ಎಷ್ಟೇ ಪ್ರಯತ್ನಿಸಿದರೂ ತೂಕ ಕಡಿಮೆಯಾಗುತ್ತಿಲ್ಲವೇ? ಮಲಗುವ ಮುನ್ನ ಹೀಗೆ ಮಾಡಿ ಸಾಕು ತೆಳ್ಳಗಾಗುವುದು ಖಂಡಿತಾ
Weight lose Tips :ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ 5 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
Weight lose Tips : ಸ್ಥೂಲಕಾಯತೆಯು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ.ದೊಡ್ಡವರು, ಚಿಕ್ಕವರು ಎನ್ನದೆ ಈಗ ಈ ಕಾಯಿಲೆಯಂತೆ ಜನ ಬಳಲುವಂತಾಗಿದೆ. ನಾವು ಸೇವಿಸುವ ಆಹಾರ, ಅನಾರೋಗ್ಯಕರ ಜೀವನಶೈಲಿ ಮತ್ತು ವ್ಯಾಯಾಮದ ಕೊರತೆ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ.ಇದು ಅನೇಕ ಗಂಭೀರ ಕಾಯಿಲೆಗಳಿಗೆ ಎಡೆ ಮಾಡಿಕೊಡುತ್ತದೆ.ಬೊಜ್ಜು ಮಧುಮೇಹ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.ತೂಕ ಹೆಚ್ಚಾಗುವುದನ್ನು ನಿಯಂತ್ರಿಸಲು ಜನರು ಆಹಾರಕ್ರಮದಲ್ಲಿ ಬದಲಾವಣೆ ತರುತ್ತಾರೆ. ಜಿಮ್ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಾರೆ.ಆದರೆ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು.ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ 5 ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ.
ರಾತ್ರಿ 7 ಗಂಟೆಯ ಮೊದಲು ಭೋಜನ :
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಸಂಜೆ 7 ಗಂಟೆಯ ಮೊದಲು ರಾತ್ರಿಯ ಊಟವನ್ನು ಮುಗಿಸಿಕೊಳ್ಳಿ. ಸಂಜೆ 7 ಗಂಟೆಯ ನಂತರ ಏನನ್ನೂ ತಿನ್ನಬೇಡಿ. ರಾತ್ರಿ ಊಟ ಮತ್ತು ಮಲಗುವ ಸಮಯದ ನಡುವೆ ಸುಮಾರು 3 ಗಂಟೆಗಳ ಅಂತರವಿರಬೇಕು.ತಡರಾತ್ರಿ ತಿಂದರೆ ಸರಿಯಾಗಿ ಜೀರ್ಣವಾಗುವುದಿಲ್ಲ.ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ : ದಟ್ಟ, ಕಡು ಕಪ್ಪು, ಉದ್ದನೆಯ ಕೂದಲು ನಿಮ್ಮದಾಗಬೇಕಿದ್ದರೆ ಈ ನೀರನ್ನು ಬಳಸಿ ನೋಡಿ !
ಲಘು ಆಹಾರ ಸೇವಿಸಿ :
ರಾತ್ರಿ ವೇಳೆ ಸೇವಿಸುವ ಆಹಾರ ಯಾವಾಗಲೂ ಹಗುರವಾಗಿರಬೇಕು.ತೂಕ ಇಳಿಸಿಕೊಳ್ಳಲು ರಾತ್ರಿಯ ಊಟದಲ್ಲಿ ಪ್ರೋಟೀನ್ ಮತ್ತು ಫೈಬರ್ ಭರಿತ ಆಹಾರಗಳನ್ನು ಸೇರಿಸಿ.ರಾತ್ರಿ ಹಸಿರು ತರಕಾರಿಗಳು,ಸೂಪ್,ಸಲಾಡ್ ಮತ್ತು ದಾಲ್ ತಿನ್ನಬಹುದು.ತಡರಾತ್ರಿ ಹಸಿವೆಯಾದರೆ ಸೌತೆಕಾಯಿ ಅಥವಾ ಸೇಬನ್ನು ತಿನ್ನಬಹುದು.
ಚೆನ್ನಾಗಿ ನಿದ್ರೆ ಮಾಡಿ :
ನಾವು ಬೇಗನೆ ಮಲಗಿದಾಗ,ಮೆಲಟೋನಿನ್ ಎಂಬ ಹಾರ್ಮೋನ್ ನಮ್ಮ ದೇಹದಲ್ಲಿ ಕಂದು ಕೊಬ್ಬನ್ನು ಸೃಷ್ಟಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ರಾತ್ರಿಯ ನಿದ್ರೆಯು ದೇಹದಲ್ಲಿ ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.ಮಲಗುವ ಮುನ್ನ ಮೊಬೈಲ್ ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಬಳಸಬೇಡಿ.ತೂಕವನ್ನು ಕಳೆದುಕೊಳ್ಳಲು ಕನಿಷ್ಠ 7 ಗಂಟೆಗಳ ಉತ್ತಮ ನಿದ್ರೆ ಅಗತ್ಯ.
ಇದನ್ನೂ ಓದಿ : ನೆನಪಿರಲಿ ! ಕೇವಲ ಈರುಳ್ಳಿ ರಸ ಅಲ್ಲ, ಅದರ ಜೊತೆ ಈ ಎಣ್ಣೆ ಬೆರೆಸಿದರೆ ಮಾತ್ರ ಬಿಳಿ ಕೂದಲು ಕಪ್ಪಾಗುವುದು!
ಅರಿಶಿನ ಹಾಲು ಕುಡಿಯಿರಿ :
ಅರಿಶಿನ ಹಾಲು ತೂಕ ನಷ್ಟ ಮತ್ತು ಉತ್ತಮ ನಿದ್ರೆಗೆ ಸಹಕಾರಿಯಾಗಿದೆ. ಅರಿಶಿನವು ಥರ್ಮೋಜೆನಿಕ್ ಗುಣಗಳನ್ನು ಹೊಂದಿದ್ದು ಅದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ದರೊಂದಿಗೆ, ಚಯಾಪಚಯವನ್ನು ಸಹ ಹೆಚ್ಚಿಸುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಅರಿಶಿನ ಹಾಲನ್ನು ಕುಡಿಯಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