ಮಧುಮೇಹಿಗಳಿಗೆ 'ರಾಗಿ'ಯೇ ಮದ್ದು... ಈ ಆರೋಗ್ಯ ಸಮಸ್ಯೆಗಳಿಗೂ ಸಿಗುತ್ತೆ ಸುಲಭ ಪರಿಹಾರ

Ragi Benefits: ರಾಗಿ ತಿಂದವ ಯೋಗಿ, ರಾಗಿ ತಿಂದವ ನಿರೋಗಿ ಎಂಬ ಮಾತಿದೆ. ಇದು ಬರೀ ಮಾತಲ್ಲ ಅಕ್ಷರಶಃ ಸತ್ಯವಾದ ನುಡಿ ವಾಕ್ಯ. ಉಳಿದೆಲ್ಲಾ ಆಹಾರ ಧಾನ್ಯಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ರಾಗಿ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ನೀಡಬಲ್ಲದು, ಇದರ ಶಕ್ತಿ ಏನು ಅಂತ ತಿಳಿದ್ರೆ ರಾಗಿ ಹೆಸರು ಕೇಳಿದರೆ ಮೂಗು ಮುರಿಯುವವರೂ ಸಹ ಇದಕ್ಕೆ ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ... 

Written by - Yashaswini V | Last Updated : Apr 4, 2025, 02:48 PM IST
  • ಈ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ಪಡೆಯಲು ರಾಗಿಯೇ ದಿವ್ಯೌಷಧ
  • ಮಧುಮೇಹ ಸಮಸ್ಯೆ ಇರುವವರಿಗೆ ಸಂಜೀವಿನಿ ರಾಗಿ
  • ರಾಗಿಯ ಆರೋಗ್ಯ ಗುಟ್ಟು ತಿಳಿದ್ರೆ ನೀವು ಎಂದೂ ರಾಗಿಯನ್ನು ಬೇಡ ಅನ್ನೊಲ್ಲ
ಮಧುಮೇಹಿಗಳಿಗೆ 'ರಾಗಿ'ಯೇ ಮದ್ದು... ಈ ಆರೋಗ್ಯ ಸಮಸ್ಯೆಗಳಿಗೂ ಸಿಗುತ್ತೆ ಸುಲಭ ಪರಿಹಾರ

Ragi For Health: ಅತಿ ಹೆಚ್ಚು ಪೌಷ್ಟಿಕಾಂಶಗಳಿಂದ ಕೂಡಿರುವ ಬಡವರ ಆಹಾರ ಎಂತಲೇ ಪರಿಗಣಿಸಲಾಗಿರುವ ಧಾನ್ಯ 'ರಾಗಿ'. ಆದರೆ, ಇದರ ಆರೋಗ್ಯ ಶ್ರೀಮಂತಿಕೆಯ ಬಗ್ಗೆ ತಿಳಿದರೆ, ರಾಗಿ ಹೆಸರು ಕೇಳಿ ಮೂಗುಮುರಿಯುವವರೂ ಕೂಡ ಇದರ ದಾಸರಾಗುತ್ತಾರೆ. ರಾಗಿ ಗುಣಧರ್ಮಗಳನ್ನು ಅರಿತಿರುವುದರಿಂದಲೇ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ದೇಶಗಳು ಕೂಡ ರಾಗಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿವೆ. 

Add Zee News as a Preferred Source

ರಾಗಿಯಲ್ಲಿರುವ ಪೋಷಕಾಂಶಗಳು: 
ರಾಗಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಡಿ, ಅಮೈನೋ ಆಮ್ಲಗಳು, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಕಾರ್ಬೋಹೈಡ್ರೇಟ್‌ಗಳು, ಆಹಾರದ ಫೈಬರ್, ಪ್ರೋಟೀನ್ ಸೇರಿದಂತೆ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಪ್ರತಿದಿನ ಆಹಾರದಲ್ಲಿ ರಾಗಿ ಸೇವಿಸುವುದರಿಂದ ಇದು ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಲು ಉತ್ತಮ ಕೊಡುಗೆಯನ್ನು ನೀಡುತ್ತದೆ. 

ರಾಗಿ ತಿನ್ನುವುದರಿಂದ ಆರೋಗ್ಯಕ್ಕಿರುವ ಪ್ರಯೋಜನಗಳೆಂದರೆ: 
ಮಧುಮೇಹ ನಿಯಂತ್ರಣ: 


ರಾಗಿಯಲ್ಲಿ ಕರಗದ ನಾರು ಮತ್ತು ಪಾಲಿಫಿನಾಲ್ ಎಂಬ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತವೆ. ಹಾಗಾಗಿ, ರಾಗಿ ತಿಂದಾಗ ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಧಾನಗೊಲ್ಸಿ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿರಿಸುತ್ತದೆ. ಡಯಾಬಿಟಿಸ್ ಸಮಸ್ಯೆ ಇರುವವರು ತಮ್ಮ ದೈನಂದಿನ ಆಹಾರದಲ್ಲಿ ರಾಗಿ ಖಾದ್ಯಗಳನ್ನು ಬಳಸುವುದರಿಂದ ಶುಗರ್ ಸದಾ ಕಂಟ್ರೋಲ್ ನಲ್ಲಿರುತ್ತದೆ. 

