ಬೆಂಗಳೂರು : ಭಾರತದಲ್ಲಿ ಸಿಹಿ ಆಹಾರಗಳು ಎಷ್ಟು ಇಷ್ಟವಾಗುತ್ತವೋ, ಅದೇ ವೇಗದಲ್ಲಿ 'ಮಧುಮೇಹ' ಕೂಡಾ ಜನರನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶವನ್ನು 'ವಿಶ್ವದ ಮಧುಮೇಹ ರಾಜಧಾನಿ' ಎಂದು ಕರೆಯಲಾಗುತ್ತಿದೆ. ಇದರ ಹೊರತಾಗಿ ಮತ್ತೊಂದು ರೋಗ ವೇಗವಾಗಿ ಹರಡುತ್ತಿದೆ. ಅದು ಫ್ಯಾಟಿ ಲಿವರ್. ಇದು ಯಾವುದೇ ಲಕ್ಷಣಗಳಿಲ್ಲದೆ ನಿಧಾನವಾಗಿ ಯಕೃತ್ತನ್ನು ಹಾನಿಗೊಳಿಸುತ್ತದೆ.
ಬದಲಾಗುತ್ತಿರುವ ಜೀವನಶೈಲಿ, ಫಾಸ್ಟ್ ಫುಡ್, ಒತ್ತಡ ಮತ್ತು ದೈಹಿಕ ಚಟುವಟಿಕೆಯ ಕೊರತೆಯು ಈ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಫ್ಯಾಟಿ ಲಿವರ್ ಮತ್ತು ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ. ಇವುಗಳನ್ನು ತಡೆಗಟ್ಟಬಲ್ಲ ಒಂದು ಹಣ್ಣಿದೆ. ಹೌದು ಇತ್ತೀಚಿನ ಸಂಶೋಧನೆಯ ಪ್ರಕಾರ ಸ್ಟ್ರಾಬೆರಿ ಸೇವನೆಯ ಮೂಲಕ ಫ್ಯಾಟಿ ಲಿವರ್ ಮತ್ತು ಮಧುಮೇಹದಿಂದ ಪರಿಹಾರ ಪಡೆಯಬಹುದು. ಸ್ಟ್ರಾಬೆರಿ ತಿನ್ನುವುದರಿಂದ ಹೃದಯದ ಆರೋಗ್ಯ ಸುಧಾರಿಸುವುದಲ್ಲದೆ, ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನೈಸರ್ಗಿಕ ವಿಧಾನಗಳ ಮೂಲಕ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಬಯಸುವವರಿಗೆ ಈ ಹಣ್ಣು ವರದಾನವಾಗಿದೆ.
ಇದನ್ನೂ ಓದಿ : ಹಾರ್ಟ್ ಅಟ್ಯಾಕ್ ಆಗುವ 2 ದಿನ ಮೊದಲು ಪ್ರತಿಯೊಬ್ಬರಲ್ಲಿಯೂ ಕಾಣಿಸಿಕೊಳ್ಳುತ್ತದೆ ಈ ಲಕ್ಷಣ!ಜೀವ ಉಳಿಸಲು ಸಿಗುವ ಕೊನೆಯ ಅವಕಾಶ ಇದು
ಸ್ಟ್ರಾಬೆರಿಯಲ್ಲಿರುವ ಪೋಷಕಾಂಶಗಳು :
ಸ್ಟ್ರಾಬೆರಿಯಲ್ಲಿರುವ ಪೋಷಕಾಂಶಗಳಾದ ಫೈಟೊನ್ಯೂಟ್ರಿಯೆಂಟ್ಸ್, ಫೈಬರ್ ಮತ್ತು ವಿಟಮಿನ್ ಸಿ ದೇಹದಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇದು ಮಧುಮೇಹ ಮತ್ತು ಫ್ಯಾಟಿ ಲಿವರ್ ನ ಮೂಲ ಕಾರಣವಾಗಿದೆ. 2023ರ ಅಧ್ಯಯನವು ಸ್ಟ್ರಾಬೆರಿಗಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟಗಳು ಕಡಿಮೆಯಾಗುತ್ತವೆ. ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ಹೃದಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುವುದನ್ನು ಸಾಬೀತುಪಡಿಸಿದೆ.
ತಜ್ಞರು ಏನು ಹೇಳುತ್ತಾರೆ? :
ಇಲಿನಾಯ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕರಾದ ಬ್ರಿಟ್ ಬರ್ಟನ್-ಫ್ರೀಮನ್, ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ ಪ್ರಕಾರ, ಪ್ರತಿದಿನ ಒಂದು ಕಪ್ ಸ್ಟ್ರಾಬೆರಿ ಆರೋಗ್ಯದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು. ವಿವಿಧ ಹಣ್ಣುಗಳ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುವುದರಿಂದ ಈ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಒಂದೇ ತಿಂಗಳಲ್ಲಿ ತೂಕ ಇಳಿಸಿ, ಡೊಳ್ಳು ಹೊಟ್ಟೆ ಕರಗಿಸಲು ವಾರದ 7 ದಿನ ಹೀಗಿರಲಿ ನಿಮ್ಮ ಫಿಟ್‌ನೆಸ್ ಪ್ಲಾನ್
ಔಷಧವಾಗಿ ಆಹಾರ :
ತಜ್ಞರು ಸ್ಟ್ರಾಬೆರಿಗಳನ್ನು 'ಔಷಧಿಯಾಗಿ ಆಹಾರ'ವಾಗಿ ಬಳಸಬಹುದು ಎಂದು ಹೇಳುತ್ತಾರೆ. ಇದು ಟೈಪ್-2 ಮಧುಮೇಹ ಮತ್ತು ಹೃದಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಪ್ರತಿದಿನ 1 ರಿಂದ 4 ಕಪ್ ಸ್ಟ್ರಾಬೆರಿ ತಿನ್ನುವುದರಿಂದ ಹೃದಯರಕ್ತನಾಳದ ಆರೋಗ್ಯ ಸುಧಾರಿಸುತ್ತದೆ. ಇದನ್ನು ಸ್ಮೂಥಿ, ಮೊಸರು, ಸಲಾಡ್ ಅಥವಾ ಬೆಳಗಿನ ಉಪಹಾರದ ರೂಪದಲ್ಲಿ ತಿನ್ನಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
( ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









