ಔಷಧಿ or ಪಥ್ಯದಿಂದಲ್ಲ..! ತಿಂದು-ಕುಡಿದೇ ಡಯಾಬಿಟಿಸ್ ನಿಯಂತ್ರಿಸಬಹುದು... ಹೇಗ್ ಗೊತ್ತಾ...

Sugar Control Tips: ಮಧುಮೇಹಿಗಳು ತಾವು ತಿನ್ನುವ ಆಹಾರ ಕುಡಿಯುವ ಪಾನೀಯಗಳ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಇದರಲ್ಲಿ ಸಣ್ಣ ನಿರ್ಲಕ್ಷ್ಯವೂ ಸಹ ಡಯಾಬಿಟಿಸ್ ರೋಗಿಗಳಲ್ಲಿ ಬ್ಲಡ್ ಶುಗರ್ ಕೂಡಲೇ ಏರಿಳಿತವಾಗುತ್ತದೆ. 

Written by - Yashaswini V | Last Updated : Apr 24, 2025, 02:35 PM IST
  • ಶುಗರ್ ಸಮಸ್ಯೆ ಇದ್ದವರು ತಾವು ತಿನ್ನುವ ಆಹಾರದ ಬಗ್ಗೆ ನಿಗಾವಹಿಸಬೇಕು
  • ಉತ್ತಮ ಆಹಾರದಿಂದ ಶುಗರ್ ಲೆವೆಲ್ ಹೆಚ್ಚಾಗುವುದನ್ನು ತಡೆಯಬಹುದು
  • ಡಯಾಬಿಟಿಎಸ್ ಇರುವವರ ಆಹಾರ ಹೇಗಿರಬೇಕು ತಿಳಿಯಿರಿ.
ಔಷಧಿ or ಪಥ್ಯದಿಂದಲ್ಲ..! ತಿಂದು-ಕುಡಿದೇ ಡಯಾಬಿಟಿಸ್ ನಿಯಂತ್ರಿಸಬಹುದು... ಹೇಗ್ ಗೊತ್ತಾ...

Diabetes Care At Home: ಮಧುಮೇಹಿಗಳು ಶುಗರ್ ಕಂಟ್ರೋಲ್ ನಲ್ಲಿಡಲು ಕೇವಲ ಔಷಧಿ ತೆಗೆದುಕೊಳ್ಳುವುದು ಅಥವಾ ಪಥ್ಯವನ್ನು ಅನುಸರಿಸುವುದಲ್ಲ... ಚೆನ್ನಾಗಿ ತಿಂದು, ಕುಡಿದು ಕೂಡ ದೇಹದಲ್ಲಿ ಶುಗರ್ ಲೆವೆಲ್ ಹೆಚ್ಚಾಗುವುದನ್ನು ತಡೆಯಬಹುದು. ಶುಗರ್ ಕಂಟ್ರೋಲ್ ನಲ್ಲಿಡಲು ಅನುಸರಿಸಬಹುದಾದ ಸರಳ ತಂತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ... 

ಮಧುಮೇಹ ಸಮಸ್ಯೆ ಇರುವವರಲ್ಲಿ ಬ್ಲಡ್ ಶುಗರ್ ಏರುಪೇರಾಗುವುದು ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ. ಆದರೆ, ಇದನ್ನು ನಿರ್ಲಕ್ಷಿಸಿದರೆ ಗಂಭೀರ ಕಾಯಿಲೆಗಳಿಗೆ ತುತ್ತಾಗಬಹುದು. ಮಧುಮೇಹ ನಿಯಂತ್ರಿಸಲು,  ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸರಿಯಾದ ವಿಧಾನದಲ್ಲಿ ನಿಯಂತ್ರಿಸಿಕೊಳ್ಳಬೇಕು. ಆ ಹಿನ್ನಲೆ ಮಧುಮೇಹ ನಿಯಂತ್ರಣಕ್ಕೆ ಈ ಸುಲಭ ತಂತ್ರ ಅನುಸರಿಸಿ, ಶುಗರ್‌ ಕಂಟ್ರೋಲ್‌ ಮಾಡಿಕೊಳ್ಳಬಹುದಾದ ಸರಳ ವಿಧಾನ ಇಲ್ಲಿದೆ. 

ಆರೋಗ್ಯಕರ ಆಹಾರಗಳ ಬಳಕೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದು. ನಿಮ್ಮ ಆಹಾರಪದ್ದತಿಯಲ್ಲಿ ಈ ಕೆಳಗೆ ತಿಳಿಸಲಾದ ಆಹಾರಗಳನ್ನು ಸೇವಿಸುವುದರಿಂದ ಡಯಾಬಿಟಿಎಸ್ ಸದಾ ನಾರ್ಮಲ್ ಆಗಿರುವಂತೆ ನಿಗಾವಹಿಸಬಹುದು. ಅಂತಹ ಆಹಾರಗಳೆಂದರೆ... 

ಆರೋಗ್ಯಕರ ಕೊಬ್ಬಿನ ಆಹಾರಗಳ ಸೇವನೆ: 
ಮಧುಮೇಹಿಗಳು ಬಾದಾಮಿ ಮತ್ತು ವಾಲ್ ನಟ್ಸ್ ನಂತಹ ಆರೋಗ್ಯಕರ ಕೊಬ್ಬಿನ ಮೂಲಗಳಾದ ನಟ್ಸ್ ಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ಸುಧಾರಿಸುತ್ತದೆ.  

ಇದನ್ನೂ ಓದಿ- ಯಾವ ವಯಸ್ಸಿನಲ್ಲಿ ಟೈಪ್ 1 ಮಧುಮೇಹ ಬರುವ ಅಪಾಯ ಹೆಚ್ಚು? ಈ ಕಾಯಿಲೆಯ ಕಾರಣ ಮತ್ತು ಆರಂಭಿಕ ಲಕ್ಷಣಗಳೇನು?

ಪ್ರೋಟೀನ್ ಯುಕ್ತ ಆಹಾರಗಳು: 
ಮಧುಮೇಹಿಗಳು ಮುಂಜಾನೆ ಉಪಹಾರದ ವೇಳೆ ಪ್ರೋಟೀನ್ ನಿಂದ ಸಮೃದ್ಧವಾಗಿರುವ ಆಹಾರಗಳನ್ನು ತಿನ್ನುವುದನ್ನು ಖಚಿತಪಡಿಸಿಕೊಳ್ಳಿ. ಇದು ಬ್ಲಡ್ ಶುಗರ್ ಕಂಟ್ರೋಲ್ ಮಾಡುವುದರ ಜೊತೆಗೆ ಇಡೀ ದಿನ ಉತ್ಸಾಹಭರಿತರಾಗಿ ಉಳಿಯಲು ಕೂಡ ಸಹಕಾರಿ ಆಗಿದೆ. 

ಆ್ಯಪಲ್ ಸೈಡರ್ ವಿನೆಗರ್: 
ಆ್ಯಪಲ್ ಸೈಡರ್ ವಿನೆಗರ್ ನಲ್ಲಿ ಅಸಿಟಿನ್ ಆಮ್ಲ ಉತ್ತಮ ಪ್ರಮಾಣದಲ್ಲಿದೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುವುದರಿಂದ ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಊಟಕ್ಕೆ ಅರ್ಧ ತಾಸು ಮೊದಲು ಒಂದು ಲೋಟ ನೀರಿನಲ್ಲಿ ಅರ್ಧ ಸ್ಪೂನ್ ಆ್ಯಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿದ್ರೆ ಶುಗರ್ ಹೆಚ್ಚಾಗುವುದಿಲ್ಲ.  

ಇದನ್ನೂ ಓದಿ- ಖಾಲಿ ಹೊಟ್ಟೆಯಲ್ಲಿ ʻಈʼ ಕಾಳಿನ ಪುಡಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ.. ಒಂದೇ ತಿಂಗಳಲ್ಲಿ ಮಾಯವಾಗುತ್ತೆ ವರ್ಷಗಳಿಂದ ಶೇಕರಣೆಯಾದ ಹೊಟ್ಟೆಯ ಕೊಬ್ಬು!

ಮೆಗ್ನೀಸಿಯಂ ಭರಿತ ಆಹಾರ:
ಮಧುಮೇಹಿಗಳು ಆಹಾರದಲ್ಲಿ ಮೆಗ್ನೀಸಿಯಂ ಸಮೃದ್ಧ ಆಹಾರಗಳಾದ ಬಾಳೆಹಣ್ಣು, ಬಾದಾಮಿ ಮತ್ತು ಹಸಿರು ಸೊಪ್ಪು ತರಕಾರಿಗಳನ್ನು ತಮ್ಮ ಆಹಾರದ ಭಾಗವಾಗಿಸಬೇಕು. ಇದು ಜೀವಕೋಶಗಳು ಗ್ಲೂಕೋಸ್  ಹೀರಿಕೊಳ್ಳುವುದನ್ನು ಉತ್ತೇಜಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ. 

ದಾಲ್ಚಿನ್ನಿ/ಗ್ರೀನ್  ಟೀ: 
ಟೀ-ಕಾಫಿ ಕುಡಿಯುವ ಅಭ್ಯಾಸ ಇರುವವರು ಸಾಮಾನ್ಯ ಟೀ-ಕಾಫಿಗಿಂತ ದಿನದಲ್ಲಿ ಒಂದೆರಡು ಬಾರಿ ದಾಲ್ಚಿನ್ನಿ ಅಥವಾ ಗ್ರೀನ್ ಟೀ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬಹುದು. ಇವೆರಡರಲ್ಲೂ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಶಕ್ತಿ ಅಧಿಕವಾಗಿರುವುದರಿಂದ ಶುಗರ್ ಲೆವೆಲ್ ಹೆಚ್ಚಾಗುವುದಿಲ್ಲ. 

ರಾಗಿ ಬಳಕೆ: 
ನಿಮ್ಮ ದೈನಂದಿನ ಆಹಾರದಲ್ಲಿ ಫೈಬರ್ ಅಧಿಕವಾಗಿರುವ ಹಾಗೂ ಗ್ಲೂಕೋಸ್ ಹೀರಿಕೊಳ್ಳುವ ಶಕ್ತಿಯನ್ನು ನಿಧಾನಗೊಳಿಸಿ, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಬಲ್ಲ ಸೂಪರ್ಫುಡ್ ರಾಗಿಯನ್ನು ತಪ್ಪದೆ ಬಳಸಿ. ಇದು ನಿಮ್ಮ ಶುಗರ್ ಲೆವೆಲ್ ನಾರ್ಮಲ್ ಆಗಿರುವಂತೆ ಸಹಕರಿಸುತ್ತದೆ. 

ಇವುಗಳೊಂದಿಗೆ ಊಟದ ಬಳಿಕ ತಪ್ಪದೇ ವಾಕ್ ಮಾಡುವುದರಿಂದ  ನಿಮ್ಮ ಶುಗರ್ ಲೆವೆಲ್ ಏರುಪೇರಾಗುವುದಿಲ್ಲ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News