Healthy Life : ಮಾಂಸಾಹಾರಿಗಳು ಹೆಚ್ಚಾಗಿ ಮಟನ್, ಚಿಕನ್ ಮತ್ತು ಮೀನು ತಿನ್ನಲು ಇಷ್ಟಪಡುತ್ತಾರೆ. ಆದರೆ ಅದೇ ಸಮಯದಲ್ಲಿ, ಅನೇಕರು ಊಟವಾದ ನಂತರ ಸಿಹಿ ಅಥವಾ ತಣ್ಣನೆಯ ಐಸ್ ಕ್ರೀಮ್ ತಿನ್ನಲು ಬಯಸುತ್ತಾರೆ. ಮೀನು ತಿಂದ ನಂತರ ಹಾಲು, ಚಹಾ ಇತ್ಯಾದಿಗಳನ್ನು ಕುಡಿಯಬಾರದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಮೀನು ತಿಂದ ನಂತರ ಐಸ್ ಕ್ರೀಮ್ ತಿನ್ನುವುದು ಸರಿಯೇ? ಬನ್ನಿ ನೋಡೋಣ..
ಮೀನು ತಿಂದ ನಂತರ ಹಾಲು ಅಥವಾ ಡೈರಿ ಉತ್ಪನ್ನಗಳ ಜೊತೆಗೆ ಮೀನನ್ನು ಸೇವಿಸಬೇಡಿ. ಇದು ಹೊಟ್ಟೆಯ ಸಮಸ್ಯೆಗಳ ಜೊತೆಗೆ ಚರ್ಮದ ಸಮಸ್ಯೆಗಳಿಗೂ ಕಾರಣವಾಗಬಹುದು. ಆದರೆ ಮೀನು ತಿಂದ ನಂತರ ನೀವು ಐಸ್ ಕ್ರೀಮ್ ತಿನ್ನಬಹುದು, ನೆನಪಿನಲ್ಲಿಡಿ ಇದು ಕೆಲವರಿಗೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡಬಹುದು. ವಿಷೇಶವಾಗಿ ನಿಮಗೆ ನಿರ್ದಿಷ್ಟ ಅಲರ್ಜಿ ಸಮಸ್ಯೆ ಇದ್ದರೆ, ಐಸ್‌ಕ್ರೀಮ್ ತಿನ್ನಬೇಡಿ.. ಮೀನು ತಿಂದ ನಂತರ ಐಸ್ ಕ್ರೀಮ್ ತಿನ್ನುವ ಮೊದಲು ನೆನಪಿಡಬೇಕಾದ ವಿಷಯಗಳು ಈ ಕೆಳಗಿನಂತಿವೆ..
ಇದನ್ನೂ ಓದಿ:ಈ ಮಹಿಳೆಯರಲ್ಲಿ ಕಾಣಿಸುವ ಈ ಲಕ್ಷಣಗಳು ಗರ್ಭಕಂಠದ ಕ್ಯಾನ್ಸರ್ ಗೆ ಕಾರಣವಾಗಬಹುದು..! ನಿರ್ಲಕ್ಷಿಸಬೇಡಿ..!
ಸ್ವಲ್ಪ ಸಮಯದ ನಂತರ ತಿನ್ನಿರಿ: ಮೀನು ತಿಂದ ನಂತರ ಐಸ್ ಕ್ರೀಮ್ ತಿನ್ನುವ ಮೊದಲು ಸ್ವಲ್ಪ ಸಮಯ ಕಳೆಯಲು ಬಿಡಿ. ಫಿಶ್ ತಿಂದ ತಕ್ಷಣ ಐಸ್ ಕ್ರೀಮ್ ತಿನ್ನುವ ಬದಲು, ಕನಿಷ್ಠ ಒಂದರಿಂದ ಒಂದೂವರೆ ಗಂಟೆಗಳ ಕಾಲ ಕಾಯಲು ಪ್ರಯತ್ನಿಸಿ. ಒಂದು ವೇಳೆ ತಿಂದರೆ, ಯಾವುದೇ ಅಸ್ವಸ್ಥತೆ ಉಂಟಾದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಅಲರ್ಜಿ: ನಿಮಗೆ ಯಾವುದೇ ರೀತಿಯ ಅಲರ್ಜಿಗಳು ಅಥವಾ ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಇದ್ದರೆ, ಎರಡನ್ನೂ ಒಟ್ಟಿಗೆ ತಿನ್ನುವುದನ್ನು ತಪ್ಪಿಸಿ ಅಥವಾ ಸಾಧ್ಯವಾದರೆ, ಮೀನು ತಿಂದ ನಂತರ ಡೈರಿ ಉತ್ಪನ್ನಗಳನ್ನು ತಿನ್ನಲು ಹೋಗಬೇಡಿ. ಆದ್ದರಿಂದ ಐಸ್ ಕ್ರೀಮ್ ತಿನ್ನುವುದನ್ನು ತಪ್ಪಿಸುವುದು ಯಾವಾಗಲೂ ಉತ್ತಮ.
