ಬೇಸಿಗೆಯಲ್ಲಿ ಈ ಹೊತ್ತಿನಲ್ಲಿ 20 ನಿಮಿಷಗಳ ಕಾಲ ವಾಕ್ ಮಾಡಿದರೆ ಸಾಕು ದೇಹ ತೂಕ ಸುಲಭವಾಗಿ ಕಳೆದುಕೊಳ್ಳಬಹುದು !

What is the right time of walking: ಆರೋಗ್ಯ ಮತ್ತು ಫಿಟ್‌ನೆಸ್‌ಗೆ ನಡಿಗೆ ಪ್ರಯೋಜನಕಾರಿ ಮತ್ತು ಅವಶ್ಯಕ. ಆದರೆ, ನೀವು ಸರಿಯಾದ ಸಮಯಕ್ಕೆ ವಾಕ ಮಾಡದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

Written by - Ranjitha R K | Last Updated : Apr 10, 2025, 01:14 PM IST
  • ಬೇಸಿಗೆಯ ಕಾಲದಲ್ಲಂತೂ ಗಾಳಿಯ ಉಷ್ಣತೆಯೂ ಹೆಚ್ಚಾಗಿರುತ್ತದೆ.
  • ಬೇಸಿಗೆಯಲ್ಲಿ ನಡೆಯಲು ಸರಿಯಾದ ಸಮಯ ಯಾವುದು?
  • ಬೇಸಿಗೆಯಲ್ಲಿ ಶಾಖದ ಹೊಡೆತ ಅಥವಾ ಬಿಸಿಲಿನ ಹೊಡೆತದ ಅಪಾಯವೂ ಇದೆ.
ಬೇಸಿಗೆಯಲ್ಲಿ ಈ ಹೊತ್ತಿನಲ್ಲಿ 20 ನಿಮಿಷಗಳ ಕಾಲ ವಾಕ್ ಮಾಡಿದರೆ ಸಾಕು ದೇಹ ತೂಕ ಸುಲಭವಾಗಿ ಕಳೆದುಕೊಳ್ಳಬಹುದು !

What is the right time of walking : ಜಿಮ್‌ಗೆ ಹೋಗಲು ಇಷ್ಟಪಡದವರು, ಭಾರೀ ವ್ಯಾಯಾಮ ಮಾಡಲು ಸಮಯ ಸಿಗದವರು ಸ್ವಲ್ಪ ಹೊತ್ತು ನಡೆಯುವ ಮೂಲಕ ಫಿಟ್ ಆಗಿರುವುದುಖಂದಿತಾ ಸಾಧ್ಯ. ಆದರೆ, ಯಾವ ಸಮಯದಲ್ಲಿ ವಾಕ್ ಮಾಡಿದರೆ ಅನುಕೂಲಕರ ಎನ್ನುವ ಅಂಶ ತಿಳಿದಿರಬೇಕು. ಯಾವಾಗ ಸಮಯ ಸಿಗುತ್ತದೆಯೂ ಆ ಸಮಯದಲ್ಲಿ ವಾಕ್ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಇನ್ನು ಬೇಸಿಗೆಯಲ್ಲಿ ವಾಕ್ ಮಾಡುವ ಸಮಯ ಬಹಳ ಮುಖ್ಯವಾಗುತ್ತದೆ. ಬೇಸಿಗೆಯಲ್ಲಿ ಈ ಸಮಯಕ್ಕೆ ವಾಕ್ ಮಾಡಿದರೆ ಮಾತ್ರ ಫಿಟ್ ಆಗಿರುವುದು ಸಾಧ್ಯವಾಗುತ್ತದೆ. ಇಲ್ಲವಾದರೆ ನಿಮ್ಮ ಪರಿಶ್ರಮಕ್ಕೆ ಯಾವುದೇ ಬೆಲೆ ಇರುವುದಿಲ್ಲ. 

