"ಗರ್ಭಾವಸ್ಥೆ"ಯಲ್ಲಿ "ಲೈಂಗಿಕ ಕ್ರಿಯೆ" ಮಾಡಿದ್ರೆ ಮಗುವಿಗೆ ಹಾನಿಯಾಗುತ್ತದೆಯೇ..? ಇಲ್ಲಿದೆ ಅಸಲಿ ಸತ್ಯ..

Healthy Pregnancy tips : ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಹಲವಾರು ದಂಪತಿಗಳು ಹಲವು ಪ್ರಶ್ನೆಗಳನ್ನು ಹೊಂದಿದ್ದಾರೆ. ನಾಚಿಕೆಯಿಂದಾಗಿ ಈ ಬಗ್ಗೆ ವೈದ್ಯರಲ್ಲಿಯೂ ಸಲಹೆ ಪಡೆಯಲು ಮುಂದಾಗುವುದುದಿಲ್ಲ. ಇದು ತಪ್ಪುಗಳಿಗೆ ಕಾರಣವಾಗಬಹುದು, ಆರೋಗ್ಯ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.. ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ..

Written by - Krishna N K | Last Updated : Apr 26, 2025, 12:57 PM IST
    • ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಹಲವಾರು ದಂಪತಿಗಳು ಹಲವು ಪ್ರಶ್ನೆಗಳನ್ನು ಹೊಂದಿದ್ದಾರೆ.
    • ಮೊದಲ ಬಾರಿಗೆ ಪೋಷಕರಾಗಲಿರುವ ಹೆಚ್ಚಿನ ದಂಪತಿಗಳ ಮನಸ್ಸಿನಲ್ಲಿ ಈ ಅನುಮಾನ ಹುಟ್ಟುತ್ತದೆ
    • ಮಹಿಳೆಗಾಗಲಿ ಅಥವಾ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆಯಾಗಲಿ ಹಾನಿ ಮಾಡುವುದಿಲ್ಲ.
"ಗರ್ಭಾವಸ್ಥೆ"ಯಲ್ಲಿ "ಲೈಂಗಿಕ ಕ್ರಿಯೆ" ಮಾಡಿದ್ರೆ ಮಗುವಿಗೆ ಹಾನಿಯಾಗುತ್ತದೆಯೇ..? ಇಲ್ಲಿದೆ ಅಸಲಿ ಸತ್ಯ..

Pregnancy safety tips : ಮೊದಲ ಬಾರಿಗೆ ಪೋಷಕರಾಗಲಿರುವ ಹೆಚ್ಚಿನ ದಂಪತಿಗಳ ಮನಸ್ಸಿನಲ್ಲಿ ಬರುವ ಪ್ರಶ್ನೆಯೆಂದರೆ ಈ ಸಮಯದಲ್ಲಿ ಲೈಂಗಿಕ ಸಂಭೋಗ ಸುರಕ್ಷಿತವೇ ಎಂಬುದು. ಎಲ್ಲೋ ಹೀಗೆ ಮಾಡುವುದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಯಾವುದೇ ಹಾನಿಯಾಗಬಹುದು ಎನ್ನುವ ಸಂಶಯ ಅವರ ತಲೆಯಲ್ಲಿರುತ್ತೆ. ಜನರು ಸಹ ಈ ಬಗ್ಗೆ, ಮುಕ್ತವಾಗಿ ಕೇಳಲು ಭಯ, ನಾಚಿಕೆ ಪಡುತ್ತಾರೆ. ಹಾಗಿದೆ, ವೈದ್ಯಕೀಯ ವಿಜ್ಞಾನ ಮತ್ತು ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ.. ಬನ್ನಿ ತಿಳಿಯೋಣ...

Add Zee News as a Preferred Source

ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯ ಗರ್ಭಧಾರಣೆಯು ಸಾಮಾನ್ಯವಾಗಿದ್ದರೆ (ಕಡಿಮೆ ಅಪಾಯದ ಗರ್ಭಧಾರಣೆ), ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಸುರಕ್ಷಿತ. ಇದು ಮಹಿಳೆಗಾಗಲಿ ಅಥವಾ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆಯಾಗಲಿ ಹಾನಿ ಮಾಡುವುದಿಲ್ಲ.

