ಬೆಂಗಳೂರು: ಹಸಿರು ಕೊತ್ತಂಬರಿ ಎಲೆಗಳು ಮತ್ತು ಬೀಜಗಳು ಎರಡೂ ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಆದರೆ ಕೊತ್ತಂಬರಿಯು ಆಹಾರದ ಸ್ವಾದ ಮತ್ತು ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅದರ ನೀರನ್ನು ಕುಡಿಯುವುದು ನಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ವಾಸ್ತವದಲ್ಲಿ, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಮೆಗ್ನೀಸಿಯಮ್ ಕೊತ್ತಂಬರಿ ನೀರಿನಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ ಮತ್ತು ಈ ಎಲ್ಲಾ ಅಂಶಗಳು ರೋಗಗಳನ್ನು ದೂರವಿರಿಸುವಲ್ಲಿ ಪ್ರಯೋಜನಕಾರಿಯಾಗಿವೆ. ಅಷ್ಟೇ ಅಲ್ಲ, ಇದು ಕೊಲೆಸ್ಟ್ರಾಲ್, ಅಧಿಕ ಬಿಪಿ ಸಮಸ್ಯೆಯನ್ನೂ ದೂರ ಮಾಡುತ್ತದೆ. ನೀವು ಸಹ ಈ ಸಮಸ್ಯೆಗಳಿಂದ ತೊಂದರೆಗೀಡಾಗಿದ್ದರೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಎಲೆಯ ನೀರನ್ನು ಕುಡಿಯಲು ಪ್ರಾರಂಭಿಸಿ. ದಿನಂಪ್ರತಿ ಈ ಕೆಲಸ ಮಾಡುವುದರಿಂದ , ನಿಮ್ಮ ಕೊಲೆಸ್ಟ್ರಾಲ್ ಮತ್ತು ಬಿಪಿ ನಿಯಂತ್ರಣದಲ್ಲಿರುತ್ತವೆ. ಅಲ್ಲದೆ, ಇದು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಬನ್ನಿ ತಿಳಿದುಕೊಳ್ಳೋಣ, (Health News In Kannada)


COMMERCIAL BREAK
SCROLL TO CONTINUE READING

ಕೊತ್ತಂಬರಿ ಎಲೆಯ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು
ನೀವು ತಲೆನೋವಿನ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ಖಂಡಿತವಾಗಿಯೂ ಹಸಿರು ಕೊತ್ತಂಬರಿ ಸೊಪ್ಪಿನ ನೀರನ್ನು ಕುಡಿಯಲು ಪ್ರಯತ್ನಿಸಿ. ಏಕೆಂದರೆ ಈ ಆರೋಗ್ಯಕರ ನೀರನ್ನು ಕುಡಿಯುವುದರಿಂದ ತಲೆನೋವು ಬಹಳಷ್ಟು ಕಡಿಮೆಯಾಗುತ್ತದೆ. ಇದಲ್ಲದೆ, ಇದು ಒತ್ತಡವನ್ನು ನಿವಾರಿಸಲು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಇದನ್ನು ಸೇವಿಸಿದರೆ ಇಂತಹ ಹಲವು ಸಮಸ್ಯೆಗಳಿಂದ ನೀವು ಪಾರಾಗಬಹುದು.


ಒತ್ತಡವನ್ನು ನಿವಾರಿಸುತ್ತದೆ
ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವವರಿಗೆ ಅಥವಾ ತುಂಬಾ ಕೋಪ ಇರುವ ಜನರಿಗೆ, ಕೊತ್ತಂಬರಿ ಎಲೆಯ ನೀರು ಅತ್ಯುತ್ತಮ ಟಾನಿಕ್ ಸಾಬೀತಾಗುತ್ತದೆ. ನಿಮ್ಮ ದೇಹ ಮತ್ತು ಮನಸ್ಸನ್ನು ತಂಪಾಗಿರಿಸಲು ಈ ನೈಸರ್ಗಿಕ ಪಾನೀಯವನ್ನು ನೀವು ಕುಡಿಯಬಹುದು. ಇದು ಅತ್ಯುತ್ತಮ ಶೀತಕಾರಕದಂತೆ ಕೆಲಸ ಮಾಡುತ್ತದೆ.


