)
Weight lose Tips : ತೂಕ ಇಳಿಸಿಕೊಳ್ಳಲು, ಆರೋಗ್ಯಕರ ಆಹಾರವನ್ನು ಸೇವಿಸುವುದು, ಸಮತೋಲಿತ ಪೋಷಕಾಂಶಗಳನ್ನು ತೆಗೆದುಕೊಳ್ಳುವುದು ಮತ್ತು ತೀವ್ರವಾದ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಅವಶ್ಯಕ. ಆದರೆ, ಈ ಪ್ರಯತ್ನಗಳ ಹೊರತಾಗಿಯೂ ಕೆಲವೊಮ್ಮೆ ತೂಕ ಇಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.
ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಚಹಾ :
ತೂಕ ಇಳಿಸುವ ಪ್ರಯತ್ನದಲ್ಲಿ ಅನೇಕ ಮಂದಿ ಸಮಸ್ಯೆಯನ್ನು ಎದುರಿಸುತ್ತಾರೆ. ಅನೇಕ ಜನರಿಗೆ, ತೂಕ ಇಳಿಸುವ ಸಮಯದಲ್ಲಿ ಏನೂ ಮಾಡಿದರೂ ಹೊಟ್ಟೆ ಕರಗುತ್ತಿಲ್ಲ ಎನ್ನುವ ನೋವು ಕಾಡುತ್ತದೆ. ಆದರೆ ಈ ಸಮಸ್ಯೆಯಿಂದ ಹೊರ ಬರುವುದು ಖಂಡಿತಾ ಸುಲಭ.
ಈ ಸಮಸ್ಯೆಗೆ ಸರಳ ಮತ್ತು ನೈಸರ್ಗಿಕ ಪರಿಹಾರವನ್ನು ಆಹಾರ ತಜ್ಞೆ ರಿಚಾ ಕಂಗಾನಿ ಕಂಡುಕೊಂಡಿದ್ದಾರೆ. ಅವರು ಇದರ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಚಹಾದ ಬಗ್ಗೆ ಅವರು ಹೇಳಿದ್ದಾರೆ.
21 ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ ಇದನ್ನೇ ಕುಡಿಯಿರಿ :
ರಿಚಾ ಕಂಗಾನಿ ಈ ಚಹಾವನ್ನು ಪ್ರತಿದಿನ ಬೆಳಿಗ್ಗೆ 21 ದಿನಗಳ ಕಾಲ ಕುಡಿಯಲು ಶಿಫಾರಸು ಮಾಡುತ್ತಾರೆ. ಶುಂಠಿ, ದಾಲ್ಚಿನ್ನಿ, ಲೆಮನ್ ಗ್ರಾಸ್, ಅರಿಶಿನ ಮತ್ತು ಮೆಣಸಿನಕಾಯಿಯಂತಹ ನೈಸರ್ಗಿಕ ಪದಾರ್ಥಗಳಿಂದ ಈ ಪಾನೀಯ ಅಥವಾ ಚಹಾವನ್ನು ತಯಾರಿಸಲಾಗುತ್ತದೆ. ರುಚಿ ಬೇಕು ಎನಿಸಿದರೆ ಇದಕ್ಕೆ ಆಪಲ್ ಸೈಡರ್ ವಿನೆಗರ್ ಅನ್ನು ಕೂಡಾ ಸೇರಿಸಬಹುದು. ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆ ಉಬ್ಬರವನ್ನು ತಗ್ಗಿಸುತ್ತದೆ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ.
ಈ ಚಹಾವನ್ನು ತಯಾರಿಸುವುದು ಹೇಗೆ ? :
1 ಕಪ್ ನೀರಿಗೆ ಕೆಲವು ತುಂಡು ತಾಜಾ ಶುಂಠಿ, ದಾಲ್ಚಿನ್ನಿ ಕಡ್ಡಿ ಮತ್ತು ಸಿಪ್ಪೆಯೊಂದಿಗೆ ಕೆಲವು ನಿಂಬೆ ಹೋಳುಗಳನ್ನು ಸೇರಿಸಿ ಸುಮಾರು 5-7 ನಿಮಿಷಗಳ ಕಾಲ ಕುದಿಸಿ. ನಂತರ, 1/4 ಟೀಚಮಚ ಅರಿಶಿನ ಪುಡಿಯನ್ನು ಒಂದು ಚಿಟಿಕೆ ಮೆಣಸಿನ ಪುಡಿಯನ್ನು ಸೇರಿಸಿ. ಬೇಕಾದರೆ, 1 ಟೀಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಕೂಡಾ ಸೇರಿಸಬಹುದು. ಈಗ ಇದನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ತೂಕ ಇಳಿಸುವ ಪಾನೀಯ:
ಇದರಲ್ಲಿರುವ ಎಲ್ಲಾ ಪದಾರ್ಥಗಳು ತಮ್ಮದೇ ಆದ ವಿಶಿಷ್ಟ ಗುಣಗಳನ್ನು ಹೊಂದಿವೆ. ಶುಂಠಿಯು ಜೀರ್ಣಕ್ರಿಯೆಗೆ ಸಹಾಯ ಮಾಡಿದರೆ, ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಜೊತೆಗೆ ಇದು ಹಸಿವು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆ ಯಕೃತ್ತಿಗೆ ಅದ್ಭುತ ಔಷಧ. ಇದು ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ.
ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಮೆಣಸಿನಕಾಯಿಯನ್ನು ಕುಡಿಯುವಾಗ ನಿಮಗೆ ಮಸಾಲೆಯುಕ್ತ ಕಿಕ್ ನೀಡುತ್ತದೆ ಮತ್ತು ಇದರಲ್ಲಿ ಫೈಬರ್ ಕೂಡಾ ಇರುತ್ತದೆ. ಆಪಲ್ ಸೈಡರ್ ವಿನೆಗರ್ ಹಸಿವನ್ನು ನಿಗ್ರಹಿಸುವ ಮೂಲಕ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ನಿತ್ಯ ಕುಡಿಯಿರಿ :
ಸಮತೋಲಿತ ಆಹಾರವನ್ನು ಆರೋಗ್ಯಕರ ಜೀವನಶೈಲಿಯೊಂದಿಗೆ ಸಂಯೋಜಿಸಿದಾಗ, ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ವಿವಿಧ ಅಡೆತಡೆಗಳನ್ನು ಮುರಿಯಲು ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಮೇಲೆ ತಿಳಿಸಿದ ಚಹಾ ಕುಡಿಯಬಹುದು. ಇದನ್ನು 21 ದಿನಗಳವರೆಗೆ ಕುಡಿದರೆ ವ್ಯತ್ಯಾಸ ಖಂಡಿತಾ ತಿಳಿಯುವುದು.
(ಸೂಚನೆ : ಇಲ್ಲಿ ನೀಡಲಾಗಿರುವ ವಿಚಾರವು ರಿಚಾ ಕಂಗಾನಿಯವರ ಅಭಿಪ್ರಾಯವಾಗಿದೆ. ಇದನ್ನು ಅನುಸರಿಸುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಿ. ಇದನ್ನು ಜೀ ನ್ಯೂಸ್ ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