ಇದನ್ನೂ ಓದಿ- ಮೊಟ್ಟೆ ಮಾಂಸಕ್ಕಿಂತಲೂ ಹೆಚ್ಚು ಪ್ರೋಟೀನ್‌ ಅಂಶ ಹೊಂದಿರುವ ತರಕಾರಿ ಇದು! ಸರ್ವ ಆರೋಗ್ಯ ಸಮಸ್ಯೆಗಳಿಗೂ ಅದ್ಭುತ ಮದ್ದು  

ತೂಕ ನಿಯಂತ್ರಣ: 


ರಾಗಿಯಲ್ಲಿ ಟ್ರಿಪ್ಟೋಫಾನ್ ಎಂಬ ಪೋಷಕಾಂಶವಿದ್ದು ಇದು ಹೆಚ್ಚು ಕಾಲ ಹೊಟ್ಟೆ ತುಂಬಿರುವ ಭಾವನೆಯನ್ನು ನೀಡುತ್ತದೆ. ಅಷ್ಟೇಯಲ್ಲದೆ, ರಾಗಿಯನ್ನು ಅರಗಿಸಿಕೊಳ್ಳಲು ದೇಹದಲ್ಲಿ ಅಧಿಕ ಕೊಬ್ಬು ಬಳಕೆಯಾಗುವುದರಿಂದ ಇದು ತೂಕ ಇಳಿಕೆಗೆ ಕೊಡುಗೆ ನೀಡುತ್ತದೆ. 

ಮೂಳೆಗಳಿಗೆ ಬಲ: 


ರಾಗಿಯು ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದೆ. ಮಾತ್ರವಲ್ಲ, ಇದರಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದ್ದು ಇದು ಉತ್ತಮ ಪ್ರಮಾಣದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳಲು ನೆರವಾಗುತ್ತದೆ. ಹಾಗಾಗಿ ಆಹಾರದಲ್ಲಿ ರಾಗಿ ಇದ್ದಲ್ಲಿ ಮೂಳೆಗಳು ಬಲಿಷ್ಠಗೊಳ್ಳುತ್ತವೆ. 

ಕೊಲೆಸ್ಟ್ರಾಲ್ ನಿಯಂತ್ರಣ: 


ರಾಗಿಯಲ್ಲಿ ಅಮೈನೋಆಮ್ಲಗಳಿದ್ದು ಇದು ರಕ್ತನಾಳಗಳ ಒಳಗೆ ಅಂಟಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಒಡೆಯಲು, ಅವುಗಳನ್ನು ಕರಗಿಸಿ ವಿಸರ್ಜಿಸಲು ಆಯುಧದಂತೆ ಕಾರ್ಯನಿರ್ವಹಿಸುತ್ತದೆ. 

ಇದನ್ನೂ ಓದಿ- ಮಧುಮೇಹಕ್ಕೆ ಪರಮೌಷಧ ಈ ಎಲೆ! ಜಜ್ಜಿ ರಸ ಕುಡಿದ್ರೆ ಸಂಪೂರ್ಣ ನಾರ್ಮಲ್‌ ಆಗುತ್ತೆ ಶುಗರ್‌..   

ಫ್ಯಾಟಿ ಲಿವರ್: 


ಫ್ಯಾಟಿ ಲಿವರ್ ಸಮಸ್ಯೆ ಇರುವವರಿಗೂ ರಾಗಿ ಅತ್ಯುತ್ತಮ ಆಹಾರ. ರಾಗಿಯಲ್ಲಿರುವ ಮೀಥಿಯೋನೈನ್ ಮತ್ತು ಲಿಸೈಥಿನ್ ಎಂಬ ಪೋಷಕಾಂಶಗಳು ಯಕೃತ್ ನಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸುವಲ್ಲಿ ಪರಿಣಾಮಕಾರಿ ಔಷಧಿಯಾಗಿವೆ. 

ಥೈರಾಯ್ಡ್‌ನಿಂದ ರಕ್ಷಣೆ: 


ರಾಗಿಯಲ್ಲಿ ಕಬ್ಬಿಣಾಂಶ ಹೇರಳವಾಗಿದ್ದು ಇದು ಹೈಪೋಥೈರಾಯ್ಡ್‌ನಿಂದ ಬಳಲುತ್ತಿರುವವರಿಗೆ ಅತ್ಯುತ್ತಮ ಆಹಾರವಾಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News