Prolonged Sitting Side Effects: ಬದಲಾದ ಕಾಲಮಾನದಲ್ಲಿ ಬಹುತೇಕ ಕೆಲಸಗಳು ಡಿಜಿಟಲ್ ಮಾಧ್ಯಮದ ಮೂಲಕವೇ ಪೂರ್ಣಗೊಳ್ಳುತ್ತದೆ. ಇನ್ನೊಂದೆಡೆ ಕಛೇರಿಗಳಲ್ಲಿ ಗಂಟೆಗಟ್ಟಲೆ ಕೂರುವುದು ಮೆದುಳಿಗೆ ಕೆಲಸ ನೀಡಿದರೂ ಸಹ ದೇಹಕ್ಕೆ ಹೆಚ್ಚು ಶ್ರಮ ನೀಡುವುದಿಲ್ಲ. ಹಾಗಾಗಿ, ದೇಹ ಜಡದಂತಾಗುತ್ತದೆ. ಜಡ ಜೀವನವೆಂದರೆ ಎಚ್ಚರವಿದ್ದಾಗ ಒಂದೆಡೆ ಕೂರುವ ಅಥವಾ ಮಲಗುವ ಮೂಲಕ ಅತಿ ಕಡಿಮೆ ಶಕ್ತಿಯನ್ನು ವ್ಯಯಿಸುವುದು. ಇದು ಟಿವಿ ನೋಡುವುದರಿಂದ ಹಿಡಿದು, ಮೊಬೈಲು ಇಲ್ಲವೇ ಕಂಪ್ಯೂಟರ್ ಹಿಡಿದು ಗಂಟೆಗಟ್ಟಲೆ ಒಂದೇ ಜಾಗದಲ್ಲಿ ಕೂರುವುದು ಅಥವಾ ಬಿದ್ದುಕೊಂಡು ಓದುವವರೆಗೂ ಅನ್ವಯವಾಗುತ್ತದೆ. ಒಂದೇ ಜಾಗದಲ್ಲಿ ಕೂರುವುದು ಅಥವಾ ದೀರ್ಘ ಸಮಯ ಮಲಗುವುದರಿಂದ ದೇಹದಲ್ಲಿ ರಕ್ತಸಂಚಾರ ಕಡಿಮೆಯಾಗಿ, ಸ್ನಾಯುಗಳಲ್ಲಿ ಸಂಚಲನ ಕುಂಠಿತವಾಗಿ, ಚಯಾಪಚಯ ಏರುಪೇರಾಗಿ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಈ ರೀತಿ ದೇಹದ ಮೇಲುಂಟಾಗುವ ಅಪಾಯವನ್ನು ಕಠಿಣವಾದ ವ್ಯಾಯಾಮದಿಂದಲೂ ಸರಿಪಡಿಸಲು ಕಷ್ಟಸಾಧ್ಯ ಎನ್ನುತ್ತಾರೆ ಅಧ್ಯಯನಕಾರರು.
ದೀರ್ಘಕಾಲ ಒಂದೇ ಕಡೆ ಕೂತು ಕೆಲಸ ಮಾಡುವವರೇ ನೀವು? ಹಾಗಾದರೆ ನೀವಿದನ್ನು ಓದಲೇಬೇಕು. ಕಾರಣ ಏನೇ ಇರಲಿ, ಒಂದೆಡೆ ದೀರ್ಘ ಕಾಲ ಕೂತಿರುತ್ತೀರಿ ಎಂದಾದರೆ ಸಾವಿಗೆ ಬೇಗ ಹತ್ತಿರವಾಗುತ್ತೀರಿ ಎಂತಲೇ ಅರ್ಥ ಎಂದು ಹೃದಯ ತಜ್ಞರು ಹೇಳುತ್ತಾರೆ. ಜಡ ಜೀವನದಿಂದ ಸಾವು ಬೇಗನೇ ಆಕ್ರಮಿಸುವ ಸಾಧ್ಯತೆ 30%ರಷ್ಟು ಹೆಚ್ಚುತ್ತದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಗಂಟೆಗಟ್ಟಲೆ ಕೂತಲ್ಲೇ ಕೂರುವುದರಿಂದ ಕೆಲವು ಆರೋಗ್ಯ ಸಮಸ್ಯೆಗಳು ದೇಹವನ್ನು ಒಕ್ಕರಿಸುವುದು ನಿಶ್ಚಿತ ಎಂತಲೂ ತಜ್ಞರು ಹೇಳುತ್ತಾರೆ.
ದೀರ್ಘಕಾಲ ಒಂದೇ ಕಡೆ ಕೂತಿರುವುದರಿಂದ ಏನೆಲ್ಲ ಸಮಸ್ಯೆಗಳು ಉಂಟಾಗಬಹುದು ಎಂದು ನೋಡುವುದಾದರೆ....
