)
Health benefits of Orange: ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ, ಉತ್ಕರ್ಷಣ ನಿರೋಧಕಗಳು, ಅಮೈನೋ ಆಮ್ಲಗಳು, ಕ್ಯಾಲ್ಸಿಯಂ, ಅಯೋಡಿನ್, ರಂಜಕ, ಸೋಡಿಯಂ ಮತ್ತು ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ. ಈ ಹಣ್ಣನ್ನು ತಿನ್ನುವುದರಿಂದಾಗುವ ಕೆಲವು ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯಿರಿ...
ದುರ್ಬಲ ರೋಗನಿರೋಧಕ ಶಕ್ತಿಯಿಂದ ನೀವು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತೀರಾ? ಹೌದು ಎಂದಾದರೆ, ನೀವು ಕಿತ್ತಳೆ ತಿನ್ನಲು ಪ್ರಾರಂಭಿಸಬೇಕು. ವಿಟಮಿನ್ ಸಿ ಸಮೃದ್ಧವಾಗಿರುವ ಕಿತ್ತಳೆ ಹಣ್ಣುಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಬಹುದು.
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಕಿತ್ತಳೆ ಹಣ್ಣುಗಳನ್ನ ಸಹ ಸೇವಿಸಬಹುದು. ಆದಾಗ್ಯೂ ಉತ್ತಮ ಫಲಿತಾಂಶಗಳನ್ನ ಪಡೆಯಲು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಕಿತ್ತಳೆ ಹಣ್ಣುಗಳನ್ನ ತಿನ್ನುವುದು ಬಹಳ ಮುಖ್ಯ.
ದಿನವಿಡೀ ಚೈತನ್ಯಶೀಲರಾಗಿರಲು ಕಿತ್ತಳೆ ಹಣ್ಣುಗಳನ್ನ ಸೇವಿಸುವುದು ಸಹ ಸೂಕ್ತ. ಕಿತ್ತಳೆ ಹಣ್ಣುಗಳನ್ನ ಸೇವಿಸುವುದರಿಂದ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಬಹುದು, ಆಯಾಸ ಮತ್ತು ದೌರ್ಬಲ್ಯದ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸಬಹುದು. ಕಿತ್ತಳೆ ಹಣ್ಣಿನಲ್ಲಿ ಕಂಡುಬರುವ ಕೆಲವು ಪೋಷಕಾಂಶಗಳು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)