ಕೀಲುಗಳಲ್ಲಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ಕರಗಿಸುತ್ತದೆ ಈ ಹಣ್ಣು !ಆಪರೇಶನ್ ಇಲ್ಲದೆ ಕಿಡ್ನಿ ಸ್ಟೋನ್ ಕರಗಿಸುವ ಏಕೈಕ ಹಣ್ಣು !

ಕೀಲುಗಳಲ್ಲಿ ಸೇರಿಕೊಂಡು ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ಕರಗಿಸಲು ಈ ತರಕಾರಿ ಸಹಾಯ ಮಾಡುತ್ತದೆ. ಈ ತರಕಾರಿ ಯೂರಿಕ್ ಆಸಿಡ್ ಕರಗಿಸುವ ಮೂಲಕ ಕಿಡ್ನಿ ಸ್ಟೋನ್ ಆಗದಂತೆ  ತಡೆಯುತ್ತದೆ. 

Written by - Ranjitha R K | Last Updated : May 6, 2025, 12:19 PM IST
  • ಯೂರಿಕ್ ಆಸಿಡ್ ಮಟ್ಟ ಅಧಿಕವಾಗಿದ್ದರೆ, ಕೀಲುಗಳ ನೋವು ಉಂಟಾಗುತ್ತದೆ.
  • ಮೂತ್ರಪಿಂಡಗಳ ಮೇಲೆ ಕೂಡಾ ತೀವ್ರವಾಗಿ ಪರಿಣಾಮ ಬೀರಬಹುದು.
  • ಇದನ್ನು ನಿಯಂತ್ರಣಕ್ಕೆ ತರಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಕೀಲುಗಳಲ್ಲಿ ಹರಳುಗಟ್ಟಿ ಕುಳಿತಿರುವ ಯೂರಿಕ್ ಆಸಿಡ್ ಅನ್ನು ಕರಗಿಸುತ್ತದೆ ಈ ಹಣ್ಣು !ಆಪರೇಶನ್ ಇಲ್ಲದೆ ಕಿಡ್ನಿ ಸ್ಟೋನ್ ಕರಗಿಸುವ ಏಕೈಕ ಹಣ್ಣು !

ಬೆಂಗಳೂರು : ಯೂರಿಕ್ ಆಸಿಡ್ ಮಟ್ಟ ಅಧಿಕವಾಗಿದ್ದರೆ, ಕೀಲುಗಳು ಮಾತ್ರವಲ್ಲದೆ ನಿಮ್ಮ ಮೂತ್ರಪಿಂಡಗಳ ಮೇಲೆ ಕೂಡಾ ತೀವ್ರವಾಗಿ ಪರಿಣಾಮ ಬೀರಬಹುದು. ಪ್ಯೂರಿನ್‌ಗಳು ಎಂದು ಕರೆಯಲ್ಪಡುವ ಅಂಶಗಳ ವಿಭಜನೆಯಿಂದ ದೇಹದಲ್ಲಿ ರೂಪುಗೊಳ್ಳುವ ತ್ಯಾಜ್ಯ ಉತ್ಪನ್ನವಾದ ಯೂರಿಕ್  ಆಸಿಡ್ ಅನ್ನು ಸಾಮಾನ್ಯವಾಗಿ ಮೂತ್ರಪಿಂಡಗಳು ಫಿಲ್ಟರ್ ಮಾಡಿ ದೇಹದಿಂದ ತೆಗೆದುಹಾಕುತ್ತವೆ. ಆದರೆ ಅದರ ಪ್ರಮಾಣ ಹೆಚ್ಚಾದಂತೆ, ಅದು ಕೀಲುಗಳು ಮತ್ತು ಮೂತ್ರಪಿಂಡಗಳಲ್ಲಿ ಹರಳುಗಳ ರೂಪದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದು ಸಂಧಿವಾತ ಮತ್ತು ಗಂಭೀರ ಮೂತ್ರಪಿಂಡದ ಸಮಸ್ಯೆಗಳನ್ನು ಉಂಟುಮಾಡಬಹುದು. 

Add Zee News as a Preferred Source

ಕೀಲುಗಳು ಮತ್ತು ಮೂತ್ರಪಿಂಡಗಳ ಉತ್ತಮ ಆರೋಗ್ಯಕ್ಕೆ ಯೂರಿಕ್ ಆಸಿಡ್  ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದನ್ನು ನಿಯಂತ್ರಣಕ್ಕೆ ತರಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಂಥಹ ಪರಿಣಾಮಕಾರಿ ಮನೆ ಮದ್ದುಗಳಲ್ಲಿ ಪಪ್ಪಾಯ ಕೂಡಾ ಒಂದು.