Add Zee News as a Preferred Source

ಬೇಸಿಗೆಯ ಕಾಲದಲ್ಲಂತೂ ಗಾಳಿಯ ಉಷ್ಣತೆಯೂ ಹೆಚ್ಚಾಗಿರುತ್ತದೆ. ಶಾಖ, ಆರ್ದ್ರತೆ ಮತ್ತು ಸೂರ್ಯನ ಬೆಳಕಿನಿಂದಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅದೇ ರೀತಿ, ಬೇಸಿಗೆಯಲ್ಲಿ ಶಾಖದ ಹೊಡೆತ ಅಥವಾ ಬಿಸಿಲಿನ ಹೊಡೆತದ ಅಪಾಯವೂ ಇದೆ. ತಪ್ಪು ಸಮಯದಲ್ಲಿ ವಾಕ್ ಮಾಡುವುದರಿಂದ ಬಿಪಿ, ಸಕ್ಕರೆ ಮತ್ತು ಹೃದ್ರೋಗಿಗಳಿಗೆ  ಹಾನಿಕಾರಕವಾಗಿ ಪರಿಣಮಿಸುವುದು. ಹಾಗಾಗಿ ಬೇಸಿಗೆಯಲ್ಲಿ ವಾಕ್ ಮಾಡುವಾಗ ಸಮಯದ ಬಗ್ಗೆ ಕಾಳಜಿ ವಹಿಸಬೇಕು. 

ಇದನ್ನೂ ಓದಿ : Top 10 Series: ಕರ್ನಾಟಕದಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳನ್ನು ಹೊಂದಿರುವ 10 ಜಿಲ್ಲೆಗಳು..!

ಬೇಸಿಗೆಯಲ್ಲಿ ನಡೆಯಲು ಸರಿಯಾದ ಸಮಯ ಯಾವುದು? : 
ಬೇಸಿಗೆಯಲ್ಲಿ ಬೆಳಿಗ್ಗೆ ಬೇಗನೆ ವಾಕ್ ಹೋಗುವುದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಬೆಳಿಗ್ಗೆ 5:30 ರಿಂದ 7:30 ರವರೆಗೆ ಸ್ವಲ್ಪ ಅನುಕೂಲಕರ ಮತ್ತು ಆರಾಮದಾಯಕವಾಗಿರುತ್ತದೆ. ಈ ಸಮಯದಲ್ಲಿ ತಾಪಮಾನವು ಸಾಮಾನ್ಯವಾಗಿಯೇ ಇರುತ್ತದೆ. ಅದೇ ರೀತಿ, ವಾಯು ಮಾಲಿನ್ಯದ ಮಟ್ಟವೂ ಕಡಿಮೆಯಾಗುತ್ತದೆ. 

ಈ ಸಮಯದಲ್ಲಿ ಸಂಜೆ ವಾಕಿಂಗ್‌ಗೆ ಹೋಗಿ : 
ಬೆಳಿಗ್ಗೆ ಬದಲು ಸಂಜೆ ವಾಕಿಂಗ್ ಹೋಗುವವರು ಸೂರ್ಯಾಸ್ತದ ನಂತರ ವಾಕಿಂಗ್ ಹೋಗಬೇಕು. ಸಂಜೆಯ ಹೊತ್ತಿಗೆ ಗಾಳಿಯ ತಂಪು ಹೆಚ್ಚಾಗುತ್ತದೆ ಹಾಗಾಗಿ ಸುಲಭವಾಗಿ ವಾಕ್ ಮಾಡಬಹುದು. ಅದೇ ರೀತಿ, ಬೆಳಿಗ್ಗೆ 11 ರಿಂದ ಬೆಳಿಗ್ಗೆ 4 ರವರೆಗೆ ಎಂದಿಗೂ ವಾಕ್ ಗೆ ಹೋಗಬೇಡಿ. ಈ ಸಮಯದಲ್ಲಿ ಸೂರ್ಯನ ಬೆಳಕು ಆರೋಗ್ಯ ಮತ್ತು ಚರ್ಮ ಎರಡಕ್ಕೂ ಹಾನಿಕಾರಕವಾಗಿದೆ.  

