ಕೈ ಮತ್ತು ಕುತ್ತಿಗೆಯ ಟ್ಯಾನ್ ತೆಗೆಯಲು ನಿಂಬೆ ರಸಕ್ಕೆ ಈ ವಸ್ತುವನ್ನು ಬೆರೆಸಿ ಹಚ್ಚಿ! ಹತ್ತೇ ಸೆಕೆಂಡುಗಳಲ್ಲಿ ತ್ವಚೆ ಮತ್ತೆ ಹಾಲಿನಂಥ ಬಿಳಿಪು ಪಡೆಯುತ್ತದೆ !

ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನವಿಡೀ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ.ಆದರೆ ಕೆಲವು ಮನೆಮದ್ದುಗಳ ಸಹಾಯದಿಂದ ಕೈಗಳು ಮತ್ತು ಕುತ್ತಿಗೆಯಂತಹ ಭಾಗಗಳ ಕಪ್ಪು ಬಣ್ಣವನ್ನು  ಸುಲಭವಾಗಿ ತೆಗೆದು ಹಾಕಬಹುದು.

Written by - Ranjitha R K | Last Updated : Apr 24, 2025, 01:09 PM IST
  • ಬೇಸಿಗೆಯಲ್ಲಿ ನಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ.
  • ಕೈ ಮತ್ತು ಕುತ್ತಿಗೆಯ ಕಪ್ಪು ಕಲೆಗಳನ್ನು ಹೋಗಲಾಡಿಸುವುದು ಹೇಗೆ?
  • ಕಪ್ಪು ಬಣ್ಣವನ್ನು ತೆಗೆದುಹಾಕಲು ನಿಂಬೆ ಮತ್ತು ಅಡುಗೆ ಸೋಡಾ
ಕೈ ಮತ್ತು ಕುತ್ತಿಗೆಯ ಟ್ಯಾನ್ ತೆಗೆಯಲು ನಿಂಬೆ ರಸಕ್ಕೆ ಈ ವಸ್ತುವನ್ನು ಬೆರೆಸಿ ಹಚ್ಚಿ! ಹತ್ತೇ ಸೆಕೆಂಡುಗಳಲ್ಲಿ ತ್ವಚೆ ಮತ್ತೆ  ಹಾಲಿನಂಥ ಬಿಳಿಪು ಪಡೆಯುತ್ತದೆ !

ಬೆಂಗಳೂರು : ಬೇಸಿಗೆಯಲ್ಲಿ ನಮ್ಮ ಚರ್ಮದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಗಾಢವಾದ ಸೂರ್ಯನ ಬಿಸಿಲು, ಧೂಳು ಮತ್ತು ತಾಪಮಾನವು ಚರ್ಮಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಮುಖದಂತೆಯೇ, ಕೈಗಳು ಮತ್ತು ಕುತ್ತಿಗೆಯಂತಹ ಚರ್ಮದ ಭಾಗಗಳು ಸಹ ಬಿಸಿಲಿಗೆ ಹಾನಿಗೊಳಗಾಗಲು ಪ್ರಾರಂಭಿಸುತ್ತವೆ. ಆ ಭಾಗದ ಹೊಳಪು ಕಡಿಮೆಯಾಗುತ್ತದೆ. ಹಾಗಂತ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನವಿಡೀ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ.ಆದರೆ ಕೆಲವು ಮನೆಮದ್ದುಗಳ ಸಹಾಯದಿಂದ ಕೈಗಳು ಮತ್ತು ಕುತ್ತಿಗೆಯಂತಹ ಭಾಗಗಳ ಕಪ್ಪು ಬಣ್ಣವನ್ನು  ಸುಲಭವಾಗಿ ತೆಗೆದು ಹಾಕಬಹುದು. 

ಕೈ ಮತ್ತು ಕುತ್ತಿಗೆಯ ಕಪ್ಪು ಕಲೆಗಳನ್ನು ಹೋಗಲಾಡಿಸುವುದು ಹೇಗೆ? : 
ಸೂರ್ಯನ ಬಿಸಿಲು ಮತ್ತು ಇತರ ಕಾರಣಗಳಿಂದ ಕೈ ಮತ್ತು ಕುತ್ತಿಗೆಯ ಸುತ್ತು ಕಪ್ಪು ಬಣ್ಣ ಆವರಿಸಿದ್ದರೆ ಈ ವಿಶೇಷ ಮನೆಮದ್ದನ್ನು ನೀವೂ ಪ್ರಯತ್ನಿಸಬಹುದು. ನಿಂಬೆ ಮತ್ತು ಅಡಿಗೆ ಸೋಡಾದ ಸಹಾಯದಿಂದ ಚರ್ಮದ ಈ ಭಾಗಗಳಿಂದ ಕಪ್ಪು ಬಣ್ಣವನ್ನು ತೆಗೆದುಹಾಕಬಹುದು. ಇದರ ಸರಿಯಾದ ಮಿಶ್ರಣವನ್ನು ಸರಿಯಾದ ವಿಧಾನದಲ್ಲಿ ಬಳಸುವ ಮೂಲಕ ತ್ವಚೆಯ ಈ ಸಮಸ್ಯೆಯಿಂದ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. 

