Remdesivir Injection ಬೆಲೆಯನ್ನು ರೂ.2000ರಷ್ಟು ಇಳಿಕೆ ಮಾಡಿದ ಕೇಂದ್ರ ಸರ್ಕಾರ

Remdesivir Injection - ಕೇಂದ್ರ ಸರ್ಕಾರವು ರೆಮ್ಡಿಸಿವಿರ್ ಇಂಜೆಕ್ಷನ್ (Remdesivir Injection) ಬೆಲೆಯನ್ನು ಕಡಿಮೆಗೊಳಿಸಿ ದೇಶದ ಕರೋನಾ ರೋಗಿಗಳಿಗೆ ಹೆಚ್ಚಿನ ಪರಿಹಾರ ನೀಡಿದೆ. ಈ ಚುಚ್ಚುಮದ್ದಿನ ಬೆಲೆಯನ್ನು ಸರ್ಕಾರ (Modi Government)ಎರಡು ಸಾವಿರ ರೂಗಳಷ್ಟು ಕಡಿತ ಮಾಡಿದೆ   

Written by - Nitin Tabib | Last Updated : Apr 17, 2021, 08:05 PM IST
  • ಕೊರೊನಾ ಚಿಕಿತ್ಸೆಯಲ್ಲಿ ಬಳಕೆಯಾಗುತ್ತದೆ ರೆಮ್ದೆಸಿವಿರ್
  • ಬೆಲೆ ಇಳಿಕೆಗೆ ಸರ್ಕಾರದಿಂದ ಒತ್ತಡ
  • ಉತ್ಪಾದನೆಯನ್ನು ಕೂಡ ಹೆಚ್ಚಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
Remdesivir Injection ಬೆಲೆಯನ್ನು ರೂ.2000ರಷ್ಟು ಇಳಿಕೆ ಮಾಡಿದ ಕೇಂದ್ರ ಸರ್ಕಾರ title=
Remdesivir Injection (File Photo)

ನವದೆಹಲಿ:  Remdesivir Injection - ಕೇಂದ್ರ ಸರ್ಕಾರವು ರೆಮ್ಡಿಸಿವಿರ್ ಇಂಜೆಕ್ಷನ್ (Remdesivir Injection) ಬೆಲೆಯನ್ನು ಕಡಿಮೆಗೊಳಿಸಿ ದೇಶದ ಕರೋನಾ ರೋಗಿಗಳಿಗೆ ಹೆಚ್ಚಿನ ಪರಿಹಾರ ನೀಡಿದೆ. ಈ ಚುಚ್ಚುಮದ್ದಿನ ಬೆಲೆಯನ್ನು ಸರ್ಕಾರ 2 ಸಾವಿರ ರೂ.ಗಳಷ್ಟು ಇಳಿಕೆ ಮಾಡಿದೆ.

ಕೊರೊನಾ (Covid-19) ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ
ದೇಶದ 7 ವಿವಿಧ ಕಂಪನಿಗಳು ರೆಮ್ದೆಸಿವಿರ್ ಇಂಜೆಕ್ಷನ್ ಉತ್ಪಾದಿಸುತ್ತವೆ. ಕೊರೊನಾ ವೈರಸ್ ಚಿಕಿತ್ಸೆಯಲ್ಲಿ (Corona Treatment)ಈ ಇಂಜೆಕ್ಷನ್ ಅನ್ನು ಬಳಸಲಾಗುತ್ತದೆ. ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ವ್ಯಾಪಕ ಏರಿಕೆಯಾದ ಬಳಿಕ ಈ ಇಂಜೆಕ್ಷನ್ ಬೇಡಿಕೆ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆ ಈ ಇಂಜೆಕ್ಷನ್ ಬೆಲೆಯನ್ನು ಕಡಿತಗೊಳಿಸಿ ಸಾಮಾನ್ಯ ನಾಗರಿಕರಿಗೆ ಸರ್ಕಾರ ಭಾರಿ ನೆಮ್ಮದಿಯನ್ನೇ ನೀಡುವ ಪ್ರಯತ್ನ ಮಾಡಿದೆ.