ಒಬ್ಬ ವ್ಯಕ್ತಿ ಎಷ್ಟು ಹೊತ್ತು ವಾಕ್ ಮಾಡಬೇಕು ? :
ನೀವು ನಿಯಮಿತವಾಗಿ ನಡೆಯದಿದ್ದರೆ, ಮೊದಲು 15-20 ನಿಮಿಷಗಳ ಕಾಲ ನಡೆಯಿರಿ. ನಂತರ, ಕ್ರಮೇಣ ಸಮಯವನ್ನು ಹೆಚ್ಚಿಸಿ. ಸಾಮಾನ್ಯವಾಗಿ 30-45 ನಿಮಿಷಗಳ ನಡಿಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಫಿಟ್ನೆಸ್ ಫ್ರೀಕ್‌ಗಳು ಅಥವಾ ಹೆಚ್ಚಿನ ದೈಹಿಕ ಚಟುವಟಿಕೆಗಳನ್ನು ಮಾಡುವವರು 60 ನಿಮಿಷಗಳ ಕಾಲ ನಡೆಯಬಹುದು.

ಇದನ್ನೂ ಓದಿ :  ಬೆಳಗಿನ ಜಾವ ಬಿಸಿನೀರಿಗೆ ಈ ಪುಡಿ ಬೆರೆಸಿ ಕುಡಿದ್ರೆ ಕ್ಷಣಾರ್ಧದಲ್ಲೇ ಕರಗಿ ಹೋಗುತ್ತೆ ಯೂರಿಕ್‌ ಆಸಿಡ್!‌ ಲಿವರ್‌ ಆರೋಗ್ಯಕ್ಕೂ ಇದೇ ದಿವ್ಯೌಷಧ..

ಬೇಸಿಗೆಯಲ್ಲಿ ನಡೆಯುವಾಗ ಈ ಸಲಹೆಗಳನ್ನು ನೆನಪಿನಲ್ಲಿಡಿ : 
ಬೇಸಿಗೆಯಲ್ಲಿ ಹೆಚ್ಚು ಹೊತ್ತು ನಡೆಯುವುದರಿಂದ ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ವಾಕ್ ಗೆ ಮುನ್ನ ಸ್ವಲ್ಪ ನೀರು ಕುಡಿಯಲು ಮರೆಯಬೇಡಿ.ಅದೇ ರೀತಿ, ವಾಕ್ ಮುಗಿದ ಬಳಿಕವೂ ನೀರು ಕುಡಿಯಲು ಮರೆಯಬೇಡಿ. ವಾಕ್ ಮಾಡುವಾಗ ತಿಳಿ ಹತ್ತಿ ಬಟ್ಟೆಗಳನ್ನು ಧರಿಸಿ. ವಾಕ್ ಮಾಡುತ್ತಿರುವಾಗ ಏನಾದರೂ ತೊಂದರೆಯಾದರೆ, ದೌರ್ಬಲ್ಯ ಅಥವಾ ತಲೆಸುತ್ತುವುದು ಕಂಡು ಬಂದರೆ ತಕ್ಷಣ ವಾಕ್ ನಿಲ್ಲಿಸಿ ಬಿಡಿ. 

ಬೇಸಿಗೆಯಲ್ಲಿ ನಡೆಯುವುದರಿಂದ ಏನು ಪ್ರಯೋಜನ?:
ಬೇಸಿಗೆಯ ದಿನಗಳಲ್ಲಿ ವಾಕ್ ಮಾಡಿದರೆ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ, ಬಿಪಿ ಮತ್ತು ಕೊಲೆಸ್ಟ್ರಾಲ್ ಮಟ್ಟವು ನಾರ್ಮಲ್ ಆಗಿರುತ್ತದೆ. ಇದಲ್ಲದೆ, ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News