ಇದನ್ನೂ ಓದಿ:ರಕ್ತನಾಳಗಳಲ್ಲಿ ಅಂಟಿ ಕುಳಿತ ಕೆಟ್ಟ ಕೊಲೆಸ್ಟ್ರಾಲ್ ಕರಗಿಸುವ ಧಾನ್ಯಗಳು! ತೂಕ ಇಳಿಕೆಗೂ ಇವಷ್ಟೇ ಮದ್ದು..
ಹಾಲು ಅಥವಾ ಡೈರಿ ಉತ್ಪನ್ನಗಳು: ಮೀನು ಊಟ ತಿಂದ ನಂತರ ಹಾಲು ಅಥವಾ ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ತಪ್ಪಿಸಿ. ಕೆಲವರು ಮೊಸರು ಅಥವಾ ಹಾಲಿನಲ್ಲಿ ಮೀನು ಬೇಯಿಸುತ್ತಾರೆ. ಇದು ಒಳ್ಳೆಯದಲ್ಲ. ಹಾಲು, ಮೊಸರು ಅಥವಾ ಇತರ ಡೈರಿ ಉತ್ಪನ್ನಗಳೊಂದಿಗೆ ಮೀನು ತಿನ್ನುವುದು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ.
ಸಿಟ್ರಸ್ ಹಣ್ಣುಗಳು: ಸಿಟ್ರಸ್ ಹಣ್ಣುಗಳೊಂದಿಗೆ ಮೀನು ತಿನ್ನುವುದನ್ನು ತಪ್ಪಿಸಿ. ಕೆಲವರು ಸಲಾಡ್‌ಗಳಿಗೆ ಸಿಟ್ರಸ್ ಹಣ್ಣುಗಳನ್ನು ಸೇರಿಸಿ ಮೀನಿನೊಂದಿಗೆ ತಿನ್ನುತ್ತಾರೆ. ಮೀನು ಮತ್ತು ಸಿಟ್ರಸ್ ಹಣ್ಣುಗಳ ಸಂಯೋಜನೆಯು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ನಿಂಬೆಹಣ್ಣು, ಕಿತ್ತಳೆ, ಟೊಮೆಟೊ ಮತ್ತು ಕಿವಿಯಂತಹ ಸಿಟ್ರಸ್ ಹಣ್ಣುಗಳು ಆಮ್ಲೀಯವಾಗಿವೆ. ಮೀನು ಪ್ರೋಟೀನ್‌ನ ಪ್ರಮುಖ ಮೂಲವಾಗಿದೆ. ಈ ಎರಡು ಪದಾರ್ಥಗಳು ಒಟ್ಟಿಗೆ ಸೇರಿದಾಗ, ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: ಚಹಾ ಕುಡಿದ ನಂತರ ಈ ಆಹಾರಗಳನ್ನು ಅಪ್ಪಿ ತಪ್ಪಿನೂ ತಿನ್ನಬೇಡಿ! ಆರೋಗ್ಯ ಹಾಳಾಗುವುದಲ್ಲ, ಅಪಾಯಕಾರಿ ರೋಗ ಬರೋದು ಫಿಕ್ಸ್
ಆಲೂಗಡ್ಡೆ ಮತ್ತು ಪಾಸ್ತಾ: ಆಲೂಗಡ್ಡೆ ಮತ್ತು ಪಾಸ್ತಾದಂತಹ ಹೆಚ್ಚಿನ ಪಿಷ್ಟಯುಕ್ತ ಆಹಾರಗಳೊಂದಿಗೆ ಮೀನುಗಳನ್ನು ತಿನ್ನುವುದನ್ನು ಸಹ ನೀವು ತಪ್ಪಿಸಬೇಕು. ಇದು ಹೆಚ್ಚಿನ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟ್ ಸೇವನೆಗೆ ಕಾರಣವಾಗಬಹುದು. ಅಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ನಿಧಾನಗೊಳಿಸುತ್ತದೆ.