ಇದನ್ನೂ ಓದಿ- ದೇಶದ ಆರೋಗ್ಯ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಏಮ್ಸ್ ಮುಖ್ಯಸ್ಥ

ಬೆಲೆ ಕಡಿತಗೊಳಿಸಲು ಒತ್ತಡ ಹೇರಿದ ಸರ್ಕಾರ
ಈ ಇಂಜೆಕ್ಷನ್ ಬೆಲೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಇಂಜೆಕ್ಷನ್ ಬೆಲೆಯನ್ನು ಕಡಿತಗೊಳಿಸಲು ಕೇಂದ್ರ ರಾಸಾಯನಿಕ ಗೊಬ್ಬರಗಳ ಸಚಿವಾಲಯ ಕಳೆದ ಎರಡು ದಿನಗಳಿಂದ ಕಂಪನಿಗಳ ಜೊತೆಗೆ ನಿರಂತರ ಸಭೆ ನಡೆಸುತ್ತಿತ್ತು. ಈ ಔಷಧಿಯ ಬೆಲೆ ಇಳಿಕೆಯೊಂದಿಗೆ ಅದರ ಉತ್ಪಾದನೆಯು ಹೆಚ್ಚಿಸುವುದು ಸರ್ಕಾರದ ಪ್ರಯತ್ನವಾಗಿದೆ.

ಇದನ್ನೂ ಓದಿ- Maharashtra Coronavirus Update - ಮಹಾರಾಷ್ಟ್ರದಲ್ಲಿ ಲಾಕ್ಡೌನ್, ಕರ್ಫ್ಯೂ ವಿಧಿಸಿದರೂ ಕೂಡ 398 ಜನರ ಪ್ರಾಣ ತೆಗೆದ ಕೊರೊನಾ

ಉತ್ಪಾದನೆಯನ್ನು ಹೆಚ್ಚಿಸಲು ಉತ್ತೇಜನ ನೀಡುತ್ತಿದೆ ಸರ್ಕಾರ
ಪ್ರಸ್ತುತ 7 ಭಾರತೀಯ ಕಂಪನಿಗಳಾಗಿರುವಮೆಸರ್ಸ್ ಗಿಲ್ಡ್ ಸೈನ್ಸೆಸ್, ಅಮೆರಿಕಾದ ಜೊತೆಗೆ ಸ್ವಯಂಪ್ರೇರಿತ ಲೈಸಂಸಿಂಗ್ ಅಡಿ ರೆಮ್ದೆಸಿವಿರ್ (Remdesivir) ಇಂಜೆಕ್ಷನ್ ಉತ್ಪಾದನೆಯನ್ನು ಮಾಡುತ್ತಿವೆ. ಈ ಕಂಪನಿಗಳ ಬಳಿ ಪ್ರತಿ ತಿಂಗಳು ಸುಮಾರು 38.80 ಲಕ್ಷ ಯುನಿಟ್ ಔಷಧಿ ತಯಾರಿಸುವ ಕ್ಷಮತೆ ಹೊಂದಿವೆ. ಈ ಕ್ಷಮತೆಯನ್ನು 50 ಲಕ್ಷ ಯುನಿಟ್ ಗೆ ಹೆಚ್ಚಾಗಬೇಕುಎಂಬುದು ಸರ್ಕಾರದ ಉದ್ದೇಶ. ಇದರಿಂದ ಕೊರೊನಾ (Coronavirus) ರೋಗಿಗಳ ಚಿಕಿತ್ಸೆಯಲ್ಲಿ ವೇಗ ಬರಲಿ ಎಂಬುದ ಸರ್ಕಾರದ ಆಶಯ.

ಇದನ್ನೂ ಓದಿ-Covid-19 Symptoms In Kids: ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೊಳಪಡಿಸಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News