)
Late Night Sleep
: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂದು ಅನೇರಕು ರಾತ್ರಿ ಬೇಗನೆ ಮಲಗುವುದಿಲ್ಲ. ದಿನದ ೨೪ ಗಂಟೆಯೂ ಮೊಬೈಲ್ನಲ್ಲಿ ಮುಳುಗಿರುತ್ತಾರೆ. ರಾತ್ರಿ ಹೊತ್ತು ತುಂಬಾ ಎಚ್ಚರವಾಗಿದ್ದರೆ ನಮ್ಮ ದೇಹದ ಮೇಲೆ ದೊಡ್ಡಮಟ್ಟದ ಹಾನಿಯುಂಟಾಗುತ್ತದೆ. ಅನೇಕ ಮಾರಕ ಕಾಯಿಲೆಗಳು ನಮ್ಮನ್ನ ಸುತ್ತುವರಿಯುತ್ತವೆ. ಹೀಗಾಗಿ ರಾತ್ರಿ ಹೊತ್ತು ಬೇಗನೆ ಮಲಗುವುದು ಆರೋಗ್ಯಕ್ಕೆ ಉತ್ತಮ. ರಾತ್ರಿ ತುಂಬಾ ಎಚ್ಚರವಾಗಿರುವುದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ರಾತ್ರಿ ಹೊತ್ತು ತುಂಬಾ ಎಚ್ಚರವಾಗಿದ್ದರೆ ಏನಾಗುತ್ತದ ಎಂಬುದರ ಬಗ್ಗೆ ತಿಳಿಯಿರಿ...
ಜೈವಿಕ ಗಡಿಯಾರ: ರಾತ್ರಿಯಲ್ಲಿ ಹೆಚ್ಚು ಹೊತ್ತು ಎಚ್ಚರವಾಗಿರುವುದು ನಿಮ್ಮ ದೇಹದ ಜೈವಿಕ ಗಡಿಯಾರ(Biological clock)ಕ್ಕೆ ಅಡ್ಡಿಪಡಿಸಬಹುದು. ಇದು ನಿಮ್ಮ ದೇಹದ ಮೇಲೆ ದೊಡ್ಡಮಟ್ಟದ ಹಾನಿಯನ್ನುಂಟು ಮಾಡುತ್ತದೆ.
ಮೆದುಳಿನ ಕಾರ್ಯ: ರಾತ್ರಿ ಹೊತ್ತಿನಲ್ಲಿ ಸಾಕಷ್ಟು ನಿದ್ರೆ ಬರದಿದ್ದರೆ ಮೆದುಳಿನ ಕಾರ್ಯ ಕಡಿಮೆಯಾಗುತ್ತದೆ. ಇದರಿಂದ ಏಕಾಗ್ರತೆಯ ಕೊರತೆ, ಮರೆವು ಮುಂತಾದ ಸಮಸ್ಯೆಗಳು ಉಂಟಾಗಬಹುದು.
ಆಯಾಸ: ರಾತ್ರಿ ಹೊತ್ತು ಬೇಗನೆ ಮಲಗದಿದ್ದರೆ, ತುಂಬಾ ಹೊತ್ತು ಎಚ್ಚರವಾಗಿದ್ದರೆ ಮರುದಿನ ಸುಸ್ತಾಗಿರುತ್ತದೆ. ನಿಮ್ಮ ಶಕ್ತಿಯ ಮಟ್ಟವೂ ಕಡಿಮೆಯಾಗುತ್ತದೆ.
ಒತ್ತಡ: ರಾತ್ರಿ ವೇಳೆ ನಿದ್ರೆಯ ಕೊರತೆಯು ಕಿರಿಕಿರಿ ಮತ್ತು ಒತ್ತಡವನ್ನ ಹೆಚ್ಚಿಸುತ್ತದೆ. ಈ ಒತ್ತಡದಿಂದ ನಿಮ್ಮ ದೇಹಕ್ಕೆ ಮಾರಕ ಹಾನಿಯನ್ನುಂಟು ಮಾಡುತ್ತದೆ.
ರೋಗನಿರೋಧಕ ಶಕ್ತಿ: ರಾತ್ರಿ ಸರಿಯಾಗಿ ನಿದ್ರೆ ಮಾಡದಿದ್ದರೆ, ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ನಿಮಗೆ ಸುಲಭವಾಗಿ ಶೀತ ಮತ್ತು ಜ್ವರ ಬರುತ್ತದೆ.
ಹೃದಯದ ಆರೋಗ್ಯ: ರಾತ್ರಿ ಹೊತ್ತು ನಿಮ್ಮನ್ನ ಕಾಡುವ ನಿದ್ರಾಹೀನತೆಯು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬಿಪಿ ಅಸಮತೋಲನದ ಸಾಧ್ಯತೆಯಿದೆ.
ಜೀರ್ಣಕ್ರಿಯೆಯ ಮೇಲೆ ಪರಿಣಾಮ: ರಾತ್ರಿ ಹೊತ್ತು ನಿದ್ರೆಯ ಕೊರತೆಯು ಅತಿಯಾದ ಹಸಿವನ್ನ ಉಂಟುಮಾಡಬಹುದು, ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.
ಸರಿಯಾದ ನಿದ್ರೆ: ನೀವು ಸದಾ ಆರೋಗ್ಯವಾಗಿರಲು ದಿನಕ್ಕೆ ಕನಿಷ್ಠ 7-8 ಗಂಟೆಗಳ ನಿದ್ದೆ ಬೇಕೇ ಬೇಕು. ಹೀಗಾಗಿ ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಮಾಡುವುದನ್ನ ರೂಢಿಸಿಕೊಳ್ಳಬೇಕು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)