ಬೇಸಿಗೆ ಬಂತು ಎಚ್ಚರ..! ಈ ಮುನ್ನೆಚ್ಚರಿಕೆಗಳು ನಿಮಗೆ ತಿಳಿದಿರಲಿ..!

ದೈಹಿಕ ಚಟುವಟಿಕೆಗಳನ್ನು ನಿಲ್ಲಿಸಿ ಹಾಗೂ ತಂಪಾದ ಜಾಗಗಳಿಗೆ ಹೋಗಬೇಕು. ತಂಪಾದ, ಶುದ್ಧವಾದ ನೀರು ಕುಡಿಯುವುದು ಹಾಗೂ ಓ.ಆರ್.ಎಸ್ ಮತ್ತು ಗ್ಲೂಕೋಸ್‍ನ್ನು ಬಳಸಬೇಕು. 

Written by - Manjunath Naragund | Last Updated : Mar 13, 2025, 06:23 PM IST
  • ಮುಚ್ಚಿದ ಕೋಣೆಯಲ್ಲಿ ನಿರಂತರ ಸಂಚರಿಸುವ ಬಿಸಿಗಾಳಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ
  • ಸಾಧ್ಯವಾದಷ್ಟು ಟೇಬಲ್ ಫ್ಯಾನ್ ಹಾಗೂ ಏರ್ ಕೂಲರ್ಸ್ ಬಳಸಬೇಕು
  • ಬಲ್ಬ್ ಹಾಗೂ ಇತರೆ ವಿದ್ಯುತ್ ಸಾಧನಗಳನ್ನು ಆದಷ್ಟು ಕಡಿಮೆ ಉಪಯೋಗಿಸಬೇಕು
ಬೇಸಿಗೆ ಬಂತು ಎಚ್ಚರ..! ಈ ಮುನ್ನೆಚ್ಚರಿಕೆಗಳು ನಿಮಗೆ ತಿಳಿದಿರಲಿ..!

ಇನ್ನೇನು ಬೇಸಿಗೆ ಬಂತು..ಬೇಸಿಗೆ ವಾತಾವರಣದಲ್ಲಿ ಬಹುತೇಕ ಎಲ್ಲಾ ಜೀವ ಜಂತುಗಳಿಗೆ ಕಷ್ಟವಾಗುತ್ತದೆ. ಅದರಲ್ಲಿಯೂ ಶಿಶುಗಳಿಗೆ, ವಯಸ್ಸಾದವರಿಗೆ, ಮಕ್ಕಳಿಗೆ, ಗರ್ಭೀಣಿಯರಿಗೆ, ಬೀದಿಬದಿಯಲ್ಲಿ ವ್ಯಾಪಾರ ಮಾಡುವವರಿಗೆ, ಬಿಸಿಲಲ್ಲಿ ಕೂಲಿ ಕೆಲಸ ಮಾಡುವ ಬಡ ಮತ್ತು ಸಾಮಾನ್ಯ ವರ್ಗದವರಿಗೆ, ವಿಶೇಷ ಚೇತನ ವ್ಯಕ್ತಿಗಳಿಗೆ, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಬಿಸಿಲಿನ ಝಳವು ಸಾಕಷ್ಟು ಕಾಡುತ್ತದೆ.

Add Zee News as a Preferred Source

ಶಾಖಾ ಸೆಳೆತ (ಹೀಟ್ ಕ್ರ್ಯಾಂಪ್): ಶಾಖಾ ಸೆಳೆತದಿಂದ ಜ್ವರ (102 ಡಿಗ್ರಿಗಿಂತ ಕಡಿಮೆ) ಹಾಗೂ ಮೈಯಲ್ಲಿ ಊತಕಾಣಿಸಿಕೊಳ್ಳುತ್ತದೆ. 

