Easy way to Prevent Pregnancy: ಇಂದಿನ ಸಮಾಜದಲ್ಲಿ ಮದುವೆಯಾಗದೆ ದೈಹಿಕ ಸಂಪರ್ಕ ಬೆಳೆಸುವುದು ಸಾಮಾನ್ಯವಾಗಿದೆ. ಈ ಹಿಂದ ದೇಹ ಸಂಬಂಧ ಒಂದು ಶ್ರೇಷ್ಠ ಕ್ರಿಯೆಯಾಗಿತ್ತು. ವಿವಾಹಪೂರ್ವ ದೈಹಿಕ ಸಂಪರ್ಕ ತಪ್ಪು ಎಂಬ ಕಲ್ಪನೆ ಮಾಯವಾಗಿದೆ. ಆದರೆ, ವಿವಾಹಪೂರ್ವ ದೈಹಿಕ ಸಂಪರ್ಕ ಸಮಯದಲ್ಲಿ ಗರ್ಭಧಾರಣೆ ಸಂಭವಿಸಿದರೆ, ಯುವಜನರು ತುಂಬಾ ಭಯಭೀತರಾಗುತ್ತಾರೆ. ಮದುವೆಯ ಮುನ್ನವೇ ಮಹಿಳೆ ಗರ್ಭಿಣಿಯಾದರೆ ಕುಟುಂಬಗಳ ಮರ್ಯಾದೆ ಬೀದಿಗೆ ಬರಬಹುದು. ಹೆಚ್ಚು ಮಕ್ಕಳನ್ನು ಹೊಂದಲು ಇಷ್ಟಪಡದವರಿಗೂ ಗರ್ಭಧಾರಣೆಯು ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕಾಗಿ ವಿಜ್ಞಾನಿಗಳು ಈಗ ಗರ್ಭಧಾರಣೆ ತಡೆಯುವ ಹೊಸ ಪರಿಹಾರಗಳನ್ನು ಕಂಡುಕೊಂಡಿದ್ದಾರೆ. ಗರ್ಭಧಾರಣೆಯನ್ನು ತಡೆಗಟ್ಟುವ ಹೊಸ ವಿಧಾನವನ್ನು ಕಂಡುಹಿಡಿಯಲಾಗಿದೆ.
ಗರ್ಭಧಾರಣೆಯನ್ನು ತಡೆಗಟ್ಟಲು ವಿಜ್ಞಾನಿಗಳು ಒಂದು ಇಂಜೆಕ್ಷನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ವೈದ್ಯಕೀಯ ವಿಧಾನಗಳು ಅಥವಾ ಮಾತ್ರೆಗಳ ಅಗತ್ಯವಿಲ್ಲದೆ ಗರ್ಭಧಾರಣೆಯನ್ನು ತಡೆಗಟ್ಟಲು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಯ ವಿಜ್ಞಾನಿಗಳು ಹೊಸ ರೀತಿಯ ಇಂಜೆಕ್ಷನ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. DIY ಎಂದು ಕರೆಯಲ್ಪಡುವ ಈ ಇಂಜೆಕ್ಷನ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಅದು ಮಹಿಳೆಯ ಗರ್ಭಕೋಶ ಮೊಟ್ಟೆಗಳನ್ನು ಬಿಡುಗಡೆ ಮಾಡುವುದನ್ನು ತಡೆಯುತ್ತದೆ. ಈ ಇಂಜೆಕ್ಷನ್ ಚರ್ಮದ ಮೂಲಕ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಈ ಮೂಲಕ ಗರ್ಭಧಾರಣೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಪ್ರಸ್ತುತ ಗರ್ಭನಿರೋಧಕ ವ್ಯವಸ್ಥೆಯು ಕೆಲವು ದಶಕಗಳಿಂದ ಅಸ್ತಿತ್ವದಲ್ಲಿದೆ. ಆದರೆ ವೈದ್ಯಕೀಯ ತಜ್ಞರು ಹೇಳುವಂತೆ ಗರ್ಭನಿರೋಧಕ ಇಂಜೆಕ್ಷನ್ ಯಾವುದೇ ವೈದ್ಯಕೀಯ ಚಿಕಿತ್ಸೆ ಅಥವಾ ಮಾತ್ರೆಗಳಿಲ್ಲದೆ ಗರ್ಭಧಾರಣೆಯನ್ನು ತಡೆಯುವ ಹೊಸ ಆವಿಷ್ಕಾರವಾಗಿದೆ. ಆದಾಗ್ಯೂ, ಈ ಚುಚ್ಚುಮದ್ದು ಕೇವಲ ಮೂರು ತಿಂಗಳವರೆಗೆ ಮಾತ್ರ ಗರ್ಭಧಾರಣೆಯನ್ನು ತಡೆಯುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಹೊಸ ಇಂಜೆಕ್ಷನ್‌ನ ಪ್ರಯೋಗಗಳನ್ನು ಇನ್ನೂ ಮಾನವರ ಮೇಲೆ ಪರೀಕ್ಷಿಸಲಾಗಿಲ್ಲ. ಈ ಇಂಜೆಕ್ಷನ್ ಕುರಿತು ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. ಅವುಗಳ ಫಲಿತಾಂಶಗಳನ್ನು ಮತ್ತಷ್ಟು ಪರೀಕ್ಷಿಸಿದ ನಂತರ ಮಾನವರ ಮೇಲೆ ಪರೀಕ್ಷಿಸುವ ಸಾಧ್ಯತೆಯಿದೆ. ಈ ಇಂಜೆಕ್ಷನ್ ಅನ್ನು ಪ್ರಾಣಿಗಳ ಮೇಲೆ ಬಳಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಮಹಿಳೆಯರು 30 ವರ್ಷದ ನಂತರ ಏಕೆ ದಪ್ಪವಾಗುತ್ತಾರೆ? ಇದರ ಹಿಂದಿನ ಕಾರಣವೇ ಬೇರೆ..
ಅಮೇರಿಕನ್ ವಿಜ್ಞಾನಿಗಳು ಈ ಇಂಜೆಕ್ಷನ್ ಅನ್ನು ಇಲಿಗಳ ಮೇಲೆ ಪರೀಕ್ಷಿಸಿದರು. ಇಲಿಗಳಲ್ಲಿ ಈ ಔಷಧದ ಪರಿಣಾಮ ಕನಿಷ್ಠ 97 ದಿನಗಳವರೆಗೆ ಇರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದರರ್ಥ ಚುಚ್ಚುಮದ್ದಿನ ನಂತರ ಸುಮಾರು ಮೂರು ತಿಂಗಳವರೆಗೆ ಗರ್ಭಧಾರಣೆಯನ್ನು ತಡೆಯುತ್ತದೆ. "ಮನೆಯಲ್ಲಿ ಗರ್ಭನಿರೋಧಕಕ್ಕಾಗಿ ಇಂಜೆಕ್ಷನ್ ಅನ್ನು ಸುಲಭವಾಗಿ ಬಳಸುವಂತೆ ಮಾಡುವುದು ನಮ್ಮ ಸಂಶೋಧನೆಯ ಗುರಿಯಾಗಿದೆ" ಎಂದು ಮ್ಯಾಸಚೂಸೆಟ್ಸ್ ತಂಡದ ವಿಜ್ಞಾನಿಯೊಬ್ಬರು ಹೇಳಿದರು.
ಹೆಚ್ಚಿನ ಪ್ರಯೋಗಗಳನ್ನು ನಡೆಸಿದರೆ ಈ ಇಂಜೆಕ್ಷನ್ ದೀರ್ಘಕಾಲೀನ ಪರಿಣಾಮವನ್ನು ಬೀರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸಂಶೋಧನೆ ನಡೆಸಲಾಗುತ್ತಿದೆ ಎಂದು ಬಹಿರಂಗಪಡಿಸಲಾಯಿತು. ಕೆಲವು ದೇಶಗಳಲ್ಲಿ ಕಾನೂನುಬದ್ಧ ಗರ್ಭನಿರೋಧಕವು ಅಪರಾಧವಾಗಿದೆ. ಭಾರತದಲ್ಲಿ ಗರ್ಭದಲ್ಲಿರುವ ಮಗುವನ್ನು ಕೊಲ್ಲುವುದು ಅಪರಾಧವೆಂದು ಪರಿಗಣಿಸಲಾಗಿದೆ. ಗರ್ಭಪಾತಕ್ಕೆ ಕೆಲವು ನಿಯಮಗಳು ಮತ್ತು ನಿಬಂಧನೆಗಳಿವೆ. ಅವುಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಇದನ್ನೂ ಓದಿ: ಚಿಕನ್ ತಿಂದ ನಂತರ ಅಪ್ಪಿತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ..! ಇಲ್ಲದಿದ್ದರೆ ಅಪಾಯ ಖಂಡಿತ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