ಇದನ್ನೂ ಓದಿ : ಮಜ್ಜಿಗೆ ಜೊತೆ ಇದನ್ನು ಬೆರೆಸಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ.. ದಿನವಿಡೀ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಶುಗರ್‌ ಲೆವಲ್!

ಕಪ್ಪು ಬಣ್ಣವನ್ನು ತೆಗೆದುಹಾಕಲು ನಿಂಬೆ ಮತ್ತು ಅಡುಗೆ ಸೋಡಾ : 
ನಿಂಬೆ ಮತ್ತು ಅಡಿಗೆ ಸೋಡಾ ಎರಡರಲ್ಲೂ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್‌ಗಳಿವೆ.   ಅದರ ಸಹಾಯದಿಂದ ಚರ್ಮದ ಕಪ್ಪು ಬಣ್ಣವನ್ನು ತೆಗೆದುಹಾಕಬಹುದು.ಆದರೆ ನೆನಪಿರಲಿ, ಮುಖದ ಚರ್ಮ ಸೂಕ್ಷ್ಮವಾಗಿರುವ ಕಾರಣ ಈ ಮಿಶ್ರಣವನ್ನು ಮುಖದ ಮೇಲೆ ನೇರವಾಗಿ ಬಳಸಲಾಗುವುದಿಲ್ಲ. ಆದರೆ ಕೈಗಳು ಮತ್ತು ಕುತ್ತಿಗೆಯ ಭಾಗದಲ್ಲಿ ಇದನ್ನು ಬಳಸಬಹುದು.

ಮಿಶ್ರಣವನ್ನು ತಯಾರಿಸುವುದು ಹೇಗೆ ?: 
ನಿಂಬೆ ಮತ್ತು ಅಡುಗೆ ಸೋಡಾ ಮಿಶ್ರಣವನ್ನು ತಯಾರಿಸುವುದು ತುಂಬಾ ಸುಲಭ. ಮೊದಲಿಗೆ, ನಿಂಬೆಹಣ್ಣಿನ ರಸವನ್ನು ತೆಗೆದು ಅದನ್ನು ಒಂದು ಸ್ವಚ್ಛವಾದ ಗಾಜಿನ ಬಟ್ಟಲಿನಲ್ಲಿ ಹಾಕಿ. ನಂತರ, ನಿಂಬೆ ರಸದಲ್ಲಿ ಅರ್ಧ ಟೀ ಚಮಚ ಅಡಿಗೆ ಸೋಡಾ ಸೇರಿಸಿ ಮತ್ತು 5 ರಿಂದ 7 ನಿಮಿಷಗಳ ಕಾಲ ಒಂದು ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ. ಇಷ್ಟಾದ ಮೇಲೆ ಈ ಮಿಶ್ರಣ ಬಳಕೆಗೆ ಸಿದ್ಧವಾಗಿರುತ್ತದೆ.

ಇದನ್ನೂ ಓದಿ : ಗರ್ಭಾಶಯದ ಉರಿಯೂತ: ಲಕ್ಷಣಗಳು ಮತ್ತು ಗಮನಿಸಬೇಕಾದ ಸಂಗತಿಗಳು

ಈ ಮಿಶ್ರಣವನ್ನು ಬಳಸುವ ಸರಿಯಾದ ವಿಧಾನ : 
ಮಿಶ್ರಣ ಸಿದ್ಧವಾದ ನಂತರ, ಅದನ್ನು ಹತ್ತಿಯ ಸಹಾಯದಿಂದ ನಿಮ್ಮ ಕುತ್ತಿಗೆ ಮತ್ತು ಕೈಗಳ ಕಪ್ಪು ಭಾಗಗಳಿಗೆ ಹಚ್ಚಿ 5 ನಿಮಿಷಗಳ ಕಾಲ ಬಿಡಿ. ನಂತರ ಕೈಗಳಿಂದ ಮೃದುವಾಗಿ ಮಸಾಜ್ ಮಾಡಿ. 5 ನಿಮಿಷಗಳ ಕಾಲ ಮಸಾಜ್ ಮಾಡಿದ ನಂತರ,  ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬಹುದು. ನಂತರ ಚರ್ಮದ ಮೇಲೆ ತೆಂಗಿನ ಎಣ್ಣೆ ಅಥವಾ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಬಳಸಿ.

ಈ ಮಿಶ್ರಣ ಹಚ್ಚುವ ಮುನ್ನ ನೆನಪಿನಲ್ಲಿಡಬೇಕಾದ ಅಂಶ :  
ನಿಂಬೆ ಮತ್ತು ಅಡಿಗೆ ಸೋಡಾ ಚರ್ಮಕ್ಕೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದರೂ, ಆಮ್ಲೀಯವಾಗಿರುವುದರಿಂದ ಕೆಲವು ಜನರಲ್ಲಿ ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು. ನಿಮ್ಮ ಚರ್ಮದ ಸೂಕ್ಷ್ಮತೆಯನ್ನು ಪರೀಕ್ಷಿಸಲು ಮೊದಲು ಅದನ್ನು ಸಣ್ಣ ಪ್ರದೇಶಕ್ಕೆ ಹಚ್ಚಿ.ಉರಿಯಲು ಪ್ರಾರಂಭಿಸಿದರೆ, ತಕ್ಷಣ ಅದನ್ನು ತೊಳೆದು ಮಾಯಿಶ್ಚರೈಸರ್ ಹಚ್ಚಿ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News