ಪರಿಹಾರ: ದೈಹಿಕ ಚಟುವಟಿಕೆಗಳನ್ನು ನಿಲ್ಲಿಸಿ ಹಾಗೂ ತಂಪಾದ ಜಾಗಗಳಿಗೆ ಹೋಗಬೇಕು. ತಂಪಾದ, ಶುದ್ಧವಾದ ನೀರು ಕುಡಿಯುವುದು ಹಾಗೂ ಓ.ಆರ್.ಎಸ್ ಮತ್ತು ಗ್ಲೂಕೋಸ್‍ನ್ನು ಬಳಸಬೇಕು. ಹೃದ್ರೋಗ ಸಮಸ್ಯೆ ಇದ್ದರೆ ಅಥವಾ ಇತರೆ ಯಾವುದೇ ರೋಗ ಲಕ್ಷಣಗಳಿದ್ದರೆ ಸಕಾಲಕ್ಕೆ ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು. 

ಶಾಖಾಘಾತ (ಹೀಟ್ ಸ್ಟ್ರೋಕ್): ಶಾಖಾಘಾತದಿಂದ ದೇಹದ ಉಷ್ಣಾಂಶ ಅತಿಯಾಗಿ ಹೆಚ್ಚಾಗುವುದು. ಮನಸ್ಸಿನಲ್ಲಿ ಗೊಂದಲ, ಮೂರ್ಛೆ ರೋಗ ಹಾಗೂ ವ್ಯಕ್ತಿಯ ಕೋಮಾ ಸ್ಥಿತಿಗೆ ಹೋಗಬಹುದು. ಚರ್ಮ ಸುಡುವುದು ಅಥವಾ ಕೆಂಪಾದ ಚರ್ಮ, ತಲೆ ನೋವು, ವಾಕರಿಕೆ ಹಾಗೂ ವಾಂತಿ, ಅತಿಯಾದ ನಾಡಿ ಮಿಡಿತ, ಪ್ರಜ್ಞೆ ತಪ್ಪುವಿಕೆ ಆಗುತ್ತದೆ. 

ಪರಿಹಾರ: ತುರ್ತು ವೈದ್ಯಕೀಯ ಸಹಾಯವಾಣಿ 104 ಕ್ಕೆ ಕರೆ ಮಾಡಿ, ವೈದ್ಯಕೀಯ ಸಹಾಯ ಪಡೆದುಕೊಳ್ಳಬೇಕು. ವ್ಯಕ್ತಿಯನ್ನು ಹೆಚ್ಚು ಗಾಳಿಯಾಡುವಂತಹ ತಂಪಾದ  ಜಾಗಕ್ಕೆ ಸ್ಥಳಾಂತರಿಸಬೇಕು. ಧರಿಸಿದ ಉಡುಪುಗಳು ಬಿಗಿಯಾಗಿದ್ದರೆ ಸಡಿಲಗೊಳಿಸಿಬೇಕು. ವ್ಯಕ್ತಿಗೆ ಉಸಿರಾಟದ ಶ್ವಾಸನಾಳದ ತೊಂದರೆಗಳಿದ್ದರೆ ಆತ ಅಶಕ್ತನಾದರೆ ತಕ್ಷಣ ಕುಡಿಯಲು ನೀರು ನೀಡಬಾರದು. ಮೈ ಮೇಲೆ ತಂಪಾದ, ಒದ್ದೆ ಬಟ್ಟೆಗಳನ್ನು ಹಾಕಿ ದೇಹದ ಉಷ್ಣಾಂಶವನ್ನು ನಿಯಂತ್ರಿಸಬೇಕು.

ಹೊರಾಂಗಣದಲ್ಲಿ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯ ನಡುವೆ ಹೊರಗಡೆ ದೈಹಿಕ ಕೆಲಸ ಮಾಡುವುದನ್ನು ತಪ್ಪಿಸಿ. ಅದು ಸಾಧ್ಯವಾಗದಿದ್ದರೆ, ತಿಳಿಬಣ್ಣದ ಹತ್ತಿಯಿಂದ ತಯಾರಿಸಿದ ನೈಸರ್ಗಿಕ ಬಟ್ಟೆಗಳನ್ನು ಧರಿಸಬೇಕು. ಪಾಲಿಯಿಸ್ಟರ್ ಹಾಗೂ ಸಿಂಥೆಟಿಕ್ ಬಟ್ಟೆಗಳನ್ನು ಆದಷ್ಟು ಉಪಯೋಗಿಸಬಾರದು. ಟೋಪಿ ಅಥವಾ ಹತ್ತಿಯ ಬಟ್ಟೆಗಳಿಂದ ತಲೆ ಮುಚ್ಚಿಕೊಳ್ಳಬೇಕು. ಸಾಧ್ಯವಾದರೆ ಒಂದು ಸ್ವಚ್ಚ, ಒದ್ದೆ ಬಟ್ಟೆಯನ್ನು ತಲೆ, ಕತ್ತಿನ ಸುತ್ತ ಧರಿಸಲು ಪ್ರಯತ್ನಿಸಬೇಕು. ಸಾಧ್ಯವಾದರೆ ಬೀಸಣಿಗೆಯನ್ನು ಬಳಸಬೇಕು. ದೂಳು, ಹೊಗೆ, ವಾಯು ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಮಾಸ್ಕ್  ಬಳಸುವುದು ಸೂಕ್ತವಾಗಿದೆ. ಕೆಲಸದ ಮಧ್ಯದಲ್ಲಿ ಆಗಾಗ್ಗೆ ಸಣ್ಣ ವಿಶ್ರಾಂತಿಯನ್ನು ತೆಗೆದು ಕೊಳ್ಳಬೇಕು. ವಿಶ್ರಾಂತಿಯ ಸಮಯದಲ್ಲಿ ನೆರಳಿನಲ್ಲಿ ಇರಬೇಕು. ಏನೇ ತಿನ್ನುವ ಮೊದಲು ಕೈಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

ಇದನ್ನೂ ಓದಿ : Aadhaar Card: ಆಧಾರ್‌ ಕಾರ್ಡ್‌ನಲ್ಲಿರುವ ನಿಮ್ಮ ಹಳೆಯ ಫೋಟೋವನ್ನು ಬದಲಾಯಿಸುವುದು ಹೇಗೆ ಗೊತ್ತಾ? ತಂಬಾ ಸುಲಭ

ಒಳಾಂಗಣದಲ್ಲಿ: ಹೊರಗಿನ ಬಿಸಲು, ಧೂಳು, ಹೊಗೆ ಹಾಗೂ ಮಾಲಿನ್ಯಗಳಿಂದ ರಕ್ಷಿಸಿಕೊಳ್ಳಬೇಕು. ಇಕ್ಕಟ್ಟಾದ, ಕತ್ತಲೆಯ ಕೋಣೆ, ತುಂಬಾ ಬಿಸಿವಾತಾವರಣ ಇದ್ದಾಗ ಸಾಧ್ಯವಾದಷ್ಟು ಆ ಸ್ಥಳವನ್ನು ತಂಪಾಗಿರಿಸಿಕೊಳ್ಳಲು ಪ್ರಯತ್ನಿಸಬೇಕು. ಕಿಟಕಿಗಳನ್ನು ತೆರೆಯಬೇಕು ಮತ್ತು ಪ್ಯಾನ್‍ಗಳನ್ನು ಬಳಸಬೇಕು. 

ಕೊಠಡಿಯ ಉಷ್ಣತೆ 35 ಡಿ.ಸೆಂಟಿಗ್ರೆಡ್ ಗಿಂತ ಕಡಿಮೆಯಿದ್ದಲ್ಲಿ ಸೀಲಿಂಗ್ ಫ್ಯಾನ್‍ಗಳನ್ನು ಬಳಸಿ, ಒಂದು ವೇಳೆ ಉಷ್ಣಾಂಶ 35 ಡಿ.ಸೆಂಟಿಗ್ರೇಡ್ ಗಿಂತಲೂ ಹೆಚ್ಚಾಗಿದ್ದರೆ ಮತ್ತು ಒಣಗಾಳಿ ಇದ್ದರೆ, ಪ್ಯಾನ್ ಬಳಿಸಬೇಕು. ಮುಚ್ಚಿದ ಕೋಣೆಯಲ್ಲಿ ನಿರಂತರ ಸಂಚರಿಸುವ ಬಿಸಿಗಾಳಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಸಾಧ್ಯವಾದಷ್ಟು ಟೇಬಲ್ ಫ್ಯಾನ್ ಹಾಗೂ ಏರ್ ಕೂಲರ್ಸ್ ಬಳಸಬೇಕು. ಬಲ್ಬ್ ಹಾಗೂ  ಇತರೆ ವಿದ್ಯುತ್ ಸಾಧನಗಳನ್ನು ಆದಷ್ಟು ಕಡಿಮೆ ಉಪಯೋಗಿಸಬೇಕು. 

ಹಗಲಿನಲ್ಲಿ ಹೆಚ್ಚು ಸೂರ್ಯನ ಬೆಳಕು ಬೀಳುವ ಕಿಟಕಿಗಳಿಗೆ ವೆಟಿವರ್, ಒಣಹುಲ್ಲಿನಿಂದ ಮಾಡಿದ ನೈಸರ್ಗಿಕ ಪರದೆಗಳನ್ನು ಬಳಸಬೇಕು. ಲೋಹದ ಅಥವಾ ಪ್ಲಾಸ್ಟಿಕ್ ಪರದೆಗಳನ್ನು ಬಳಸಬಾರದು. ರಾತ್ರಿಯ ಹೊತ್ತು ಕಿಟಕಿಗಳನ್ನು ತೆರೆದಿಡುವುದು ಉತ್ತಮ. ಮನೆಯ ಎಲ್ಲೆಡೆ ನೀರನ್ನು ಪಾತ್ರೆಯಲ್ಲಿ ಸಂಗ್ರಹಿಸಿ ಇಟ್ಟರೆ ಅದು ಆವಿಯಾಗಿ ವಾತಾವರಣವನ್ನು ತಂಪಾಗಿಡುತ್ತದೆ. ಕಿಟಕಿಗಳಲ್ಲಿ ಹಾಗೂ ಸಾಧ್ಯವಾದರೆ ಮನೆಯ ಒಳಗೂ ಸಹ ಗಿಡಗಳನ್ನು ಇಡಬಹುದು.

ಮನೆಯ ಒಳಗೂ ಹೊರಗು ಸಾಧ್ಯವಾದಷ್ಟು ಗಿಡಗಳು ಇರುವಂತೆ ನೊಡಿಕೊಳ್ಳಬೇಕು. ಕಟ್ಟಡಕ್ಕೆ ಆದಷ್ಟು ತಿಳಿಬಣ್ಣಗಳನ್ನು ಉಪಯೋಗಿಸುವುದು ಉತ್ತಮ. ಶಾಖವನ್ನು ಹೀರಿಕೊಳ್ಳುವ ಲೋಹ ಹಾಗೂ ತಗಡಿನ ಛಾವಣಿಗಳ ಬದಲಾಗಿ, ಚಾವಣಿಯನ್ನು ಎತ್ತರಿಸುವುದು. ನೈಸರ್ಗಿಕವಾದ ಮಣ್ಣಿನ, ಹುಲ್ಲಿನ, ತೆಂಗು ಅಥವಾ ಅಡಿಕೆ ಗರಿಗಳ ಛಾವಣಿಗಳನ್ನು ಬಳಸುವುದು ಮತ್ತು ಕಡಿಮೆ ಎತ್ತರವಿರುವ ಛಾವಣಿಗಳ ಮೇಲೆ ತೆಂಗು ಅಥವಾ ಅಡಿಕೆ ಗರಿಗಳನ್ನು ಬಳಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

About the Author

Trending News