ಈ ಕಾಯಿಲೆ ಇರುವವರಿಗೆ ದಾಳಿಂಬೆ ವಿಷವಿದ್ದಂತೆ! ಅಪ್ಪಿತಪ್ಪಿಯೂ ತಿನ್ನುವ ಸಾಹಸ ಮಾಡ್ಬೇಡಿ..

pomegranate side effects: ಪ್ರತಿದಿನ ದಾಳಿಂಬೆ ಬೀಜಗಳನ್ನು ತಿನ್ನುವುದರಿಂದ ಗಮನಾರ್ಹ ಪ್ರಯೋಜನಗಳಿವೆ. ದಾಳಿಂಬೆ ಬೀಜಗಳಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಇದು ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ದಾಳಿಂಬೆ ತಿನ್ನುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ.. 

Written by - Savita M B | Last Updated : Mar 18, 2025, 09:31 PM IST
  • ದಾಳಿಂಬೆ ಆರೋಗ್ಯಕ್ಕೆ ಉತ್ತಮವಾದ ಹಣ್ಣುಗಳಲ್ಲಿ ಒಂದಾಗಿದೆ
  • ದಾಳಿಂಬೆ ಇತರ ಖನಿಜಗಳಲ್ಲಿಯೂ ಸಮೃದ್ಧವಾಗಿದೆ
ಈ ಕಾಯಿಲೆ ಇರುವವರಿಗೆ ದಾಳಿಂಬೆ ವಿಷವಿದ್ದಂತೆ! ಅಪ್ಪಿತಪ್ಪಿಯೂ ತಿನ್ನುವ ಸಾಹಸ ಮಾಡ್ಬೇಡಿ..

Health Tips: ದಾಳಿಂಬೆ ಆರೋಗ್ಯಕ್ಕೆ ಉತ್ತಮವಾದ ಹಣ್ಣುಗಳಲ್ಲಿ ಒಂದಾಗಿದೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದರ ಬೀಜಗಳಲ್ಲಿ ದೇಹಕ್ಕೆ ಅಗತ್ಯವಾದ ವಿಟಮಿನ್ ಕೆ ಹಾಗೂ ವಿಟಮಿನ್ ಸಿ ಮತ್ತು ಕಬ್ಬಿಣಾಂಶವಿದೆ. ದಾಳಿಂಬೆ ಇತರ ಖನಿಜಗಳಲ್ಲಿಯೂ ಸಮೃದ್ಧವಾಗಿದೆ. ಇದನ್ನು ಪ್ರತಿದಿನ ತಿನ್ನುವುದರಿಂದ ಗಮನಾರ್ಹ ಪ್ರಯೋಜನಗಳಿವೆ. ಇದು ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಬಹಳಷ್ಟು ಸಹಾಯ ಮಾಡುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ದಾಳಿಂಬೆ ತಿನ್ನುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ.. ಹಾಗಾದ್ರೆ ಯಾವ ಕಾಯಿಲೆಗಳಿರುವ ಜನರು ದಾಳಿಂಬೆ ಬೀಜಗಳನ್ನು ತಪ್ಪಿಸಬೇಕು? ಈಗ ತಿಳಿಯೋಣ.. 

ಇದನ್ನೂ ಓದಿ: Rupee Symbol History: ಭಾರತೀಯ ರೂಪಾಯಿ ಚಿಹ್ನೆ ಹುಟ್ಟಿದ್ದು ಹೇಗೆ..? ಇದರ ಹುಟ್ಟಿನ ಹಿಂದಿದೆ ತಮಿಳುನಾಡಿನ ನಂಟು..!

ಈಗಾಗಲೇ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ದಾಳಿಂಬೆ ಬೀಜಗಳನ್ನು ತಿನ್ನುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೇ ಇದು ಇತರ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.. ಅಲ್ಲದೇ ಮಧುಮೇಹದಿಂದ ಬಳಲುತ್ತಿರುವವರು ಸಹ ದಾಳಿಂಬೆ ಬೀಜಗಳನ್ನು ತಿನ್ನುವುದು ಸೂಕ್ತವಲ್ಲ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ. ಜೊತೆಗೆ ಈಗಾಗಲೇ ಗ್ಯಾಸ್ ಮತ್ತು ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿರುವವರು ಯಾವುದೇ ಸಂದರ್ಭದಲ್ಲೂ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ತಿನ್ನಬಾರದು ಎಂದು ಹೇಳಲಾಗುತ್ತದೆ.. 

ಇದನ್ನೂ ಓದಿ: Rupee Symbol History: ಭಾರತೀಯ ರೂಪಾಯಿ ಚಿಹ್ನೆ ಹುಟ್ಟಿದ್ದು ಹೇಗೆ..? ಇದರ ಹುಟ್ಟಿನ ಹಿಂದಿದೆ ತಮಿಳುನಾಡಿನ ನಂಟು..!

ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವ ಜನರು ದಾಳಿಂಬೆ ಹಣ್ಣನ್ನು ಸೇವಿಸಿದರೆ ಅವರ ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಅಲ್ಲದೆ, ಚರ್ಮದ ಅಲರ್ಜಿ ಇರುವವರು ದಾಳಿಂಬೆ ತಿಂದರೆ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಬಹುದು. ಕಡಿಮೆ ರಕ್ತದೊತ್ತಡದ ಔಷಧಿಗಳನ್ನು ತೆಗೆದುಕೊಳ್ಳುವ ಜನರು ದಾಳಿಂಬೆ ತಿಂದರೆ ದೇಹಕ್ಕೆ ಹಾನಿಯಾಗಬಹುದು. ಅಜೀರ್ಣ ಸಮಸ್ಯೆ ಇರುವವರು ಈ ಹಣ್ಣನ್ನು ತಿಂದ ನಂತರ ಹೊಟ್ಟೆ ಉಬ್ಬರ ಮತ್ತು ಅಸ್ವಸ್ಥತೆಯನ್ನು ಅನುಭವಿಸಬಹುದು. ಥೈರಾಯ್ಡ್ ಸಮಸ್ಯೆ ಇರುವವರು ದಾಳಿಂಬೆ ತಿಂದರೆ ಹಾರ್ಮೋನುಗಳ ಅಸಮತೋಲನ ಉಂಟಾಗುತ್ತದೆ.  

(ಗಮನಿಸಿ: ಈ ಲೇಖನದ ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದು ತಜ್ಞರು ಒದಗಿಸಿದ ಮಾಹಿತಿಯನ್ನು ಆಧರಿಸಿದೆ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ ನೇರವಾಗಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News