ಎಷ್ಟೇ ಆಸೆ ಆಗುತ್ತಿರಲಿ ಈ ಸಮಸ್ಯೆ ಇದ್ದವರು ಮಾವಿನ ಹಣ್ಣು ತಿನ್ನಲೇ ಬಾರದು !

Side Effects Of Mango :ಮಾವಿನಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗುವುದು. ಎಷ್ಟೇ ಆರೋಗ್ಯ ಪ್ರಯೋಜನಗಳಿದ್ದರೂ ಎಲ್ಲರೂ ಮಾವಿನ ಹಣ್ಣು ತಿನ್ನುವ ಹಾಗಿಲ್ಲ. ಕೆಲವು ಸಮಸ್ಯೆಗಳಿಂದ ಬಳಲುತ್ತಿರುವವರು ಅಪ್ಪಿ ತಪ್ಪಿಯೂ ಮಾವಿನಹಣ್ಣು ಸೇವಿಸಬಾರದು.  

Written by - Ranjitha R K | Last Updated : Apr 25, 2025, 02:56 PM IST
  • ಮಾರುಕಟ್ಟೆಗಳಲ್ಲಿ ರಾಶಿ ರಾಶಿಯಾಗಿ ಮಾವಿನ ಹಣ್ಣು ಲಗ್ಗೆ ಇಟ್ಟಿವೆ.
  • ಎಲ್ಲರೂ ಮಾವಿನ ಹಣ್ಣು ತಿನ್ನುವಂತಿಲ್ಲ
  • ಯಾರು ಮಾವಿನಹಣ್ಣು ಸೇವಿಸಬಾರದು
ಎಷ್ಟೇ ಆಸೆ ಆಗುತ್ತಿರಲಿ ಈ ಸಮಸ್ಯೆ ಇದ್ದವರು ಮಾವಿನ ಹಣ್ಣು ತಿನ್ನಲೇ ಬಾರದು !

Side Effects Of Mango : ಮಾರುಕಟ್ಟೆಗಳಲ್ಲಿ ರಾಶಿ ರಾಶಿಯಾಗಿ ಮಾವಿನ ಹಣ್ಣು ಲಗ್ಗೆ ಇಟ್ಟಿವೆ. ಬಹುತೇಕ ಮಂದಿ ಬೇಸಿಗೆಯಲ್ಲಿ ಸಿಹಿ ಮತ್ತು ರಸಭರಿತವಾದ ಮಾವಿನ ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಕೆಲವರು ಇದನ್ನು ಹಾಗೆಯೇ ತಿಂದರೆ, ಇನ್ನು ಕೆಲವರು ಐಸ್ ಕ್ರೀಮ್ ಅಥವಾ ಮಾವಿನ ಶೇಕ್ ರೂಪದಲ್ಲಿ ತಿನ್ನಲು ಇಷ್ಟಪಡುತ್ತಾರೆ. ಮಾವು ತಿನ್ನಲು ರುಚಿಕರವಾಗಿರುವುದರ ಜೊತೆಗೆ, ನಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಮಾವಿನ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ9, ವಿಟಮಿನ್ ಸಿ, ವಿಟಮಿನ್ ಇ, ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ತಾಮ್ರದಂತಹ ಅನೇಕ ಪೋಷಕಾಂಶಗಳು ಅಡಗಿವೆ.  ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಮಾವಿನಹಣ್ಣಿನ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ಹೃದಯವನ್ನು ಆರೋಗ್ಯವಾಗಿಡುವವರೆಗೆ ಪ್ರಯೋಜನಕಾರಿಯಾಗಿದೆ. ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ಎಲ್ಲರೂ ಮಾವಿನಹಣ್ಣು ತಿನ್ನುವಂತಿಲ್ಲ. 

