risk of weight loss: ಇಂದಿನ ಯುವ ಪೀಳಿಗೆಯಲ್ಲಿ ಸ್ಲಿಮ್ ಮತ್ತು ಫಿಟ್ ಆಗಿ ಕಾಣುವ ಬಯಕೆ ವೇಗವಾಗಿ ಹೆಚ್ಚುತ್ತಿದೆ. ಆದರೆ ಕೆಲವೊಮ್ಮೆ ಈ ಉತ್ಸಾಹವು ಮಾರಕವೂ ಆಗಿರಬಹುದು. ಇತ್ತೀಚೆಗೆ, ಆನ್‌ಲೈನ್ ಆಹಾರ ಪದ್ಧತಿಯಿಂದಾಗಿ ಹದಿಹರೆಯದ ಹುಡುಗಿಯೊಬ್ಬಳು ತನ್ನ ಪ್ರಾಣ ಕಳೆದುಕೊಂಡ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕೇರಳದ ಕಣ್ಣೂರು ಜಿಲ್ಲೆಯ 18 ವರ್ಷದ ಹುಡುಗಿ ಶ್ರೀನಂದಾ ಅತಿಯಾದ ಆಹಾರ ಪದ್ಧತಿಯಿಂದ ಸಾವನ್ನಪ್ಪಿದ್ದಾಳೆ. ತೂಕ ಹೆಚ್ಚಾಗುವ ಭಯದಿಂದ, ಶ್ರೀನಂದ ತಿಂಗಳುಗಟ್ಟಲೆ ತಿನ್ನುವುದನ್ನು ನಿಲ್ಲಿಸಿದ್ದರು. ಇದರಿಂದಾಗಿ ಅವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ಕೊನೆಗೆ ಚಿಕಿತ್ಸೆಯ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಶ್ರೀನಂದ ಕೂತುಪರಂಬ ನಿವಾಸಿಯಾಗಿದ್ದು, ಮಟ್ಟನೂರ್ ಪಳಸ್ಸಿರಾಜ ಎನ್ ಎಸ್ ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದರು.
ಇದನ್ನೂ ಓದಿ: ಮನೆಯ ಮುಂದೆ ಬಾಳೆಗಿಡ ನೆಡುವುದು ಒಳ್ಳೆಯದಾ? ಕೆಟ್ಟದ್ದಾ? ಈ ವಿಚಾರ ಗೊತ್ತಿಲ್ಲ ಅಂದ್ರೆ ತೊಂದ್ರೆ ಖಚಿತ..
ಗಂಭೀರ ಸ್ಥಿತಿಯಲ್ಲಿದ್ದ ಶ್ರೀನಂದ ಅವರನ್ನು ತಲಶ್ಶೇರಿ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು 12 ದಿನಗಳ ಕಾಲ ವೆಂಟಿಲೇಟರ್‌ನಲ್ಲಿಟ್ಟು ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ವೈದ್ಯರ ಪ್ರಕಾರ, ಅವರನ್ನು ಆಸ್ಪತ್ರೆಗೆ ಕರೆತರುವಾಗ ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಅವರ ತೂಕ ಕೇವಲ 24 ಕಿಲೋಗ್ರಾಂಗಳಿಗೆ ಇಳಿದಿತ್ತು. ಅವರ ರಕ್ತದಲ್ಲಿನ ಸಕ್ಕರೆ, ಸೋಡಿಯಂ ಮತ್ತು ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕೆ ಇಳಿದಿತ್ತು. ವೈದ್ಯರು ಎಷ್ಟೇ ಪ್ರಯತ್ನ ಪಟ್ಟರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಸಾವಿಗೆ ಕಾರಣ ಇದು...
