನ..!

ತೂಕ ಇಳಿಕೆಗಾಗಿ ಪುದೀನ ನೀರನ್ನು ತಯಾರಿಸುವುದು ಹೇಗೆ? 
ಒಂದು ಜಗ್‌ನಲ್ಲಿ ನೀರು ತುಂಬಿಟ್ಟು ಅದರಲ್ಲಿ ಒಂದು ಸಣ್ಣ ಹಿಡಿಯಷ್ಟು ಚೆನ್ನಾಗಿ ತೊಳೆದ ಪುದೀನ ಸೊಪ್ಪನ್ನು ಹಾಕಿಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊದಲು ಈ ನೀರನ್ನು ಸೇವಿಸಿ. ನಂತರ, ನಿಮಗೆ ಬೇಕೆಂದಾಗಲೆಲ್ಲಾ ಇದೇ ನೀರನ್ನು ಕುಡಿಯಿರಿ. ಈ ರೀತಿಯಾಗಿ ದಿನವಿಡೀ ಪುದೀನ ವಾಟರ್ ಸೇವಿಸುವುದರಿಂದ ದೇಹಕ್ಕೆ ತುಂಬಾ ಪ್ರಯೋಜನಕಾರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News