ಕುಂಬಳಕಾಯಿ ಪೋಷಕಾಂಶಗಳ ಗಣಿಯಾಗಿದ್ದರೂ ಸಹ ಇದನ್ನು ಎಲ್ಲರೂ ತಿನ್ನುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಕುಂಬಳಕಾಯಿ ಸೇವನೆಯು ಕೆಲವರಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಉಂಟು ಮಾಡಬಹುದು.

Pumpkin Side Effects: ಕುಂಬಳಕಾಯಿ ಸಾಮಾನ್ಯ ಆಹಾರ ಪದಾರ್ಥವಾಗಿದ್ದರೂ, ಕೆಲವು ಗಂಭೀರ ಆರೋಗ್ಯ ಸ್ಥಿತಿಯನ್ನು ಹೊಂದಿರುವವರು ಇದನ್ನು ತಿಂದರೆ ಅಡ್ಡ ಪ್ರಭಾವಗಳನ್ನು ಎದುರಿಸಬಹುದು. ಹಾಗಾಗಿ ಕೆಲವು ಆರೋಗ್ಯ ಸಮಸ್ಯೆ ಇದ್ದವರಿಗೆ ಇದನ್ನು ಹಾನಿಕಾರಕ ಎನ್ನಲಾಗುತ್ತದೆ.
ಯಾರಿಗೆಲ್ಲಾ ಕುಂಬಳಕಾಯಿ ಹಾನಿಕಾರಕ ಎಂದು ನೋಡುವುದಾದರೆ...
ಕಿಡ್ನಿ ಸಮಸ್ಯೆ ಇದ್ದವರು:
ಕುಂಬಳಕಾಯಿ ಕಾಳುಗಳಲ್ಲಿ ಹೆಚ್ಚು ಪೋಟ್ಯಾಸಿಯಮ್ ಇರುತ್ತದೆ. ಹಾಗಾಗಿ, ಕಿಡ್ನಿ ಸಮಸ್ಯೆಗಳಿರುವವರಿಗೆ ಇದನ್ನು ಜೀರ್ಣಿಸಲು ಸಾಧ್ಯವಾಗದೆ ಹೃದಯ ಸಮಸ್ಯೆ ಉಂಟಾಗುವ ಅಪಾಯ ಹೆಚ್ಚು. ಆಹಾರ ಪೋಟಾಸಿಯಮ್ ಮಟ್ಟ ಪರೀಕ್ಷಿಸಿ ಕಿಡ್ನಿ ಸಮಸ್ಯೆ ಇದ್ದವರು ವೈದ್ಯರ ಸಲಹೆ ಪಡೆದು ಸೇವಿಸಬಹುದು.
ಅಲರ್ಜಿ:
ಕುಂಬಳಕಾಯಿಯ ಅಲರ್ಜಿ ಇದ್ದವರು ಕುಂಬಳಕಾಯಿ ಅಥವಾ ಅದರ ಬೀಜಗಳು ಒಳ್ಳೆಯದಲ್ಲ. ಇದರಿಂದ ಚರ್ಮದ ಅಲರ್ಜಿ, ಉರಿತ, ಗಂಟಲಲ್ಲಿ ಅಸ್ವಸ್ಥತೆ, ಉಸಿರಾಟ ಸಮಸ್ಯೆ ಉಂಟಾಗಬಹುದು
ಹೃದಯಬಡಿತ ಸಮಸ್ಯೆ, ಲಿಥಿಯಂ ಅಥವಾ ಬ್ಲಡ್-ಥಿನ್ನರ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಕುಂಬಳಕಾಯಿ ವಿಷಕ್ಕೆ ಸಮಾನ. ಕುಂಬಳಕಾಯಿ ಡಯೂರಿಟಿಕ್ (ಮೂತ್ರಹರಿತ) ಪರಿಣಾಮ ಹೊಂದಿದೆ. ಇದು ಔಷಧಗಳೊಂದಿಗೆ ಸಂಯೋಜಿಸಿದಾಗ ರಕ್ತದ ಹರಳು ಅಥವಾ ಉಸಿರಾಟದ ಅಸಮತೋಲನ ಉಂಟುಮಾಡಬಹುದು.
ಬೊಜ್ಜಿನ ಸಮಸ್ಯೆ:
ಕುಂಬಳಕಾಯಿಯಲ್ಲಿ ಹೆಚ್ಚಿನ ತೇವಾಂಶ ಮತ್ತು ಇದರ ಬೀಜಗಳಲ್ಲಿ ಫೈಬರ್ ಪ್ರಮಾಣ ಹೆಚ್ಚು ಇರುತ್ತದೆ. ಇದನ್ನು ಅಧಿಕ ಪ್ರಮಾಣದಲ್ಲಿ ತಿನ್ನುವುದರಿಂದ ಬೊಜ್ಜು ಹೆಚ್ಚಾಗಬಹುದು. ಅಲ್ಲದೆ, ಗ್ಯಾಸ್,ಡೈರಿಯಾ ಮುಂತಾದ ಹೊಟ್ಟೆ ಸಮಸ್ಯೆ ಉಂಟಾಗಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.