Tomato juice to control bad cholesterol : ಕೊಲೆಸ್ಟ್ರಾಲ್ ಹೆಚ್ಚಾದಂತೆ ಹೃದಯದ ಸಮಸ್ಯೆ ಕೂಡಾ ಕಾಡುತ್ತದೆ.ಇದು ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ ಅಥವಾ ಪಾರ್ಶ್ವವಾಯುಗಳಂತಹ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ.ಕೊಲೆಸ್ಟ್ರಾಲ್ ರಕ್ತನಾಳಗಳ ಒಳ ಗೋಡೆಗಳಿಗೆ ಅಂಟಿಕೊಳ್ಳುತ್ತದೆ. ಇದರಿಂದಾಗಿ ದೇಹದಲ್ಲಿ ರಕ್ತ ಪರಿಚಲನೆಯು ನಿಧಾನಗೊಳ್ಳುತ್ತದೆ.ಅಷ್ಟೇ ಅಲ್ಲ,ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರಿಂದ ಚರ್ಮ, ಕಣ್ಣು ಮತ್ತು ಇತರ ಅಂಗಗಳಿಗೆ ಹಾನಿಯಾಗುತ್ತದೆ.ಆದ್ದರಿಂದ,ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಮುಖ್ಯ.


COMMERCIAL BREAK
SCROLL TO CONTINUE READING

ಕೊಲೆಸ್ಟ್ರಾಲ್ ಹೆಚ್ಚಾದರೆ ಎದೆ ನೋವು :
ಪ್ರಪಂಚದಾದ್ಯಂತ ಜನರ ಹೃದಯರಕ್ತನಾಳದ ಆರೋಗ್ಯವು ಕ್ಷೀಣಿಸುತ್ತಿದೆ.ಈಗ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತದಂತಹ ಸಮಸ್ಯೆಗಳ  ಅಪಾಯವು ಹೆಚ್ಚುತ್ತಿದೆ.  


ಇದನ್ನೂ ಓದಿ : ಕೆಂಪು ಬಣ್ಣದ ಈ ಸೊಪ್ಪು ಮಧುಮೇಹಿಗಳಿಗೆ ಅಮೃತವಿದ್ದಂತೆ: ಬ್ಲಡ್ ಶುಗರ್ ದಿನವಿಡೀ ನಾರ್ಮಲ್ ಆಗಿರುವಂತೆ ಮಾಡುತ್ತೆ!


ಈ ತರಕಾರಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ:
ದೇಹದಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸ್ವಚ್ಛಗೊಳಿಸಲು ಟೊಮೆಟೊ ಬಹಳ ಪ್ರಯೋಜನಕಾರಿ.ಕೆಲವು ಅಧ್ಯಯನಗಳ ಪ್ರಕಾರ, ಟೊಮೆಟೊಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ಖನಿಜಗಳಿವೆ.ಇದು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ.ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಟೊಮೆಟೊ ರಸ ಸೇವಿಸುವ ಮೂಲಕ ಕಡಿಮೆ ಮಾಡಬಹುದು.


ಸಂಶೋಧನೆ ಏನು ಹೇಳುತ್ತದೆ?:
ಕೆಲವು ಅಧ್ಯಯನಗಳ ಪ್ರಕಾರ,ಪ್ರತಿದಿನ ಒಂದು ಕಪ್ ಅಂದರೆ ಸುಮಾರು 240 ಮಿಲಿ ಟೊಮೆಟೊ ರಸವನ್ನು ಕುಡಿಯುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು 10 ಪ್ರತಿಶತದಷ್ಟು ಕಡಿಮೆ ಮಾಡಬಹುದು. 


ಇದನ್ನೂ ಓದಿ : ಒಗ್ಗರಣೆಗೆ ಬಳಸುವ ಈ ಬಿಳಿ ಪದಾರ್ಥದ ಚಟ್ನಿ ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರಹೋಗುವಂತೆ ಮಾಡುತ್ತೆ!


ಕೇವಲ ಒಂದು ಕಪ್ ಟೊಮೆಟೊ ರಸ ಸಾಕು : 
ಲೈಕೋಪೀನ್ ಎಂಬ ಶಕ್ತಿಶಾಲಿ ಆ್ಯಂಟಿಆಕ್ಸಿಡೆಂಟ್ ಟೊಮೇಟೊದಲ್ಲಿ ಕಂಡುಬರುತ್ತದೆ.ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.ವರದಿಯ ಪ್ರಕಾರ,ಒಂದು ದಿನದಲ್ಲಿ 25 mg ಗಿಂತ ಹೆಚ್ಚು ಲೈಕೋಪೀನ್ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು 10% ರಷ್ಟು ಕಡಿಮೆ ಮಾಡಬಹುದು.


ಟೊಮೆಟೊ ರಸ ವನ್ನು ಹೇಗೆ ಕುಡಿಯುವುದು :
ತಜ್ಞರ ಪ್ರಕಾರ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ತಾಜಾ ಟೊಮೆಟೊಗಳನ್ನು ಸ್ವಲ್ಪ ನೀರಿನೊಂದಿಗೆ ಚೆನಾಗಿ ಪೇಸ್ಟ್ ಮಾಡಿಕೊಳ್ಳಿ.ನಂತರ ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.ಇಲ್ಲಿ ಟೊಮೇಟೊ ಜ್ಯೂಸ್ ಕುಡಿಯುವಾಗ ಉಪ್ಪು, ಸಕ್ಕರೆ ಸೇರಿಸುವಂತಿಲ್ಲ ಎನ್ನುವುದು ನೆನಪಿರಲಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.