ಬೆಂಗಳೂರು:  ಭಾರತವನ್ನು ಸೇರಿದಂತೆ, ಇತರ ಅನೇಕ ದೇಶಗಳಲ್ಲಿ, ಜನರು ದೊಡ್ಡ ಪ್ರಮಾಣದಲ್ಲಿ ಮಧುಮೇಹದಿಂದ ಬಳಲುತ್ತಿದ್ದಾರೆ ಮತ್ತು ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇದಕ್ಕೆ ದೊಡ್ಡ ಕಾರಣವೆಂದರೆ ಕೆಟ್ಟ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ. ಇಂತಹ ಪರಿಸ್ಥಿತಿಯಲ್ಲಿ, ಈ ಎರಡು ಅಂಶಗಳ ಸಹಾಯದಿಂದ, ನೀವು ಅದನ್ನು ನಿಯಂತ್ರಣದಲ್ಲಿ ಇಡಬಹುದು. ಇದಕ್ಕಾಗಿ, ವ್ಯಾಯಾಮ ಮಾಡುವುದು ಮತ್ತು ಆಹಾರದಲ್ಲಿ ಕೆಲ ಸಂಗತಿಗಳನ್ನು ಶಾಮೀಲುಗೊಳಿಸುವುದು ಅವಶ್ಯಕ, ಅವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ನಮಗೆ ಸಹಾಯ ಮಾಡುತ್ತದೆ. ಅಂತಹ ಸಂಗತಿಗಳಲ್ಲಿ ನಾವು ಸೇವಿಸುವ ಮತ್ತು ಕುಡಿಯುವ ಕೆಲ ಸಂಗತಿಗಳು ಕೂಡ ಸೇರಿವೆ. ಇಂದು ನಾವು ನಿಮಗೆ ಒಟ್ಟು 4 (ಮಧುಮೇಹಕ್ಕೆ ಹರ್ಬಲ್ ಟೀ) ಹರ್ಬಲ್ ಟೀಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ, ಈ ಚಹಾಗಳು ಮಧುಮೇಹ ರೋಗಿಗಳಿಗೆ ವರದಾನಗಳಾಗಿವೆ ಎಂದರೆ ತಪ್ಪಾಗಲಾರದು. ಅವುಗಳನ್ನು ನೀವು  ಪ್ರತಿದಿನ ಸೇವಿಸುವುದರಿಂದ ಸಕ್ಕರೆ ನಿಯಂತ್ರಣದಲ್ಲಿರುತ್ತದೆ ಮತ್ತು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ, 


COMMERCIAL BREAK
SCROLL TO CONTINUE READING

ಶುಂಠಿ ಚಹಾ
ಸಾಮಾನ್ಯವಾಗಿ ಜನರು ಚಹಾದಲ್ಲಿ ಶುಂಠಿ ಬೆರೆಸಿ ಕುಡಿಯಲು ಇಷ್ಟಪಡುತ್ತಾರೆ. ಆದರೆ, ನಾವು ಹಾಲು ಇಲ್ಲದೆ ಶುಂಠಿ ಚಹಾದ ಬಗ್ಗೆ ಮಾತನಾಡುತ್ತಿದ್ದೇವೆ. ಈ ಚಹಾವನ್ನು ತಯಾರಿಸಲು, ಶುಂಠಿಯನ್ನು ಕತ್ತರಿಸಿದ ನಂತರ, ಅದನ್ನು ನೀರಿನಲ್ಲಿ ಕುದಿಸಿ ನಂತರ ಅದರಲ್ಲಿ ನಿಂಬೆ ರಸವನ್ನು ಹಿಂಡುವ ಮೂಲಕ ಇದನ್ನು ತಯಾರಿಸಲಾಗುತ್ತದೆ. ಈ ಚಹಾವನ್ನು ಕುಡಿಯುವುದು ಮಧುಮೇಹದಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ಇನ್ಸುಲಿನ್ ಉತ್ಪತ್ತಿ ಇದರಿಂದ ಸರಾಗವಾಗುತ್ತದೆ. ಅಷ್ಟೇ ಅಲ್ಲ, ಚಯಾಪಚಯ ಕ್ರಿಯೆಯನ್ನು ಆರೋಗ್ಯಕರವಾಗಿಡಲು ಈ ಚಹಾ ತುಂಬಾ ಸಹಾಯ ಮಾಡುತ್ತದೆ.


ದಾಲ್ಚಿನ್ನಿ ಚಹಾ
ಇದಲ್ಲದೆ, ನೀವು ಮಧುಮೇಹದಲ್ಲಿ ದಾಲ್ಚಿನ್ನಿ ಚಹಾವನ್ನು ಕುಡಿಯಬಹುದು. ದಾಲ್ಚಿನ್ನಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿದೆ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ . ಇದಕ್ಕಾಗಿ ಬಿಸಿ ನೀರಿಗೆ ದಾಲ್ಚಿನ್ನಿ ಹಾಕಿ ಕುದಿಸಿ ಈ ಟೀ ತಯಾರಿಸುತ್ತಾರೆ.


ಇದನ್ನೂ ಓದಿ-ರಕ್ತದಲ್ಲಿನ ಅಧಿಕ ಸಕ್ಕರೆ ರೋಗಿಗಳಿಗೆ ಸಂಜೀವನಿ ಈ ಗಿಡಮೂಲಿಕೆ, ಟ್ರೈ ಮಾಡಿ ನೋಡಿ


ದಾಸವಾಳ  ಚಹಾ
ಈ ಚಹಾವನ್ನು ತಯಾರಿಸಲು ದಾಸವಾಳದ ಹೂವುಗಳನ್ನು ನೀರಿನಲ್ಲಿ ಕುದಿಸಲಾಗುತ್ತದೆ. ದಾಸವಾಳದ ಟೀ ಕುಡಿಯುವುದರಿಂದ ದೇಹಕ್ಕೆ ಆ್ಯಂಟಿ ಆಕ್ಸಿಡೆಂಟ್ ಸಿಗುತ್ತದೆ ಮತ್ತು ರಕ್ತದ ಸಕ್ಕರೆಯ ಜೊತೆಗೆ ಈ ಟೀ ಕುಡಿಯುವುದರಿಂದ ರಕ್ತದೊತ್ತಡದ ಸಮಸ್ಯೆಯೂ ದೂರವಾಗುತ್ತದೆ.


ಇದನ್ನೂ ಓದಿ-ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬೇಕೆ? ಸಲಾಡ್ ಗೆ ಈ ಒಂದು ಪದಾರ್ಥ ಬೆರೆಸಿ ಸೇವಿಸಿ ಸಾಕು!


ಅಲೋವೆರಾ ಚಹಾ
ಅಲೋವೆರಾ ಟೀ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಅಲೋವೆರಾ ಚಹಾವನ್ನು ತಯಾರಿಸಲು, ತಾಜಾ ಅಲೋವೆರಾ ತಿರುಳನ್ನು ನೀರಿನಲ್ಲಿ ಕುದಿಸಿ ನಂತರ ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.