Skipping For Health: ಮಕ್ಕಳು ಹಗ್ಗವನ್ನು ಹಿಡಿದು ಜಿಗಿಯುತ್ತಾ ಸ್ಕಿಪ್ಪಿಂಗ್ ಆಡುವುದನ್ನು ನೋಡಲು ಬಲು ಚಂದ. ಅಷ್ಟೇ ಅಲ್ಲ, ದೇಹ ಫಿಟ್ ಆಗಿರಲು ಕೂಡ ಹಲವರು ಇದು ಸಹಾಯಕವಾಗಿದೆ. ಹಾಗಾಗಿಯೇ, ಕೆಲವರು ಸ್ಕಿಪ್ಪಿಂಗ್ ಅನ್ನು ತಮ್ಮ ವ್ಯಾಯಾಮದ ಭಾಗವಾಗಿಸುತ್ತಾರೆ. ತೂಕ ಇಳಿಸಿಕೊಳ್ಳಲು, ಹೃದಯದ ಆರೋಗ್ಯ ಸೇರಿದಂತೆ ಹಲವು ಕಾರಣಗಳಿಗೆ ಸ್ಕಿಪ್ಪಿಂಗ್ ಉಪಯುಕ್ತವಾಗಿದೆ.
ಹೃದಯದ ಆರೋಗ್ಯ:
ಸಾಮಾನ್ಯವಾಗಿ ಮಕ್ಕಳ ಎತ್ತರ ಹೆಚ್ಚಿಸಲು ಉಪಯುಕ್ತ ಗೇಮ್ ಎನ್ನಲಾಗುವ ಸ್ಕಿಪ್ಪಿಂಗ್ ಆಡುವುದರಿಂದ ಹೃದಯದ ಆರೋಗ್ಯವೂ ಸುಧಾರಣೆಗೊಳ್ಳುತ್ತದೆ. ನಿಯಮಿತವಾಗಿ ಸ್ಕಿಪ್ಪಿಂಗ್ ಆಡುವುದು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯದ ಸ್ನಾಯುಗಳಿಗೆ ಆಮ್ಲಜನಕದ ಹರಿವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಇದೊಂದು ಸಂಪೂರ್ಣವಾದ ದೈಹಿಕ ವ್ಯಾಯಾಮ:
ಸ್ಕಿಪ್ಪಿಂಗ್ ಆಗುವುದು ಒಂದು ಸಂಪೂರ್ಣವಾದ ದೈಹಿಕ ವ್ಯಾಯಾಮ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ತೂಕ ಇಳಿಕೆ:
ಸ್ಕಿಪ್ಪಿಂಗ್ ಆಡುವುದರಿಂದ ದೇಹದ ಎಲ್ಲಾ ಭಾಗಗಳಲ್ಲಿ ಶೇಖರವಾಗಿರುವ ಕೊಬ್ಬು ಕರಗುತ್ತದೆ. ಇದು ದೇಹದ ಫ್ಯಾಟ್, ಕ್ಯಾಲೋರಿಗಳನ್ನು ದಹಿಸುವ ಕೀಲಿ ಆಗಿದ್ದು, ಆರೋಗ್ಯಕರ ತೂಕ ಇಳಿಕೆಗೆ ವರದಾನವಾಗಿದೆ.
ಇದನ್ನೂ ಓದಿ- Weight loss tips: ಪ್ರತಿದಿನ 1 ಗಂಟೆಯ ನಡಿಗೆಯಿಂದ ಎಷ್ಟು ಕೆಜಿ ತೂಕ ಇಳಿಸಬಹುದು?
ನಿತ್ಯ ಸ್ಕಿಪ್ಪಿಂಗ್ ನಂತಹ ವ್ಯಾಯಾಮದಿಂದ ಬಾಡಿ ಮಾಸ್ ಇಂಡೆಕ್ಸ್ - ಬಿಎಂಐ ಸುಧಾರಣೆ ಆಗಲಿದೆ ಎಂದು 12 ತಿಂಗಳುಗಳ ಕಾಲ ನಡೆಸಿದ ಅಧ್ಯಯನವೊಂದರಲ್ಲಿ ತಿಳಿದುಬಂದಿದೆ.
ಶ್ವಾಸಕೋಶದ ಆರೋಗ್ಯ:
ಸ್ಕಿಪ್ಪಿಂಗ್ ಅಥವಾ ಹಗ್ಗದಾಟ ಆಡುವುದರಿಂದ ಶ್ವಾಸಕೋಶದ ಕಾರ್ಯ ಸುಧಾರಣೆಗೊಳ್ಳುತ್ತದೆ. ಇದು ಉಸಿರಾಟ ಕ್ರಿಯೆಯನ್ನು ಉತ್ತಮಪಡಿಸಿ, ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಮೂಳೆ ಸಾಂಧ್ರತೆ ಸುಧಾರಣೆ:
ಹಗ್ಗದಾಟವು ಅಸ್ಥಿರಂಧ್ರತೆ ಮತ್ತು ದುರ್ಬಲ ಮೂಳೆ, ಮೂಲೆಗಳ ಸಾಂಧ್ರತೆಯನ್ನು ಸುಧಾರಣೆ ಮಾಡುವಲ್ಲಿ ಪರಿಣಾಮಕಾರಿ ವ್ಯಾಯಾಯಮಾವಾಗಿದೆ.
ಇದನ್ನೂ ಓದಿ- ಬೆಳಗಿನ ಜಾವ ಈ ಹಣ್ಣು ತಿನ್ನಿ ಸಾಕು ಹೊಟ್ಟೆ ಫುಲ್ ಕ್ಲೀನ್ ಆಗುತ್ತೆ! ಕಿಡ್ನಿ ಸಮಸ್ಯೆಯಂತೂ ಬರೋದೆ ಇಲ್ಲ..
ಮೆದುಳಿನ ಆರೋಗ್ಯ:
ಸ್ಕಿಪ್ಪಿಂಗ್ ಆಡುವುದರಿಂದ ದೇಹದ ತಾಪಮಾನ ಹೆಚ್ಚಾಗುತ್ತದೆ. ಅಲ್ಲದೆ, ಮೆದುಳಿನವರೆಗೂ ರಕ್ತದ ಸರಬರಾಜು ಅಧಿಕವಾಗುತ್ತದೆ. ಇದರಿಂದ ಒತ್ತಡ ಕಡಿಮೆಯಾಗಿ, ಮೆದುಳಿನ ಆರೋಗ್ಯ ಸುಧಾರಿಸುತ್ತದೆ. ಅಧ್ಯಯನಗಳ ಪ್ರಕಾರ, ಹಗ್ಗದಾಟ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









