Green Tea ಸೇವನೆ ಆರೋಗ್ಯಕರ! ಆದರೆ...

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಗ್ರೀನ್ ಟೀ(Green Tea) ಸೇವಿಸುತ್ತಾರೆ. ಗ್ರೀನ್ ಟೀ ಜೀವನಶೈಲಿಯ ಪ್ರಮುಖ ಭಾಗವಾಗಿದೆ, ಆದ್ದರಿಂದ ನಾವು ಅದರ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ನಿಮಗೆ ಹೇಳಲಿದ್ದೇವೆ.

Last Updated : Nov 26, 2019, 04:04 PM IST
Green Tea ಸೇವನೆ ಆರೋಗ್ಯಕರ! ಆದರೆ... title=

ಗ್ರೀನ್ ಟೀ(Green Tea) ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಜನರು ಹೇಳುವುದನ್ನು ನೀವು ಸಾಮಾನ್ಯವಾಗಿ ಕೇಳಿದ್ದೀರಿ, ಆದರೆ ಇದರಿಂದ ಉಂಟಾಗುವ ಹಾನಿಯ ಬಗ್ಗೆ ಯಾರಿಗೂ ತಿಳಿದಿಲ್ಲ. ಜಿಮ್‌ಗೆ ಹೋಗುವವರಿಗೆ ಮತ್ತು ಫಿಟ್‌ನೆಸ್‌ಗೆ ವಿಶೇಷ ಗಮನ ಕೊಡುವವರಿಗೆ ಗ್ರೀನ್ ಟೀ ಅವರ ಜೀವನದ ಪ್ರಮುಖ ಭಾಗವಾಗಿದೆ. ಆದರೆ ಅದು ಎಷ್ಟು ಕುಡಿಯಬೇಕು ಮತ್ತು ಯಾವಾಗ ಎಂದು ಹಲವರಿಗೆ ತಿಳಿದಿಲ್ಲ. ಆದ್ದರಿಂದ ಗ್ರೀನ್ ಟೀ ನಿಮ್ಮ ಜೀವನಶೈಲಿಯ ಪ್ರಮುಖ ಭಾಗವಾಗಿದ್ದರೆ, ಅದರ ಬಗ್ಗೆ ಕೆಲವು ಪ್ರಮುಖ ವಿಷಯಗಳನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

- ಖಾಲಿ ಹೊಟ್ಟೆಯಲ್ಲಿ ಎಂದಿಗೂ ಗ್ರೀನ್ ಟೀ ಸೇವಿಸಬೇಡಿ. ಇದು ನಿಮಗೆ ಆಮ್ಲೀಯತೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಇದು 24 ರಿಂದ 25 ಮಿಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಗ್ರೀನ್ ಟೀ ಅನ್ನು ದಿನಕ್ಕೆ 4 ರಿಂದ 5 ಬಾರಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಕೆಫೀನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ನಿದ್ರೆಯ ಅಭಾವ, ತಲೆತಿರುಗುವಿಕೆ, ಒಂದು ರೀತಿಯ ಭಯದ ಕಾಡುವಿಕೆ ರೀತಿಯ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

- ಕೆಲವರು ಸಾಮಾನ್ಯ ಚಹಾದಂತೆ ಗ್ರೀನ್ ಟೀ ಕುಡಿಯುತ್ತಾರೆ. ಹೀಗೆ ಮಾಡುವುದನ್ನು ತಪ್ಪಿಸಿ. ಆಹಾರದೊಂದಿಗೆ ಗ್ರೀನ್ ಟೀ ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ. ಆದ್ದರಿಂದ ನೀವು ಹಸಿರು ಚಹಾವನ್ನು ಸೇವಿಸುತ್ತಿದ್ದರೆ, ಸಾಕಷ್ಟು ಕಬ್ಬಿಣದ ಅಂಶವಿರುವ ಆಹಾರವನ್ನು ತೆಗೆದುಕೊಳ್ಳಿ.

- ಅಲ್ಲದೆ, ಹಸಿರು ಚಹಾವನ್ನು ಎಂದಿಗೂ ಔಷಧಿಗಳೊಂದಿಗೆ ಕುಡಿಯಬಾರದು. ಗ್ರೀನ್ ಟೀ ಜೊತೆಗೆ ಔಷಧಿಗಳು  ನಿಮಗೆ ನಿಮ್ಮ ನರಮಂಡಲಕ್ಕೆ ಸಂಬಂಧಿಸಿದ ಕೆಲವು ಹಾನಿಯನ್ನುಂಟುಮಾಡುತ್ತವೆ. ಇದರಿಂದಾಗಿ ನಿಮಗೆ ರಕ್ತದೊತ್ತಡದ ಸಮಸ್ಯೆ ಎದುರಾಗುವ ಸಾಧ್ಯತೆಯೂ ಇದೆ.

-  ಗರ್ಭಿಣಿಯಾಗಿದ್ದರೆ ಅಥವಾ ಮಗುವಿಗೆ ಹಾಲುಣಿಸುತ್ತಿದ್ದರೆ ಅಂತಹವರು ಗ್ರೀನ್ ಟೀ ಸೇವಿಸುವುದನ್ನು ತಪ್ಪಿಸಿ. ಇದು ನಿಮ್ಮ ಮಗುವಿಗೆ ತುಂಬಾ ಹಾನಿಕಾರಕ ಎಂದು ಕೆಲವು ಅಧ್ಯಯನ ತಿಳಿಸಿವೆ.

- ಇದಲ್ಲದೆ, ಗ್ರೀನ್ ಟೀ ಅತಿಯಾದ ಸೇವನೆಯು ಮೂಳೆಯ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ದೇಹದಲ್ಲಿನ ಕ್ಯಾಲ್ಸಿಯಂ ತನ್ನ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.
 

Trending News