Add Zee News as a Preferred Source

ಯಾರು ಮಾವಿನಹಣ್ಣು ಸೇವಿಸಬಾರದು : 
ಮಧುಮೇಹ ರೋಗಿಗಳು : 

ಮಧುಮೇಹ ಇರುವವರು ಮಾವಿನ ಹಣ್ಣು ಸೇವಿಸಬಾರದು. ಮಾವಿನಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣವು ಅಧಿಕವಾಗಿರುತ್ತದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ. ನೀವು ಮಧುಮೇಹ ರೋಗಿಯಾಗಿದ್ದರೆ, ಮಾವಿನಹಣ್ಣನ್ನು ಸೇವಿಸುವ ಮೊದಲು  ವೈದ್ಯರನ್ನು ಸಂಪರ್ಕಿಸಿ ನಂತರವಷ್ಟೇ ತಿನ್ನಿ. 

ಇದನ್ನೂ ಓದಿ : ಒಂದು ಕಪ್ ಮೊಸರನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಬೇಡದ ಕೊಬ್ಬು ಸಾರಾಗವಾಗಿ ಕರಗುವುದು!ವೈಟ್ ಲಾಸ್ ಆಗಬೇಕಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ

ಬೊಜ್ಜು ಸಮಸ್ಯೆ : 
ಬೊಜ್ಜು ಇರುವವರು ಹೆಚ್ಚು ಮಾವಿನಹಣ್ಣು ಸೇವಿಸಬಾರದು. ಇದರಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಇದ್ದು, ಇದು ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ. ಒಂದು ವೇಳೆ ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಕೂಡಾ ಮಾವಿನಹಣ್ಣನ್ನು ಸೇವಿಸಬಾರದು. 

ಜೀರ್ಣಕಾರಿ ಸಮಸ್ಯೆಗಳು : 
ಜೀರ್ಣಕ್ರಿಯೆ ಸಮಸ್ಯೆ ಇರುವವರು ಮಾವಿನ ಹಣ್ಣು ಸೇವಿಸಬಾರದು.  ಇದನ್ನು ಅತಿಯಾಗಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಗ್ಯಾಸ್,  ಅಜೀರ್ಣ, ಮಲಬದ್ಧತೆ, ವಾಂತಿ, ವಾಕರಿಕೆ ಮತ್ತು ಅತಿಸಾರದಂತಹ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ದುರ್ಬಲ ಜೀರ್ಣಕ್ರಿಯೆ ಇರುವವರು ಕೂಡಾ ಇದನ್ನು ಸೇವಿಸಬಾರದು. 

ಇದನ್ನೂ ಓದಿ : ಬೀಡಿ ಸಿಗರೆಟ್‌ ಅಲ್ಲ.. ನೀವು ಪ್ರತಿನಿತ್ಯ ಸೇವಿಸುತ್ತಿರುವ ಹುಣಸೆಹಣ್ಣು ನಿಮ್ಮ ದೇಹವನ್ನು ಪಂಕ್ಚರ್‌ ಮಾಡೋದು ಗ್ಯಾರಂಟಿ!ಒಂದು ತಿಂಗಳ ಕಾಲ ಇದನ್ನ ತಿನ್ನದೆ ಇದ್ದರೆ, ನಿಮ್ಮ ದೇಹದಲ್ಲಿ ಏನೆಲ್ಲಾ ಅದ್ಭುತ ಬದಲಾವಣೆಗಳಾಗುತ್ತದೆ ಗೊತ್ತಾ..?

ಅಲರ್ಜಿ ಸಮಸ್ಯೆಗಳು : 
ಮಾವಿನ ಹಣ್ಣು ಸೇವಿಸುವುದರಿಂದ ಕೆಲವರಿಗೆ ಅಲರ್ಜಿ ಉಂಟಾಗಬಹುದು.  ಮಾವಿನಲ್ಲಿರುವ ಕೆಲವು ರಾಸಾಯನಿಕಗಳು ಸೂಕ್ಷ್ಮ ಚರ್ಮಕ್ಕೆ ಹಾನಿ ಮಾಡಬಹುದು. ಇದರಿಂದಾಗಿ, ಚರ್ಮದ ಮೇಲೆ ದದ್ದುಗಳು, ತುರಿಕೆ, ಮೊಡವೆಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಅಲರ್ಜಿ  ಸಮಸ್ಯೆ ಇರುವವರು ಅದನ್ನು ಸೇವಿಸಬಾರದು.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News