)
ಬೆಂಗಳೂರು : ಸೌತೆಕಾಯಿ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೌತೆಕಾಯಿಯಲ್ಲಿ ಬಹಳಷ್ಟು ನೀರು ಇದ್ದು, ಇದು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವ ಮೂಲಕ ಹೊಟ್ಟೆಯನ್ನು ಫಿಟ್ ಆಗಿಡುತ್ತದೆ.
ಸೌತೆಕಾಯಿಯಲ್ಲಿ ಭರಪೂರ ಪ್ರಮಾಣದ ಪೋಷಕಾಂಶಗಳು ಅಡಗಿವೆ. ಆದರೂ ಕೂಡಾ ಎಲ್ಲರ ಆರೋಗ್ಯಕ್ಕೆ ಈ ತರಕಾರಿ ಸರಿ ಹೊಂದುವುದಿಲ್ಲ. ಕೆಲವು ಸಮಸ್ಯೆಗಳಿದ್ದರೆ ತಪ್ಪಿಯೂ ಸೌತೆಕಾಯಿಯನ್ನು ತಿನ್ನುವಂತಿಲ್ಲ.
ಇದನ್ನೂ ಓದಿ : ಮಧುಮೇಹ ರೋಗಿಗಳು ಈರುಳ್ಳಿ ತಿಂದರೆ ಏನಾಗುತ್ತದೆ ಗೊತ್ತಾ?
ಮೂತ್ರ ವಿಸರ್ಜನೆಯ ಸಮಸ್ಯೆ :
ಸೌತೆಕಾಯಿಯನ್ನು ನೈಸರ್ಗಿಕ ಮೂತ್ರವರ್ಧಕ ಹಣ್ಣು ಎಂದು ಕರೆಯಲಾಗುತ್ತದೆ. ಆದ್ದರಿಂದ, ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆ ಇರುವವರು ಸೌತೆಕಾಯಿಯನ್ನು ಕಡಿಮೆ ತಿನ್ನಬೇಕು ಅಥವಾ ತಿನ್ನಲೇಬಾರದು. ಇಲ್ಲವಾದರೆ ಪದೇ ಪದೇ ಮೂತ್ರ ವಿಸರ್ಜನೆಯ ಸಮಸ್ಯೆ ಮೊದಲಿಗಿಂತ ಹೆಚ್ಚಾಗಬಹುದು.
ಶೀತ, ಕೆಮ್ಮು, ಜ್ವರ :
ಶೀತ, ಕೆಮ್ಮು, ಜ್ವರ ಅಥವಾ ಕಫದ ಸಮಸ್ಯೆ ಇರುವವರು ಸೌತೆಕಾಯಿಯನ್ನು ತಿನ್ನಬಾರದು. ಸೌತೆಕಾಯಿ ಶೀತದ ಗುಣವನ್ನು ಹೊಂದಿದೆ. ಇದರಿಂದಾಗಿ ಅನಾರೋಗ್ಯದ ಸಮಯದಲ್ಲಿ ಇದನ್ನು ತಿನ್ನುವುದರಿಂದ ಆರೋಗ್ಯ ಮತ್ತಷ್ಟು ಹದಗೆಡಬಹುದು.
ಅಲರ್ಜಿ :
ಅಲರ್ಜಿ ಇರುವವರು ಸೌತೆಕಾಯಿ ತಿನ್ನುವುದನ್ನು ತಪ್ಪಿಸಬೇಕು. ಅದು ಊತ, ಹೊಟ್ಟೆ ನೋವು ಅಥವಾ ತುರಿಕೆಗೆ ಕಾರಣವಾಗಬಹುದು.
ಹೊಟ್ಟೆ ಸಮಸ್ಯೆ :
ಹೊಟ್ಟೆ ಸಮಸ್ಯೆ ಇರುವವರು ಸೌತೆಕಾಯಿಯನ್ನು ಹೆಚ್ಚು ತಿನ್ನಬಾರದು. ಇದರಲ್ಲಿ ನಾರಿನಂಶ ಇರುವುದರಿಂದ ಕಡಿಮೆ ಪ್ರಮಾಣದಲ್ಲಿ ತಿಂದರೆ ಪ್ರಯೋಜನಕಾರಿ. ಆದರೆ, ಹೆಚ್ಚು ತಿಂದರೆ ಅಜೀರ್ಣ, ಗ್ಯಾಸ್ ಅಥವಾ ಹೊಟ್ಟೆ ಉಬ್ಬುವ ಸಮಸ್ಯೆ ಎದುರಿಸಬಹುದು.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.