)
White Menstruation Problem: ಮಹಿಳೆಯರಲ್ಲಿ ಬಿಳಿ ಮುಟ್ಟಿನ ಸಮಸ್ಯೆಗೆ ಸಾಮಾನ್ಯವೇ. ಆದರೂ ಅತಿಯಾದ ಪ್ರಮಾಣದಲ್ಲಿ ಬಿಳಿ ಸ್ರಾವವು ಕಾಲಜಿಯ ವಿಷಯವಾಗಿದೆ. ಬಿಳಿ ಮುಟ್ಟಿನ ಸಮಸ್ಯೆಯಿಂದಾಗಿ ಮಹಿಳೆಯರಲ್ಲಿ ದೈಹಿಕ ದೌರ್ಬಲ್ಯ ಹೆಚ್ಚಾಗುವುದರ ಜೊತೆಗೆ ಆಯಾಸ, ತಲೆತಿರುಗು ಸೇರಿದಂತೆ ಹಲವು ಇತರ ಆರೋಗ್ಯ ಸಮಸ್ಯೆಗಳು ಕೂಡ ಬಾಧಿಸುತ್ತವೆ. ಆದರೆ, ಒಂದೇ ಒಂದು ಹಣ್ಣಿನ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ಆಯುರ್ವೇದದ ಪ್ರಕಾರ, ದಾಳಿಂಬೆ ಹಣ್ಣು ಮಹಿಳೆಯರು ಬಿಳಿ ಮುಟ್ಟಿನ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಅದರಲ್ಲೂ, ವಿಶೇಷವಾಗಿ ದಾಳಿಂಬೆ ಬೀಜಗಳಿಂದ ತಯಾರಿಸಿದ ಜ್ಯೂಸ್ ಕುಡಿಯುವುದರಿಂದ ಮಹಿಳೆಯರು ದೈಹಿಕವಾಗಿ ಬಲಗೊಳ್ಳುವುದರ ಜೊತೆಗೆ ಇದು ಬಿಳಿ ಸ್ರಾವ ಅಥವಾ ಬಿಳಿ ಮುಟ್ಟಿನ ಸಮಸ್ಯೆಯಿಂದ ಪಾರಾಗಬಹುದು ಎನ್ನಲಾಗುತ್ತದೆ.
ವಾಸ್ತವವಾಗಿ, ದಾಳಿಂಬೆ ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದ್ದು ಇದು ಹಾರ್ಮೋನುಗಳನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾತ್ರವಲ್ಲದೆ, ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಇದು ಮಹಿಳೆಯರ ಆರೋಗ್ಯಕ್ಕೆ ಭರಪೂರ ಪ್ರಯೋಜನಗಳನ್ನು ಕೂಡ ನೀಡುತ್ತದೆ.
ಮಹಿಳೆಯರ ಆರೋಗ್ಯಕ್ಕೆ ದಾಳಿಂಬೆ ಪ್ರಯೋಜನ:
ಸ್ವತಂತ್ರ ರಾಡಿಕಲ್ಗಳಿಂದ ರಕ್ಷಣೆ:
ದಾಳಿಂಬೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇದು ದೇಹವನ್ನು ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸುತ್ತದೆ. ದಾಳಿಂಬೆ ಜ್ಯೂಸ್ ನಿಯಮಿತ ಬಳಕೆಯಿಂದಾಗಿ ಜೀವಕೋಶಗಳು ಹಾನಿಗೊಳಗಾಗುವುದನ್ನು ತಡೆಯುವುದಲ್ಲದೆ, ಸೋಂಕುಗಳಿಂದ ಹೋರಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ.
ಮೂತ್ರದ ಸೋಂಕು:
ದಾಳಿಂಬೆ ರಸವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದೆ. ಇದು ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರೊಂದಿಗೆ, ಮೂತ್ರದ ಸೋಂಕಿನಿಂದಲೂ ರಕ್ಷಿಸುತ್ತದೆ.
ಯೋನಿ ಆರೋಗ್ಯ:
ದಾಳಿಂಬೆ ಹಣ್ಣಿನಲ್ಲಿ ಕಂಡು ಬರುವ ಉರಿಯೂತದ ಗುಣಲಕ್ಷಣಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವುದರ ಜೊತೆಗೆ ಯೋನಿ ಪ್ರದೇಶದಲ್ಲಿ ಕಂಡು ಬರುವ ಉರಿಯೂತ, ಕಿರಿಕಿರಿಯನ್ನು ಕಾಡಿಕ್ಮೆ ಮಾಡುತ್ತದೆ.
ಬಿಳಿ ಮುಟ್ಟಿನ ಸಮಸ್ಯೆಗೆ ಪರಿಹಾರ:
ದಾಳಿಂಬೆ ಜ್ಯೂಸ್ ಮಾತ್ರವಲ್ಲದೆ, ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿ ಅದನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದಲೂ ಸಹ ಬಿಳಿ ಮುಟ್ಟಿನ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.