ಸ್ನಾಯುಗಳ ಬಲಹೀನತೆ:
ಮಾಂಸಖಂಡಗಳ ತತ್ವ ಒಂದೇ- ಬಳಸಿ ಇಲ್ಲವೇ ಕಳೆದುಕೊಳ್ಳಿ (ಯೂಸ್ ಇಟ್ ಆರ್ ಲೂಸ್ ಇಟ್) ಸ್ನಾಯುಗಳನ್ನು ಬಳಸದೆ, ಅವುಗಳಲ್ಲಿ ಸಂಕೋಚ-ವಿಕಾಸಗಳಿಲ್ಲದೆ ಜಡವಾಗಿದ್ದರೆ ಅವು ಕ್ರಮೇಣ ಬಲಹೀನಗೊಳ್ಳುತ್ತವೆ. ಸ್ನಾಯುಗಳಲ್ಲಿ ಹುದುಗಿರುವ ಪ್ರೊಟೀನ್‌ಗಳು ನಶಿಸಿ, ಉಬ್ಬಿರುವ ಮಾಂಸಪೇಶಿಗಳ ಬದಲಿಗೆ ಕೊಬ್ಬಿರುವ ಭಾಗಗಳು ಕಾಣತೊಡಗುತ್ತವೆ. ಆಗಾಗ ಸ್ನಾಯುಗಳಲ್ಲಿ ಸಂಚಲನವಿದ್ದರೆ, ಅವುಗಳು ದುರ್ಬಲವಾಗದಂತೆ ತಡೆಯಬಹುದು. ಹಾಗಾಗಿ ನೀವು ಕಚೇರಿಯ ಕೆಲಸದ ನಡುವೆಯೂ ಅಥವಾ ದೀರ್ಘ ಸಮಯ ಕುಳಿತು ಯಾವುದೇ ಕೆಲಸ ಮಾಡುತ್ತಿದ್ದರೆ ಅರ್ಧಗಂಟೆಗೊಮ್ಮೆ ಎದ್ದು ಓಡಾಡುವ ಅಭ್ಯಾಸ ರೂಢಿಸಿಕೊಳ್ಳಿ.
ಇದನ್ನೂ ಓದಿ- ಪಥ್ಯ ಬೇಕಿಲ್ಲ... ಜಸ್ಟ್ ಸಿಂಪಲ್ 'ವಾಕ್' ಮಾಡಿದರೂ ಸಾಕು ಕಂಟ್ರೋಲ್ ಆಗುತ್ತೆ ಶುಗರ್...!
ರಕ್ತಸಂಚಾರ ಕುಂಠಿತ:
ಒಂದೇ ಕಡೆ ಕೂತಿದ್ದರೆ ರಕ್ತನಾಳಗಳಿಗೂ ತೊಂದರೆ ಎದುರಾಗುತ್ತದೆ. ನಾಳಗಳು ಬಿಗಿದಂತಾಗಿ ರಕ್ತಸಂಚಾರಕ್ಕೆ ತೊಡಕಾಗುತ್ತದೆ. ಪರಿಣಾಮವೆಂದರೆ ಉಬ್ಬಿದ ವೆರಿಕೋಸ್ ವೇನ್, ರಕ್ತ ಹೆಪ್ಪುಗಟ್ಟುವುದು, ರಕ್ತದೊತ್ತಡ ಏರುವುದು- ಇಂಥವು ಗಂಟುಬೀಳಬಹುದು. ಇದನ್ನು ತಪ್ಪಿಸಲು ದೇಹಕ್ಕೆ ಆಗಾಗ್ಗೆ ಚಟುವಟಿಕೆಗಳನ್ನು ನೀಡಿ. ಚುಟುಕು ವ್ಯಾಯಾಮಗಳು, ನೀರು ಕುಡಿಯಲೋ ಅಥವಾ ಬಾತ್‌ರೂಮಿಗಾಗಿಯೋ ಎದ್ದು ಓಡಾಡುವುದು ಹಲವು ರೀತಿಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉಪಯುಕ್ತವಾಗಿದೆ.
ದುರ್ಬಲ ಮೂಳೆಗಳು:
ಸ್ನಾಯುಗಳ ದೌರ್ಬಲ್ಯವು ಕ್ರಮೇಣ ಮೂಳೆಗಳನ್ನೂ ದುರ್ಬಲಗೊಳಿಸುತ್ತದೆ. ಇದರಿಂದ ಆಸ್ಟಿಯೊಪೊರೊಸಿಸ್‌ನಂಥ ತೊಂದರೆಗಳು ಅಮರಿಕೊಳ್ಳಬಹುದು. ಹಾಗಾಗಿ ಅಲ್ಪ ಪ್ರಮಾಣದ ತೂಕ ಎತ್ತುವುದು, ಪ್ರತಿರೋಧಕತೆಯ ತರಬೇತಿ ಅಂದ್ರೆ ರೆಸಿಸ್ಟೆನ್ಸ್ ಟ್ರೈನಿಂಗ್, ಕಾರ್ಡಿಯೊ ಮಾದರಿಯ ವ್ಯಾಯಾಮಗಳು ಮೂಳೆಗಳ ಆರೋಗ್ಯಕ್ಕೆ ಒಳಿತನ್ನು ಮಾಡುತ್ತವೆ.
ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ:
ತುಂಬಾ ಹೊತ್ತಿನವರೆಗೆ ಜಡವಾಗಿ ಕೂತಿರುವುದರಿಂದ, ನಮ್ಮ ದೇಹದಲ್ಲಿ ಕೊಬ್ಬಿನಾಂಶಗಳನ್ನು ವಿಘಟಿಸುವ ಲಿಪೊಪ್ರೊಟೀನ್ ಲಿಪೇಸ್ ಎಂಬ ಕಿಣ್ವಗಳ ಕ್ಷಮತೆ ಕಡಿಮೆಯಾಗುತ್ತದೆ. ಈ ಕಿಣ್ವಗಳ ಚಟುವಟಿಕೆ ಕಡಿಮೆಯಾದರೆ ಟ್ರೈಗ್ಲಿಸರೈಡ್ ಮಟ್ಟ ಏರಿ, ಬೊಜ್ಜು ಹೆಚ್ಚುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಏರಿಕೆಯಾಗಿ ಕ್ರಮೇಣ ಮಧುಮೇಹಕ್ಕೆ ಆಹ್ವಾನ ನೀಡುತ್ತದೆ. ಇದನ್ನು ತಪ್ಪಿಸಲು ಪ್ರತಿ 30-60 ನಿಮಿಷಗಳಿಗೆ ಒಮ್ಮೆ ಎದ್ದು ನಾಲ್ಕಾರು ನಿಮಿಷಗಳ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಈ ಕಿಣ್ವಗಳ ಮಟ್ಟ ಕುಸಿಯದಂತೆ ತಡೆಯಬಹುದು.
ಇದನ್ನೂ ಓದಿ- ವಿಟಮಿನ್ ಮಾತ್ರೆಗಳನ್ನು ಅತಿಯಾಗಿ ಸೇವಿಸುತ್ತೀರಾ, ಹುಷಾರ್..!
ಬೆನ್ನು, ಕುತ್ತಿಗೆ ನೋವು:
ಸದಾ ಕಾಲ ಕೂತೇ ಇರುವುದರಿಂದ ಬೆನ್ನುಹುರಿ, ಕುತ್ತಿಗೆಯ ಸ್ನಾಯುಗಳು, ಸೊಂಟದ ಡಿಸ್ಕ್ ಮೇಲೆ ಅತಿ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದ ಬೆನ್ನಿನ ಕೆಳಭಾಗದಲ್ಲಿ ನೋವು, ಕುತ್ತಿಗೆ, ಭುಜ, ನಡು ಬೆನ್ನಲ್ಲೂ ತೀವ್ರ ನೋವು ಕಾಣಬಹುದು. ಜೊತೆಗೆ, ಕೆಲವೇ ಸ್ನಾಯುಗಳನ್ನು ವಿಪರೀತ ಉಪಯೋಗಿಸುವುದರಿಂದ, ಅಡ್ಡ ಪರಿಣಾಮಗಳು ಅಲ್ಲೂ ಕಾಣುತ್ತವೆ.
ಹೃದ್ರೋಗಗಳ ಭೀತಿ ಹೆಚ್ಚಳ:
ದೀರ್ಘ ಸಮಯ ಕುಳಿತುಕೊಂಡರೆ ಕೆಲವರಲ್ಲಿ ಮೇಲ್ನೋಟಕ್ಕೆ ಬೊಜ್ಜಿಲ್ಲದಂತೆ ಕಂಡರೂ ಹೃದಯದ ತೊಂದರೆ ಕಾಡುತ್ತದೆ. ಜಡಜೀವನದಿಂದ ಹೃದಯದ ತೊಂದರೆಗಳು ಶೇ.147ರಷ್ಟು ಹೆಚ್ಚುತ್ತವೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಇದರ ಬದಲಿಗೆ, ಆಗಾಗ ಚಲನೆಯಲ್ಲಿರುವುದು ಮತ್ತು ವಾರಕ್ಕೆ 150 ನಿಮಿಷಗಳ ಮಧ್ಯಮಗತಿಯ ವ್ಯಾಯಾಮ ರೂಢಿಸಿಕೊಳ್ಳುವುದರಿಂದ ಹೃದಯವನ್ನು ಆರೋಗ್ಯವಾಗಿ ಇರಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.