ಇದನ್ನೂ ಓದಿ:ಸೌತೆಕಾಯಿಯಂತೆ ಕಾಣುವ ಈ ತರಕಾರಿ ಮಧುಮೇಹಿಗಳಿಗೆ ದಿವ್ಯೌಷಧ! ತೂಕ ಇಳಿಕೆಗೂ ಇದೇ ಮದ್ದು..

ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಮಗುವಿಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ, ಏಕೆಂದರೆ ಭ್ರೂಣವು ನಿಮ್ಮ ಗರ್ಭಾಶಯದೊಳಗೆ ಸುರಕ್ಷಿತವಾಗಿರುತ್ತದೆ. ಇದು ಯಾವುದೇ ಆಘಾತ ಅಥವಾ ಒತ್ತಡವನ್ನು ತಡೆದುಕೊಳ್ಳಬಹುದಾದ ಆಮ್ನಿಯೋಟಿಕ್ ದ್ರವದಿಂದ ಆವೃತವಾಗಿದೆ. ಇದಲ್ಲದೆ, ಗರ್ಭಾಶಯ ಮತ್ತು ಗರ್ಭಕಂಠದ ಗೋಡೆಗಳು ಮಗುವನ್ನು ಸುರಕ್ಷಿತವಾಗಿರಿಸುತ್ತವೆ.

ಈ ಸಮಯದಲ್ಲಿ ಬೇಡ : ಗರ್ಭಕಂಠದ ದೌರ್ಬಲ್ಯ, ಅವಧಿಪೂರ್ವ ಹೆರಿಗೆಯ ಅಪಾಯ, ಯೋನಿ ರಕ್ತಸ್ರಾವ ಅಥವಾ ನೋವು, ಅವಳಿ ಅಥವಾ ತ್ರಿವಳಿಗಳಂತಹ ಹೆಚ್ಚಿನ ಅಪಾಯದ ಗರ್ಭಧಾರಣೆಗಳು.. ಇಂತಹ ಸಮಯದಲ್ಲಿ ಲೈಂಗಿಕ ಕ್ರಿಯೆ ಒಳ್ಳೆಯದಲ್ಲ. ನಿಮಗೆ ಈ ಕುರಿತು ಅನುಮಾನಗಳು ಇದ್ದಲ್ಲಿ ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ:ಬೆಳಗ್ಗೆ ಎದ್ದ ಕೂಡಲೇ ಈ ಎಲೆಯನ್ನು ಅಗಿದು ರಸ ನುಂಗಿದರೆ ಬ್ಲಡ್ ಶುಗರ್ ಕೂಡಲೇ ನಾರ್ಮಲ್ ಆಗುವುದು !ಮನೆಯಂಗಳದಲ್ಲಿಯೇ ಸಿಗುವ ಎಲೆ ಇದು

ಗರ್ಭಾವಸ್ಥೆಯಲ್ಲಿ ಲೈಂಗಿಕ ಸಂಭೋಗದ ಪ್ರಯೋಜನಗಳು : ಎಲ್ಲವೂ ಸಾಮಾನ್ಯವಾಗಿದ್ದರೆ, ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವುದು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ದಂಪತಿಗಳ ನಡುವಿನ ಸಂಬಂಧಗಳು ಸುಧಾರಿಸುತ್ತವೆ. ಆದರೆ, ವೈದ್ಯರಿಂದ ಸಲಹೆ ಪಡೆಯುವುದು ಸೂಕ್ತ.

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮಾಧ್ಯಮ ವರದಿಗಳನ್ನು ಆಧರಿಸಿದೆ. ನೀವು ಈ ಮೇಲಿನ ಯಾವುದೇ ಸಲಹೆಯನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞ ವೈದ್ಯರ ಸಲಹೆಯನ್ನು ಪಡೆಯಲು ಮರೆಯದಿರಿ.. ಇದನ್ನು Zee Kannada News ಖಚಿತ ಪಡಿಸುವುದಿಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News