ಕುಟುಂಬ ಸದಸ್ಯರ ಪ್ರಕಾರ, ಶ್ರೀನಂದ ತೂಕ ಹೆಚ್ಚಾಗುವ ಬಗ್ಗೆ ತುಂಬಾ ಚಿಂತಿತರಾಗಿದ್ದರು. ಹೀಗಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಪಡೆದ ಆಹಾರ ಯೋಜನೆಯನ್ನು ಅನುಸರಿಸಲು ಪ್ರಾರಂಭಿಸಿದ್ದರು, ಅಷ್ಟೇ ಅಲ್ಲದೆ ತಿನ್ನುವುದನ್ನು ನಿಲ್ಲಿಸಿ ಬೆಚ್ಚಗಿನ ನೀರನ್ನು ಮಾತ್ರ ಕುಡಿಯಲು ಪ್ರಾರಂಭಿಸಿದ್ದರು. ಜೊತೆಗೆ ಗಂಟೆಗಟ್ಟಲೆ ವ್ಯಾಯಾಮ ಮಾಡುತ್ತಿದ್ದು, ಆಹಾರದಿಂದ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿದೆ. ಶ್ರೀನಂದ ಅನೋರೆಕ್ಸಿಯಾ ನರ್ವೋಸಾ ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ವೈದ್ಯರು ಶಂಕಿಸಿದ್ದಾರೆ. ಈ ಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತುಂಬಾ ಕಡಿಮೆ ತೂಕ ಹೊಂದಿದ್ದರೂ ಸಹ, ತನ್ನನ್ನು ತಾನು ದಪ್ಪಗಿದ್ದೇನೆ ಎಂದು ಪರಿಗಣಿಸುತ್ತಾನೆ.
ಇದನ್ನೂ ಓದಿ: ಮಧುಮೇಹಕ್ಕೆ ಅಮೃತವಿದ್ದಂತೆ ಈ ಮಸಾಲೆ! ಮಲಗುವ ಮುನ್ನ ಹಾಲಿಗೆ ಬೆರೆಸಿ ಕುಡಿದ್ರೆ ಸಂಪೂರ್ಣ ನಾರ್ಮಲ್ ಆಗುತ್ತೆ ಶುಗರ್..
ಶ್ರೀನಂದ ಕಳೆದ 5-6 ತಿಂಗಳಿನಿಂದ ಆಹಾರದಿಂದ ದೂರವಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಡಯೆಟ್ ಪ್ಲಾನ್ ಬಗ್ಗೆ ಕುಟುಂಬದ ಸದಸ್ಯರಿಂದ ಗೌಪ್ಯತೆ ಕಾಪಾಡಿದ್ದರು ಎನ್ನಲಾಗಿದೆ. ಸುಮಾರು ಐದು ತಿಂಗಳ ಹಿಂದೆ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆ ಸಂದರ್ಭದಲ್ಲಿ ವೈದ್ಯರು ಸರಿಯಾದ ಪೋಷಣೆಯನ್ನು ತೆಗೆದುಕೊಳ್ಳುವಂತೆ ಮತ್ತು ಮನೋವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದರು. ಆದರೆ, ಪರಿಸ್ಥಿತಿ ಸುಧಾರಿಸುವ ಬದಲು ಹದಗೆಡುತ್ತಲೇ ಹೋಯಿತು. ಎರಡು ತಿಂಗಳ ಹಿಂದೆ, ಅವರನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪೌಷ್ಠಿಕಾಂಶದತ್ತ ಗಮನಹರಿಸಲು ಸಲಹೆ ನೀಡಿದರು. ಆದರೆ ಶ್ರೀನಂದ ಅವರ ಸ್ಥಿತಿ ಹದಗೆಡುತ್ತಲೇ ಇತ್ತು. ಎರಡು ವಾರಗಳ ಹಿಂದೆ, ಅವರ ರಕ್ತದಲ್ಲಿನ ಸಕ್ಕರೆ ಇದ್ದಕ್ಕಿದ್ದಂತೆ ತುಂಬಾ ಕಡಿಮೆಯಾಗಿದ್ದು, ಅವರಿಗೆ ಉಸಿರಾಟದ ತೊಂದರೆ ಪ್ರಾರಂಭವಾಗಿತ್. ಆ ಬಳಿಕ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









