ಬೆಂಗಳೂರು : ಯಾರಿಗೇ ