Tachycardia: ಇತ್ತೀಚಿನ ದಿನಗಳಲ್ಲಿ ವಯೋಮಿತಿ ಇಲ್ಲದೆ ಜನರು ಹೃದಯ ಕಾಯಿಲೆಗೆ ತುತ್ತಾಗುತ್ತಿದ್ದಾರೆ, ಇದು ಒಂದು ತರಹ ಸೂಚನೆಯೇ ಕೊಡದೆ ಯಮನಂತೆ ಬಂದು ನಿಮ್ಮ ಪ್ರಾಣವನ್ನೆ ತೆಗೆದು ಬಿಡುತ್ತದೆ. ಇಂದಿನ ದಿನಗಳಲ್ಲಿ ನಾವು ಅನುಸರಿಸುತ್ತಿರುವ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ದತಿ ಈ ಎಲ್ಲಾ ಸಮಸ್ಯೆಗಳಿಗೂ ಮುಖ್ಯ ಕಾರಣವಾಗಿದೆ. ಇದರೊಂದಿಗೆ ಧೂಮಪಾನ ಹಾಗೂ ಮಧ್ಯಪಾನದಂತಹ ಅಭ್ಯಾಸಗಳು ಕೂಡ ನಮ್ಮನ್ನು ಹೃದಯಘಾತದಿಂದ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿಗೆ ದೂಡಬಹುದು.
ಹೃದಯ ಕಾಯಿಲೆಯ ಮುಖ್ಯ ಲಕ್ಷಗಳು ನಮಗೆ ಸಾಮಾನ್ಯವಾಗಿ ಗೋಚರಿಸಬಹುದು, ಇವುಗಳನ್ನು ನಾವು ಸುಲಭವಾಗಿ ಪರಿಗಣಿಸಿ ತಪ್ಪು ಮಾಡಬಹುದು, ಆದರೆ ಇದು ಒಂದು ತೀವ್ರ ಆರೋಗ್ಯ ಸಮಸ್ಯೆ ಎಂದು ಅರಿತುಕೊಳ್ಳುವಷ್ಟರಲ್ಲಿ ನಮ್ಮ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ. ಎದೆಯ ಭಾಗದಲ್ಲಿ ನೋವು, ಹೆಚ್ಚು ಬೆವರುವಿಕೆ ಹಾಗೂ ಭುಜದಲ್ಲಿ ನೋವು ಕಾಣಿಸಿಕೊಂಡರೆ ಇದು ಹೃದಯಾಘಾತದ ಲಕ್ಷಣಗಳಾಗಿರಬಹುದು, ಆದ್ದರಿಂದ ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದ ತಕ್ಷಣ ನೀವು ವೈದ್ಯರನ್ನು ಬೇಟಿ ಮಾಡುವುದು ಉತ್ತಮ.
ಇದನ್ನೂ ಓದಿ: ಕ್ಯಾನ್ಸರ್ ರೋಗವನ್ನ ಗುಣಪಡಿಸುವ ಅತ್ಯಂತ ಶಕ್ತಿಶಾಲಿ ಹೂವಿದು! ಬೇರೆಲ್ಲೂ ಅಲ್ಲ ಮನೆಯಂಗಳದಲ್ಲೇ ಸಿಗುತ್ತೆ ಈ ಸಂಜೀವಿನಿ..
ಇನ್ನೂ, ಕೆಲವೊಮ್ಮೆ ಹೃದಯ ಇದ್ದಕ್ಕಿದಂತೆ ಒಂದೇ ಕ್ಷಣಕ್ಕೆ ವೇಗವಾಗಿ ಬಡಿದುಕೊಳ್ಳಲು ಆರಂಭಿಸುತ್ತದೆ, ಇಂತಹ ಲಕ್ಷಣ ನೀವೂ ಕೂಡ ಎಂದಾದರೊಮ್ಮೆ ಅನುಭವಿಸಿರಬಹುದು. ಇಂತಹ ಲಕ್ಷಣ ಕಂಡರೆ ತಕ್ಷಣ ನಿಮಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ, ಹಾಗೆಂದು ನೀವು ಈ ರೀತಿ ಪದೇ ಪದೇ ಆಗುತ್ತಿದ್ದರೆ ಅದನ್ನು ನಿರ್ಲಕ್ಷಿಸುವಂತಿಲ್ಲ. ಅಷ್ಟಕ್ಕೂ ಈ ರೀತಿ ಹೃದಯ ಒಂದೇ ಬಾರಿ ಜೋರಾಗಿ ಒಡೆದುಕೊಳ್ಳುವುದು ಏಕೆ? ಇದಕ್ಕೆ ಕಾರಣ ಏನು?
• ಸಾಮಾನ್ಯವಾಗಿ ನೀವು ವೇಗವಾಗಿ ಯಾವುದೇ ಕೆಲಸವನ್ನು ಮಾಡದಿರೆ, ಇಲ್ಲವಾದಲ್ಲಿ ಒತ್ತಡ ಹಾಗೂ ದೇಹವನ್ನು ಧಣಿಸುವ ಯಾವುದೇ ಕೆಲಸವನ್ನು ಮಾಡುವುದರಿಂದ ಹೃದಯ ಜೋರಾಗಿ ಒಡೆದುಕೊಳ್ಳಲು ಆರಂಭಿಸುತ್ತದೆ.
• ಅತಿಯಾಗಿ ಮಾನಸಿಕವಾಗಿ ಒತ್ತಡಕ್ಕೆ ಒಳಗಾದಾಗ ಅಥವಾ ಹೆಚ್ಚಾದ ಆತಂಕ ಎದುರಾದಾಗ ನಿಮ್ಮ ಹೃದಯ ಜೋರಾಗಿ ಬಡಿದುಕೊಳ್ಳಲು ಆರಂಭಿಸುತ್ತದೆ ಎನ್ನುತ್ತಾರೆ ತಜ್ಞರು.
• ಚಹಾ ಅಥವಾ ಕಾಫಿಯನ್ನು ಹೆಚ್ಚಾಗಿ ಕುಡಿಯುವುದರಿಂದ ದೇಹ ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸಲು ಆಗದೆ ಜೋರಾಗಿ ಬಡಿದುಕೊಳ್ಳಲು ಆರಂಭಿಸುತ್ತದೆ. ಅತಿಯಾದ ಎನರ್ಜಿ ಡ್ರಿಂಕ್ಸ್ ಸೇವಿಸಿದಾಗಲೂ ಸಹ ಇದೇ ಅನುಭವ ನಿಮಗೆ ಎದುರಾಗಿರಬಹುದು.
ಇದನ್ನೂ ಓದಿ: ಈ ರೋಗಗಳಿಗೆ ಕಲ್ಲಂಗಡಿ ಹಣ್ಣಿನ ಜ್ಯೂಸೇ ಮದ್ದು ! ಇದೇ ಸಮಯಕ್ಕೆ ಕುಡಿದರೆ ಮಾತ್ರ
• ನೀವು ಪ್ರತಿನಿತ್ಯ ಯಾವುದಾದರೂ ಕಾಯಿಲೆಗೆ ಔಷಧಿ ತೆಗೆದುಕೊಳ್ಳುವವರರಾಗಿದ್ದರೆ ನಿಮ್ಮ ಹೃದಯ ಒಂದೆ ಸಮನೆ ಜೋರಾಗಿ ಬಡೆದುಕೊಳ್ಳುವ ಅನಿಭವವನ್ನು ನೀವು ಅನುಭವಿಸಬಹುದು.
• ದೇಹದಲ್ಲಿ ಕಡಿಮೆ ರಕ್ತವಿದ್ದಾಗ ಹೃದಯ ಹೆಚ್ಚು ಹೆಚ್ಚು ಕೆಲಸ ಮಾಡಬೇಕಾಗುತ್ತದೆ, ಆ ಸಂದರ್ಭದಲ್ಲಿ ಹೃದಯ ಜೋರಾಗಿ ಒಡೆದುಕೊಳ್ಳಲು ಆರಂಭಿಸುತ್ತದೆ.
ಈ ಸಮಸ್ಯೆ ನಿಮ್ಮಲ್ಲಿ ಎಂದಾದರೊಮ್ಮೆ ಕಾಣಿಸಿಕೊಂಡರೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಪದೇ ಪದೇ ಈ ಸಮಸ್ಯೆ ಕಾಣಿಸಿಕೊಂಡರೆ, ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. ಹೀಗೆ ಜೋರಾಗಿ ಎದೆ ಬಿಡದುಕೊಳ್ಳುವುದರ ಜೊತೆಗೆ ಸುಸ್ತು, ಎಲೆ ತಿರುಗುವಿಕೆ ಹಾಗೂ ಉಸಿರಾಟದಂತಹ ಸಮಸ್ಯೆಗಳು ಕಾಣಿಸಿಕೊಂಡರೆ,ನೀವು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಏಕೆಂದರೆ ನೀವು ಸಾಮನ್ಯವೆಂದು ಭಾವಿಸುವ ಈ ಎಲ್ಲಾ ಲಕ್ಷಣಗಳು ಹೃದಯಾಘಾತದ ಮುನ್ಸೂಚನೆಗಳಾಗಿರಬಹುದು.
ಇದನ್ನೂ ಓದಿ: ಮಧುಮೇಹಿಗಳಿಗೆ 'ರಾಗಿ'ಯೇ ಮದ್ದು... ಈ ಆರೋಗ್ಯ ಸಮಸ್ಯೆಗಳಿಗೂ ಸಿಗುತ್ತೆ ಸುಲಭ ಪರಿಹಾರ
ಹೃದಯ ಇದ್ದಕ್ಕಿದಂತೆ ಜೋರಾಗಿ ಬಡಿದುಕೊಳ್ಳಲು ಆರಂಭಿಸಿದರೆ, ಗಾಬರಿಯಾಗದರೆ ಇರಿ, ನಿರಾಳವಾಗಿ ಕೂತು ನಿಧಾನವಾಗಿ ನೀರು ಕುಡಿಯಿರಿ. ಯಾವುದೇ ಕೆಲಸ ಮಾಡುತ್ತಿದ್ದರೂ ಅದನ್ನು ಕೂಡಲೇ ನಿಲ್ಲಿಸಿ ರಿಲ್ಯಾಕ್ಸ್ ಮಾಡಿ. ಈ ಲಕ್ಷಣಗಳು ನಿಲ್ಲದೇ ನಿಮಗೆ ಪದೆ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಕೂಡಲೇ ವೈದ್ಯರನ್ನು ಭೇಟಿಯಾಗಿ. ಯಾವುದೇ ಕಾರಣಕ್ಕೂ ಈ ಲಕ್ಷಣಗಳನ್ನು ಕಡೆಗಣಿಸಬೇಡಿ, ಏಕೆಂದರೆ ಇದು ಒಂದು ವೇಳೆ ಹೃದಯದ ಕಾಯಿಎಲೆಯಾಗಿದ್ದರೆ ನಿಮ್ಮ ಪ್ರಾಣಕ್ಕೆ ಅಪಾಯ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.
ಇದನ್ನೂ ಓದಿ: 126 ಕೆಜಿಯಿಂದ 56 ಕೆಜಿಗೆ ತೂಕ ಇಳಿಸಿಕೊಂಡ ಬೆಂಗಳೂರಿನ ಮಹಿಳೆ! ಫಾಲೋ ಮಾಡಿದ್ದು ಈ ಸರಳ ಟಿಪ್ಸ್









