)
Heart Attact Symptoms: ಇತ್ತೀಚಿನ ದಿನಗಳಲ್ಲಿ ಸಣ್ಣ-ಪುಟ್ಟ ವಯಸ್ಸಿನವರೂ ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಘಟನೆಗಳು ಎಲ್ಲರನ್ನೂ ಆತಂಕಕ್ಕೀಡು ಮಾಡಿವೆ. ಹೃದಯದ ಕಾಯಿಲೆ ಮಾತ್ರವಲ್ಲದೆ ಪಾರ್ಶ್ವವಾಯು, ಹೃದಯಾಘಾತ ಮುಂತಾದ ಅನೇಕ ಕಾಯಿಲೆಗಳ ಅಪಾಯವೂ ಕೂಡ ಹೆಚ್ಚಾಗಿದೆ. ಆದರಿವು ಒಮ್ಮೆಗೆ ಅಪ್ಪಳಿಸುವ ಕಾಯಿಲೆಗಳಲ್ಲ. ಬದಲಿಗೆ, ಮೊದಲೇ ಇದರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇಂತಹ ಲಕ್ಷಣಗಳು ಕಂಡು ಬಂದರೆ, ತಡಮಾಡದೆಯೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಈ ಲೇಖನದಲ್ಲಿ ಹೃದಯಾಘಾತದ ಅಪಾಯದ ಬಗ್ಗೆ ಎಚ್ಚರಿಕೆ ನೀಡುವ ಸೌಮ್ಯ ಲಕ್ಷಣಗಳ ಬಗ್ಗೆ ತಿಳಿಯೋಣ.
ನಿರಂತರ ತೋಳು ನೋವು:
ತೋಳುಗಳಲ್ಲಿ ನೋವು ಕಾಣಿಸಿಕೊಳ್ಳುವುದನ್ನು ಬಹುತೇಕ ಜನರು ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸುತ್ತಾರೆ. ಆದರೆ, ನಿರಂತರವಾಗಿ ಕಾಣಿಸಿಕೊಳ್ಳುವ ತೋಳು ನೋವು, ರಕ್ತನಾಳಗಳಲ್ಲಿ ಅಡಚಣೆಯ ಸಂಕೇತವಾಗಿದೆ. ಇಂತಹ ಲಕ್ಷಣ ಕಂಡು ಬಂದಾಗ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಚರ್ಮದ ಬಣ್ಣ ಬದಲು:
ಗಮನಾರ್ಹವಾಗಿ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯದಿದ್ದರೆ, ಚರ್ಮದ ಬಣ್ಣ ಬದಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಬೆರಳುಗಳ ಬಣ್ಣ ನೀಲಿ ಮತ್ತು ನೇರಳೆ ಬಣ್ಣಕ್ಕೆ ತಿರುಗಬಹುದು. ಇದೂ ಕೂಡ ಹಾರ್ಟ್ ಅಟ್ಯಾಕ್ ಲಕ್ಷಣವಾಗಿದೆ.
ಪರಿಧಮನಿ ಕಾಯಿಲೆಯ ಲಕ್ಷಣ:
ಬೆರಳುಗಳ ಮೇಲಿನ ಚರ್ಮದ ಬಣ್ಣ ಬಯಲಾಗಲು ಶೀತ, ಒತ್ತಡವೂ ಕಾರಣವಾಗಿರಬಹುದು. ಆದರೆ, ಪದೇ ಪದೇ ಈ ಲಕ್ಷಣಗಳು ಕಂಡುಬಂದಲ್ಲಿ ಇದು ಪರಿಧಮನಿ ಕಾಯಿಲೆಯ ಲಕ್ಷಣವಾಗಿದೆ. ಇದನ್ನು ನಿರ್ಲಕ್ಷಿಸುವ ತಪ್ಪನ್ನು ಎಂದಿಗೂ ಮಾಡಬೇಡಿ.
ದುರ್ಬಲ ಸ್ನಾಯುಗಳು:
ದೇಹದ ಮೇಲ್ಭಾಗದಲ್ಲಿ ರಕ್ತ ಪರಿಚಲನೆ ಉತ್ತಮವಾಗಿಲ್ಲದಿದ್ದಾಗ ಕ್ರಮೇಣ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಚಿಕ್ಕ ಚಿಕ್ಕ ಕೆಲಸ ಮಾಡುವಾಗಲೂ ಕೈ-ಕಾಲು ದಣಿದಂತಾಗುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆ ಕಳಪೆಯಾಗಿದೆ ಎಂಬುದರ ಎಚ್ಚರಿಕೆಯ ಗಂಟೆಯಾಗಿದ್ದು, ಇದೂ ಸಹ ಹೃದಯ ಕಾಯಿಲೆಯ ಬಗ್ಗೆ ಸೂಚಿಸುವ ಸೌಮ್ಯ ಚಿಹ್ನೆಯಾಗಿದೆ. ನಿಮಗೂ ಈ ರೀತಿಯ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರೆ ಇದನ್ನು ನಿರ್ಲಕ್ಷಿಸದೆ ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.