ಕಣ್ಣುಗಳ ಆರೋಗ್ಯಕ್ಕೆ ಉತ್ತಮ
ನಿಮ್ಮ ಕಣ್ಣುಗಳು ಆರೋಗ್ಯವಾಗಿರಲು ನೀವು ಬಯಸುತ್ತಿದ್ದರೆ ಕೊತ್ತಂಬರಿ ಎಲೆಯ ನೀರನ್ನು ಕುಡಿಯುವುದು ಪ್ರಯೋಜನಕಾರಿಯಾಗಿದೆ ಮತ್ತು ನಿಮ್ಮ ಕಣ್ಣಿನಲ್ಲಿರುವ ಕನ್ನಡಕವನ್ನು ತೆಗೆದುಹಾಕಲು ನೀವು ಬಯಸಿದರೆ ನೀವು ಈ ಆರೋಗ್ಯಕರ ಪಾನೀಯವನ್ನು ನಿತ್ಯ ಸೇವಿಸಿದರೆ ಅಧಿಕ ಲಾಭ ನೀಡುತ್ತದೆ. ಅರ್ಥಾತ್ ದೃಷ್ಟಿ ಸುಧಾರಣೆಗೆ ನೀವು ಈ ನೀರನ್ನು ಸೇವಿಸಬಹುದು. .


ಜೀರ್ಣಕ್ರಿಯೆಗೆ ಪ್ರಯೋಜನಕಾರಿ
ನೀವು ಜೀರ್ಣಕಾರಿ ಸಮಸ್ಯೆಗಳಿಂದ ತೊಂದರೆಗೊಳಗಾಗಿದ್ದರೆ, ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಇದು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಗ್ಯಾಸ್, ಅಜೀರ್ಣ, ಹೊಟ್ಟೆ ಉಬ್ಬರ ಮತ್ತು ಮಲಬದ್ಧತೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದಲ್ಲದೆ, ಇದು ವಿಟಮಿನ್ ಸಿ ಅನ್ನು ಹೊಂದಿರುತ್ತದೆ ಮತ್ತು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ-ಯಕೃತ್ತಿಗೆ ಸಂಬಂಧಿಸಿದ ಈ 5 ಲಕ್ಷಣಗಳು ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ!


ಇತರ ಪ್ರಯೋಜನಗಳು
ಇದಲ್ಲದೇ ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಇನ್ನೂ ಹಲವು ಪ್ರಯೋಜನಗಳಿವೆ. ಇದು ಅಸಿಡಿಟಿ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉಂಟಾಗುವ ಉರಿತ, ಥೈರಾಯ್ಡ್ ಸಂಬಂಧಿತ ಸಮಸ್ಯೆಗಳು, ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮಟ್ಟ, ರಕ್ತಸ್ರಾವ, ಉರಿಯೂತ, ದೇಹದಲ್ಲಿ ನೀರಿನ ಕೊರತೆ, ಅಲ್ಸರ್, ಫ್ಯಾಟಿ ಲಿವರ್, ಮಧುಮೇಹದಂತಹ ಗಂಭೀರ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ.


ಇದನ್ನೂ ಓದಿ-ಈ ಸಂಗತಿಗಳ ಸೇವನೆ ಹೃದಯದ ಆರೋಗ್ಯಕ್ಕೆ ಮಾರಕ!


ಇಲ್ಲಿದೆ ಅದನ್ನು ತಯಾರಿಸುವ ವಿಧಾನ
ಕೊತ್ತಂಬರಿ ಸೊಪ್ಪಿನ ನೀರನ್ನು ತಯಾರಿಸಲು, ನಿಮಗೆ ತಾಜಾ ಕೊತ್ತಂಬರಿ ಎಲೆಗಳು ಬೇಕಾಗುತ್ತವೆ. ಅವುಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ. ಇದರ ನಂತರ, ಅದನ್ನು ಪ್ಯಾನ್‌ಗೆ ಹಾಕಿ ಮತ್ತು ಅದನ್ನು ಕುದಿಯಲು ಗ್ಯಾಸ್‌ ಮೇಲೆ ಇರಿಸಿ ನಂತರ ಸುಮಾರು 7-10 ನಿಮಿಷಗಳ ಕಾಲ ಕುದಿಸಿ. ಇದರ ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಆರಲು ಬಿಡಿ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