close

News WrapGet Handpicked Stories from our editors directly to your mailbox

ಇದು ಪ್ರಧಾನಿ ನರೇಂದ್ರ ಮೋದಿಯವರ ಫಿಟ್ನೆಸ್ ರಹಸ್ಯ!

ಪ್ರಧಾನಿ ನರೇಂದ್ರ ಮೋದಿ ಅವರು ಆಯಾಸಗೊಳ್ಳದೆ ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರು ಒಂದೇ ಒಂದು ದಿನವೂ ರಜಾ ತೆಗೆದುಕೊಂಡಿಲ್ಲ. ಹೀಗಿರುವಾಗ ಪ್ರಧಾನಿ ಮೋದಿ ಅವರ ಆಹಾರ ಕ್ರಮ ಹೇಗಿರುತ್ತೆ? ಅವರ ಫಿಟ್ನೆಸ್ ರಹಸ್ಯ ಏನು ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಉದ್ಭವಿಸುತ್ತದೆ.

Updated: Sep 27, 2019 , 03:56 PM IST
ಇದು ಪ್ರಧಾನಿ ನರೇಂದ್ರ ಮೋದಿಯವರ ಫಿಟ್ನೆಸ್ ರಹಸ್ಯ!

ನವದೆಹಲಿ: ಉದ್ಯೋಗಿಗಳು ಸಾಮಾನ್ಯವಾಗಿ ಯೋಚಿಸೋದು ಅಯ್ಯೋ, ಶನಿವಾರ-ಭಾನುವಾರ ಯಾವಾಗ ಬರುತ್ತೆ? ವಾರ ಪೂರ್ತಿ ಕೆಲಸ ಮಾಡಿ ಸಖತ್ ಆಯಾಸ ಆಗಿದೆ. ವಾರದಲ್ಲಿ ಒಂದು ದಿನದ ವಿಶ್ರಾಂತಿ ಬೇಕು ಅಂತಾ ಅನ್ಕೊತಾನೆ ಇರ್ತೀವಿ... ಆದರೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಆಯಾಸಗೊಳ್ಳದೆ ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಅವರು ಒಂದೇ ಒಂದು ದಿನವೂ ರಜಾ ತೆಗೆದುಕೊಂಡಿಲ್ಲ. ಹೀಗಿರುವಾಗ ಪ್ರಧಾನಿ ಮೋದಿ ಅವರ ಆಹಾರ ಕ್ರಮ ಹೇಗಿರುತ್ತೆ? ಅವರ ಫಿಟ್ನೆಸ್ ರಹಸ್ಯ ಏನು ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಉದ್ಭವಿಸುತ್ತದೆ.

ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಆಹಾರ ಕ್ರಮ ಹೇಗಿದೆ ಅಂದ್ರೆ, ಅದು ರುಚಿಕರವೂ ಹೌದು, ಆರೋಗ್ಯದಾಯಕವೂ ಹೌದು.  ಪ್ರಧಾನಮಂತ್ರಿಯವರು ತಮ್ಮ ಉತ್ತಮ ಆರೋಗ್ಯ ಕ್ರಮದಿಂದಾಗಿಯೇ ಆರೋಗ್ಯವಾಗಿ ಮತ್ತು ಸದೃಢವಾಗಿರಿಸಿಕೊಂಡಿದ್ದಾರೆ.

ಖಿಚ್ಡಿ:
ಖಿಚ್ಡಿ ಎಂಬುದು ಸುಲಭವಾಗಿ ತಯಾರಿಸಲ್ಪಟ್ಟ ಮತ್ತು ಅಷ್ಟೇ ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ನಮಗೆ ಏನನ್ನಾದರೂ ತಿನ್ನಬೇಕೆಂದು ಅನಿಸದಿದ್ದಾಗ, ನಾವು ಖಿಚ್ಡಿ ತಿನ್ನಲು ಇಷ್ಟಪಡುತ್ತೇವೆ, ಆದರೆ ಪ್ರಧಾನಿ ಪ್ರತಿದಿನ ಖಿಚ್ಡಿ ತಿನ್ನಲು ಇಷ್ಟಪಡುತ್ತಾರೆ. ಖಿಚ್ಡಿಯೊಂದಿಗೆ ಮೊಸರು ಬೇಸರಿ ತಿನ್ನುವುದು ಅವರಿಗೆ ಬಹು ಪ್ರಿಯ.

ಗುಜರಾತಿ ಧೋಕ್ಲಾ:
ಗುಜರಾತಿ ಧೋಕ್ಲಾ ತುಂಬಾ ಲಘು ತಿಂಡಿ. ಇದು ರಸಭರಿತವಾಗಿದೆ ಮತ್ತು ಬೇಗನೆ ಜೀರ್ಣವಾಗುತ್ತದೆ. ಪ್ರಧಾನಿ ಧೋಕ್ಲಾ ಆಹಾರವನ್ನೂ ಇಷ್ಟಪಡುತ್ತಾರೆ.
 
ಖಾಂಡ್ವಿ ರೆಸಿಪಿ:
ಕಡಲೆ ಹಿಟ್ಟು ಮತ್ತು ಮಜ್ಜಿಗೆ ದ್ರಾವಣದೊಂದಿಗೆ ತಯಾರಿಸಿದ ಈ ಖಾದ್ಯ ತುಂಬಾ ರುಚಿಕರವಾಗಿರುತ್ತದೆ. ನಾವು ಇದನ್ನು ಸ್ವಾದಿಷ್ಟ ಉಪಹಾರವಾಗಿ ಸೇವಿಸಬಹುದು. ಇದರಲ್ಲಿ ನಾವು ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ಕೂಡ ಸೇರಿಸಬಹುದು.

ಮಾವಿನ ಚಟ್ನಿ:
ಪ್ರಧಾನ ಮಂತ್ರಿ ಆಹಾರದ ಜೊತೆಗೆ ಮಾವಿನ ಚಟ್ನಿ ತಿನ್ನಲು ಇಷ್ಟಪಡುತ್ತಾರೆ. ಮಾವಿನ ಚಟ್ನಿ ಗುಜರಾತಿ ಶೈಲಿಯಲ್ಲಿ ತಯಾರಿಸುವುದು ತುಂಬಾ ಸುಲಭ. ಕಚ್ಚಾ ಮಾವಿನಹಣ್ಣನ್ನು ರುಬ್ಬುವ ಮೂಲಕವೂ ನಾವು ಇದನ್ನು ತಯಾರಿಸಬಹುದು.

ಬಾದಾಮಿ ಮತ್ತು ಪಿಸ್ತಾ ಬರ್ಫಿ:
ಬಾದಾಮಿ ಮತ್ತು ಪಿಸ್ತಾ ಬರ್ಫಿ ಎಂದರೆ ಪ್ರಧಾನಿ ಮೋದಿಯವರಿಗೆ ಪಂಚಪ್ರಾಣವಂತೆ. ಇದು ತಿನ್ನಲು ಸ್ವಲ್ಪ ಸಿಹಿ, ಆದರೆ ತುಂಬಾ ಟೇಸ್ಟಿ.