Poisonous Watermelon: ಇನ್ನೇನು ಬೇಸಿಗೆ ಬಂತು ಮನೆಗೆ ಕಲ್ಲಂಗಡಿ ಹಣ್ಣುಗಳನ್ನು ತರಬೇಕು ಎಂದುಕೊಳ್ಳುವವರು ಮೊದಲು ಈ ಹಣ್ಣಿನ ಬಗ್ಗೆ ಮುಖ್ಯವಾದ ವಿಷಯವೊಂದನ್ನು ತಿಳಿದುಕೊಳ್ಳಿ. ದೇಹ ತಂಪು ಮಾಡುವ ಈ ಕೂಲ್ ಕೂಲ್ ಕಲ್ಲಂಗಡಿಯ ತಯಾರಿಕೆಯ ಬಗ್ಗೆ ವೈದ್ಯರು ಶಾಂಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.

Poisonous Watermelon: ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣುಗಳನ್ನು ಕೊಳ್ಳುವಾಗ ಅದರ ಮೇಲೆ ಸಣ್ಣದಾಗಿ ಕಟ್ ಮಾಡಿ ಒಳಗೆ ಕೆಂಪಗಾಗಿರುವುದನ್ನು ನೋಡಿ ಹಣ್ಣಾಗಿದೆ ಎಂದು ಖಚಿತಪಡಿಸಿಕೊಂಡು ನಂತರ ತೆಗೆದುಕೊಳ್ಳುತ್ತೇವೆ. ಆದರೆ ಈ ಹಣ್ಣು ಬೇಗನೆ ಕೆಂಪಗಾಗಲು ಕೃತಕ ರಾಸಾಯನಿಕ ಬಣ್ಣವನ್ನು ಚುಚ್ಚುಮದ್ದು ರೂಪದಲ್ಲಿ ನೀಡಿರುತ್ತಾರೆ. ಇದರ ಪರಿಣಾಮ ಕಾರ್ಬೈಡ್ ಎಂಬ ರಾಸಾಯನಿಕ ಕಲ್ಲಂಗಡಿಯಲ್ಲಿ ಸೇರಿ ಅದು ಬೇಗ ಹಣ್ಣಾಗುತ್ತದೆ. ಜೊತೆಗೆ ನೋಡಲು ಆಕರ್ಷಕವಾಗಿ ಕೆಂಪಗೆ ಕಾಣುತ್ತದೆ. ಈ ಕಲ್ಲಂಗಡಿಯನ್ನು ಸೇವಿಸಿದಾಗ ದೇಹಕ್ಕೆ ಬಹಳ ಅಪಾಯ ಉಂಟಾಗುತ್ತದೆ ಎಂದು ಸ್ವತಃ ವೈದ್ಯರೇ ಎಚ್ಚರಿಕೆ ನೀಡಿದ್ದಾರೆ.
ಮಾರುಕಟ್ಟೆಯಲ್ಲಿ ವಿಷಕಾರಿ ಕಲ್ಲಂಗಡಿ ಹಣ್ಣಿನ ಕುರಿತು ಖ್ಯಾತ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಅವರು ಜಾಗೃತಿ ಮೂಡಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಎಲ್ಲರೂ ಮೊದಲು ನೋಡುವುದು ಅದು ಎಷ್ಟು ಕೆಂಪಗಿದೆ ಎಂದು. ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿದೆ. ಇದರರಲ್ಲಿರುವ ವಿಟಿಮಿನ್ ಸಿ, ಪೊಟ್ಯಾಶಿಯಂ ಮತ್ತು ಮಿನರಲ್ಸ್ ಗಳು ಆರೋಗ್ಯದ ಜೊತೆಗೆ ಚರ್ಮಕ್ಕೂ ಒಳ್ಳೆಯದು. ಆದರೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ( FSSAI) ಪ್ರಕಾರ, ಕಲ್ಲಂಗಡಿ ಹಣ್ಣನ್ನು ಬೇಗ ಹಣ್ಣಾಗುವಂತೆ ಮಾಡಲು ಇದಕ್ಕೆ ರಾಸಾಯನಿಕ ಚುಚ್ಚುಮದ್ದುಗಳನ್ನು ಹಾಕಿರುವ ಅಂಶ ಬೆಳಕಿಗೆ ಬಂದಿರುವ ಬಗ್ಗೆ ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
ಕಲ್ಲಂಗಡಿ ಹಣ್ಣಿನಲ್ಲಿ ರಾಸಾಯನಿಕವಿರುವುದನ್ನು ಪತ್ತೆ ಹಚ್ಚುವುದು ಹೇಗೆ?
ಕಲ್ಲಂಗಡಿ ಹಣ್ಣನ್ನು ಖರೀದಿಸುವಾಗ ಅದರಲ್ಲಿ ರಾಸಾಯನಿಕವಿದೆ ಎಂಬುದನ್ನೂ ಪತ್ತೆ ಹಚ್ಚುವ ಸುಲಭ ಮಾರ್ಗವನ್ನೂ ತಿಳಿಸಿರುವ ಡಾ. ಶರದ್ ಕುಲಕರ್ಣಿ, ಕಲ್ಲಂಗಡಿ ಹಣ್ಣನ್ನು ಕೊಳ್ಳುವ ಮೊದಲು ಹಣ್ಣಿನ ಕಟ್ ಮಾಡಿದ ತುಂಡನ್ನು ಟಿಶ್ಯೂ ಪೇಪರ್ ಅಥವಾ ಒಂದು ಶುದ್ಧ ಬಟ್ಟೆಯಿಂದ ಅದನ್ನು ಒರೆಸಿ. ಒಂದೊಮ್ಮೆ ಅದು ಬಣ್ಣ ಬಿಡಲು ಪ್ರಾರಂಭಿಸಿದರೆ ಹಣ್ಣಿನಲ್ಲಿ ರಾಸಾಯನಿಕ ಇದೆ ಎಂದರ್ಥ. ಈ ಕುರಿತಂತೆ FSSAI ವಿಡಿಯೋ ಮೂಲಕ ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಜನರಿಗೂ ಕೂಡ ಮಾರುಕಟ್ಟೆಯಲ್ಲಿ ಶುದ್ಧ ಕಲ್ಲಂಗಡಿ ಹಣ್ಣನ್ನು ಪತ್ತೆ ಹಚ್ಚುವುದು ಹೇಗೆ ಎಂಬುದನ್ನೂ ತಿಳಿಸುವ ಉದ್ದೇಶದಿಂದ ಈ ವಿಡಿಯೋ ಮಾಡುತ್ತಿರುವುದಾಗಿ ತಿಳಿಸಿರುವ ಡಾ. ಶರದ್ ಕುಲಕರ್ಣಿ, ಶುದ್ಧ (ರಾಸಾಯನಿಕಗಳನ್ನು ಬಳಸದ) ಹಣ್ಣನ್ನು ಸೇವಿಸಿದರೆ ಮಾತ್ರವೇ ಅದರಿಂದ ದೊರೆಯಬಹುದಾದಂತಹ ಎಲ್ಲಾ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ ಎಂದವರು ತಿಳಿಸಿದ್ದಾರೆ.
ವಿಷಕಾರಿ ಕಲ್ಲಂಗಡಿಹಣ್ಣಿನ ಬಗ್ಗೆ ಆಯುರ್ವೇದ ತಜ್ಞ ಡಾ. ಶರದ್ ಕುಲಕರ್ಣಿ ಹೇಳಿದ್ದೇನು? ಈ ವಿಡಿಯೋ ವೀಕ್ಷಿಸಿ...
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.