ಈ ಎಲೆ ಕಿಡ್ನಿ ಸ್ಟೋನ್‌ಗೆ ರಾಮಬಾಣ... ಪ್ರತಿದಿನ ಜಗಿದು ತಿನ್ನಿ ಸಾಕು ಕರಗಿ ನೋವಿಲ್ಲದಂತೆ ಹೊರ‌ ಹೋಗುತ್ತೆ ಮೂತ್ರಪಿಂಡದ ಕಲ್ಲು!

Kidney Stone Home Remedy: ಕಿಡ್ನಿ ಸ್ಟೋನ್‌ ಸಮಸ್ಯೆ ಇರುವವರು ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು. 

Written by - Chetana Devarmani | Last Updated : Apr 2, 2025, 01:56 PM IST
    • ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಲು ಮನೆಮದ್ದು
    • ಕಿಡ್ನಿ ಸ್ಟೋನ್‌ ಸಮಸ್ಯೆ ಇರುವವರು ಏನು ತಿನ್ನಬೇಕು
    • ಮೂತ್ರಪಿಂಡದ ಕಲ್ಲುಗಳು ಆಗಲು ಕಾರಣ ಏನು
ಈ ಎಲೆ ಕಿಡ್ನಿ ಸ್ಟೋನ್‌ಗೆ ರಾಮಬಾಣ... ಪ್ರತಿದಿನ ಜಗಿದು ತಿನ್ನಿ ಸಾಕು ಕರಗಿ ನೋವಿಲ್ಲದಂತೆ ಹೊರ‌ ಹೋಗುತ್ತೆ ಮೂತ್ರಪಿಂಡದ ಕಲ್ಲು!
Kidney Stone Home Remedy

Kidney Stone Home Remedy: ಕಿಡ್ನಿ ಸ್ಟೋನ್‌ ಅಥವಾ ಮೂತ್ರಪಿಂಡದ ಕಲ್ಲುಗಳು ಸ್ಫಟಿಕದಂತಹ ಖನಿಜಗಳಾಗಿದ್ದು, ಅವು ಮೂತ್ರಪಿಂಡ ಅಥವಾ ಮೂತ್ರನಾಳದಲ್ಲಿ ಎಲ್ಲಿ ಬೇಕಾದರೂ ರೂಪುಗೊಳ್ಳಬಹುದು. ಕೆಲವು ಬಾರಿ ಈ ಕಿಡ್ನಿ ಸ್ಟೋನ್‌ ಯಾವುದೇ ರೀತಿಯ ತೊಂದರೆ ಉಂಟುಮಾಡದೆ ಮೂತ್ರದ ಮೂಲಕ ಸಣ್ಣ ಕಲ್ಲು ಹೊರಬರುತ್ತದೆ. ಆದರೆ ಕಿಡ್ನಿ ಸ್ಟೋನ್‌ 5 ಮಿ.ಮೀ ಗಿಂತ ಹೆಚ್ಚಿದ್ದರೆ, ಅದು ಮೂತ್ರನಾಳದಲ್ಲಿ ಅಡಚಣೆಯನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ನೋವು ಮತ್ತು ವಾಂತಿಯಂತಹ ಲಕ್ಷಣಗಳು ಕಂಡುಬರುತ್ತವೆ.  

Add Zee News as a Preferred Source

ಮೂತ್ರದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಮಟ್ಟಗಳು, ಬೊಜ್ಜುತನ, ಕೆಲವು ಆಹಾರಗಳು, ಕೆಲವು ಔಷಧಿಗಳು, ಕ್ಯಾಲ್ಸಿಯಂ ಪೂರಕಗಳು, ಸಂಧಿವಾತದ ಸಮಸ್ಯೆ ಮತ್ತು ಸಾಕಷ್ಟು ನೀರು ಕುಡಿಯದಿರುವುದು ಕಿಡ್ನಿ ಸ್ಟೋನ್‌ ಆಗಲು ಕಾರಣವಾಗಬಹುದು. ಮೂತ್ರದಲ್ಲಿರುವ ಯೂರಿಕ್ ಆಮ್ಲ, ರಂಜಕ, ಕ್ಯಾಲ್ಸಿಯಂ ಮತ್ತು ಆಕ್ಸಲಿಕ್ ಆಮ್ಲ ಎಂಬ ರಾಸಾಯನಿಕಗಳು ಸೇರಿಕೊಂಡು ಕಿಡ್ನಿ ಸ್ಟೋನ್‌ ರೂಪಿಸುತ್ತವೆ.

ಅನಿಯಮಿತ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ, ಇತ್ತೀಚಿನ ದಿನಗಳಲ್ಲಿ ಜನರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಆರೋಗ್ಯ ಸಮಸ್ಯೆಗಳಲ್ಲಿ ಒಂದು ಮೂತ್ರಪಿಂಡದ ಕಲ್ಲುಗಳ ರಚನೆ. ಮೂತ್ರಪಿಂಡದ ಕಲ್ಲಿನ ಸಮಸ್ಯೆಯನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಉಂಟಾಗುವ ಅಸಹನೀಯ ಹೊಟ್ಟೆ ನೋವನ್ನು ಎಲ್ಲರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ಮೂತ್ರಕೋಶದ ಸಮಸ್ಯೆಗಳು ಸೇರಿದಂತೆ ಇತರ ಹಲವು ಕಾಯಿಲೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಈ ಹಣ್ಣಿನ ಸಿಪ್ಪೆ ಮಧುಮೇಹಕ್ಕೆ ರಾಮಬಾಣ, ಜೊತೆಗೆ ಈ 3 ರೋಗಗಳು ಸಹ ಮಾಯವಾಗುತ್ತವೆ..!

ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಪರಿಹಾರ ಪಡೆಯಲು, ಜನರು ಅನೇಕ ರೀತಿಯ ಔಷಧಿಗಳು, ಆಯುರ್ವೇದ ಪರಿಹಾರಗಳು ಮತ್ತು ಚುಚ್ಚುಮದ್ದನ್ನು ಬಳಸುತ್ತಾರೆ. ಆದರೆ ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಕೆಲವು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು. ಮನೆಮದ್ದುಗಳ ವಿಶೇಷತೆಯೆಂದರೆ ಅವು ಬಹಳ ಕಡಿಮೆ ಅಡ್ಡಪರಿಣಾಮಗಳನ್ನು ಹೊಂದಿರುತ್ತವೆ. ನೀವೂ ಸಹ ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದರೆ ತುಳಸಿ ರಸವನ್ನು ಸೇವಿಸಬಹುದು.

ತುಳಸಿ ಎಲೆಯಲ್ಲಿನ ಪೋಷಕಾಂಶಗಳು

ತುಳಸಿ ರಸದಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಸಿ, ಕ್ಯಾಲ್ಸಿಯಂ, ಸತು, ಕಬ್ಬಿಣ ಮತ್ತು ಕ್ಲೋರೊಫಿಲ್ ಕಂಡುಬರುತ್ತವೆ. ಇದಲ್ಲದೆ, ತುಳಸಿಯು ಸಿಟ್ರಿಕ್ ಮತ್ತು ಟಾರ್ಟಾರಿಕ್‌ನ ಉತ್ತಮ ಮೂಲವಾಗಿದೆ. ಗಾಯಗಳು, ಊತ, ಶೀತ, ಕೆಮ್ಮು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಪಡೆಯಲು ತುಳಸಿ ಎಲೆಗಳನ್ನು ಭಾರತೀಯ ಮನೆಗಳಲ್ಲಿ ಶತಮಾನಗಳಿಂದ ಬಳಸಲಾಗುತ್ತಿದೆ.

ಮೂತ್ರಪಿಂಡದ ಕಲ್ಲುಗಳಿಗೆ ತುಳಸಿ ರಸ

ತುಳಸಿ ರಸದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಅಂಶಗಳು ಕಂಡುಬರುತ್ತವೆ, ಇದು ಮೂತ್ರಪಿಂಡಗಳನ್ನು ದೀರ್ಘಕಾಲದವರೆಗೆ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ತುಳಸಿ ಎಲೆಯ ರಸದಲ್ಲಿ ಕಂಡುಬರುವ ಕೆಲವು ಸಂಯುಕ್ತಗಳು ದೇಹದಲ್ಲಿ ಯೂರಿಕ್ ಆಮ್ಲವನ್ನು ಸ್ಥಿರಗೊಳಿಸುತ್ತವೆ, ಇದು ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. ತುಳಸಿಯ ಪೋಷಕಾಂಶಗಳು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸುವ ಕೆಲಸ ಮಾಡುತ್ತವೆ.  

ಇದನ್ನೂ ಓದಿ: ಆಪರೇಷನ್‌ ಬೇಡವೇ ಬೇಡ.. ಈ ರಸಭರಿತ ಹಣ್ಣು ತಿಂದ್ರೆ ಸಾಕು ನೋವಿಲ್ಲದೇ ಹೊರಹೋಗುವುದು ಕಿಡ್ನಿ ಸ್ಟೋನ್!‌

ಕಿಡ್ನಿ ಸ್ಟೋನ್‌ ಕರಗಿಸಲು ತುಳಸಿ ಹೇಗೆ ಸೇವಿಸುವುದು?

ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಿಂದ ಪರಿಹಾರ ಪಡೆಯಲು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ತುಳಸಿ ಎಲೆಗಳನ್ನು ಅಗೆದು ತಿನ್ನಬಹುದು. ತುಳಸಿ ರಸವನ್ನು ಸೇವಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತುಳಸಿ ರಸದ ರುಚಿ ಸ್ವಲ್ಪ ಒಗರು, ಆದ್ದರಿಂದ ಅನೇಕ ಬಾರಿ ಜನರು ಅದರ ರುಚಿಯನ್ನು ಇಷ್ಟಪಡುವುದಿಲ್ಲ. ಪ್ರತಿದಿನ ತುಳಸಿ ಎಲೆಗಳಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು. ತುಳಸಿ ಎಲೆಗಳ ಕಷಾಯವನ್ನು ಸಹ ಮಾಡಿ ಕುಡಿಯಬಹುದು.

ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ತುಳಸಿಯನ್ನು ಬಳಸುವುದು ಬಹಳ ಜನಪ್ರಿಯ ಮನೆಮದ್ದಾಗಿದೆ. ಇದಕ್ಕಾಗಿ ಪ್ರತಿದಿನ 5-7 ತುಳಸಿ ಎಲೆಗಳನ್ನು ಅಗಿದು ತಿನ್ನಿರಿ. ಇದು ಅಸಿಟಿಕ್ ಆಮ್ಲ ಮತ್ತು ಇತರ ಸಾರಭೂತ ತೈಲಗಳನ್ನು ಹೊಂದಿದ್ದು ಅದು ಕಲ್ಲುಗಳನ್ನು ಒಡೆಯುತ್ತದೆ ಮತ್ತು ಮೂತ್ರದ ಮೂಲಕ ಹೊರಹಾಕುತ್ತದೆ. ಇದು ನೋವು ನಿವಾರಕವಾಗಿಯೂ ಕೆಲಸ ಮಾಡುತ್ತದೆ.  

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News