ಇದನ್ನೂ ಓದಿ : ಹೆರಿಗೆ ಬಳಿಕ ಕೂದಲು ಉದುರುತ್ತಿದೆಯೇ...? ಮಗು ಆದ ನಂತರವೂ ದಷ್ಟಪುಷ್ಟ ಉದ್ದ ಕೂದಲನ್ನು ಹೊಂದಲು ಹೀಗಿರಲಿ ಕೂದಲ ಆರೈಕೆ

ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸುವಲ್ಲಿ ಮತ್ತು ಅದನ್ನು ಕರಗಿಸಿ ಹೊರಹಾಕುವಲ್ಲಿ ಪಪ್ಪಾಯಿ ಎಷ್ಟು ಪ್ರಯೋಜನಕಾರಿ  :
ಮೂತ್ರಪಿಂಡಗಳ ಶೋಧನೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ : 
ಪಪ್ಪಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡಗಳ ರಕ್ತವನ್ನು ಶೋಧಿಸುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಇದು ದೇಹದಿಂದ ಯೂರಿಕ್ ಆಮ್ಲ ಮತ್ತು ಇತರ ವಿಷವನ್ನು ಹೆಚ್ಚು ಪರಿಣಾಮಕಾರಿಯಾಗಿ ತೆಗೆದುಹಾಕಲು ಸಹಾಯ ಮಾಡಿಕೊಡುತ್ತದೆ.

ಯೂರಿಕ್ ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ : 
ಪಪ್ಪಾಯಿಯಲ್ಲಿ ಪಪೈನ್ ಮತ್ತು ಕೈಮೊಪಪೈನ್ ಎಂಬ ಶಕ್ತಿಶಾಲಿ ಕಿಣ್ವಗಳಿದ್ದು, ಇದು ಪ್ರೋಟೀನ್‌ಗಳನ್ನು ಒಡೆಯಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಪ್ಯೂರಿನ್‌ಗಳ ವಿಭಜನೆಯನ್ನು ಸುಧಾರಿಸುತ್ತದೆ. ಇದು ಯೂರಿಕ್ ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಊತ ಮತ್ತು ನೋವಿನಿಂದ ಪರಿಹಾರ : 
ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ, ಅದು ಕೀಲುಗಳಲ್ಲಿ ಊತ ಮತ್ತು ನೋವನ್ನು ಉಂಟುಮಾಡುತ್ತದೆ. ಪಪ್ಪಾಯಿ ಹಣ್ಣಿನಲ್ಲಿರುವ ಉರಿಯೂತ ನಿವಾರಕ ಗುಣಗಳು ಈ ಊತವನ್ನು ಕಡಿಮೆ ಮಾಡಲು ಮತ್ತು ನೋವಿನಿಂದ ಪರಿಹಾರವನ್ನು ನೀಡುವಲ್ಲಿ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ : ವೃದ್ದಾಪ್ಯದಲ್ಲೂ ಹಾರ್ಟ್‌ಅಟ್ಯಾಕ್‌ ಆಗದಂತೆ ತಡೆಯುತ್ತೆ ಬೇಸಿಗೆಯಲ್ಲಿ ಮಾತ್ರ ಸಿಗುವ ಹಣ್ಣು! ಮಾರಕ ಕ್ಯಾನ್ಸರ್‌ ರೋಗಕ್ಕೂ ಇದೇ ಮದ್ದು..

ತೂಕ ಇಳಿಕೆಗೆ ಸಹಾಯ ಮಾಡುತ್ತದೆ : 
ಪಪ್ಪಾಯಿಯಲ್ಲಿರುವ ಕ್ಯಾಲೋರಿ ಕಡಿಮೆ ಮಟ್ಟದಲ್ಲಿದ್ದು, ಫೈಬರ್ ನಲ್ಲಿ ಸಮೃದ್ದವಾಗಿರುತ್ತದೆ. ಯಾರೇ ಆಗಲಿ ತೂಕ ಇಳಿಸಿಕೊಳ್ಳಲು ಹೆಚ್ಚಿನ ಫೈಬರ್ ಅಂಶ ಇರುವ ಆಹಾರ ಸೇವಿಸಬೇಕು. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. 

ಜೀರ್ಣಕಾರಿ ಕಿಣ್ವಗಳಿಂದ ಸಮೃದ್ಧವಾಗಿದೆ : 
ಹಸಿರು ಪಪ್ಪಾಯಿಯಲ್ಲಿ ಫೈಬರ್ ಮತ್ತು ಜೀರ್ಣಕಾರಿ ಕಿಣ್ವಗಳು ಸಮೃದ್ಧವಾಗಿವೆ. ಅವು ಸರಾಗ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು ಹೆಚ್ಚುವರಿ ಯೂರಿಕ್ ಆಸಿಡ್ ಸೇರಿದಂತೆ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಸರಿಯಾಗಿ ಹೊರಹಾಕಲು ಸಹಾಯ ಮಾಡುತ್ತದೆ.

ಪಪ್ಪಾಯಿ ದೇಹವನ್ನು ನಿರ್ವಿಷಗೊಳಿಸುತ್ತದೆ : 
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ಪಪ್ಪಾಯಿ ತಿನ್ನುವುದರಿಂದ ದೇಹದ ನೈಸರ್ಗಿಕ ನಿರ್ವಿಶೀಕರಣ ಪ್ರಕ್ರಿಯೆ ಉತ್ತೇಜಿಸುತ್ತದೆ.ಇದು ರಕ್ತಪ್ರವಾಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರಿಂದಾಗಿ ಯೂರಿಕ್ ಆಮ್ಲದ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

 (ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News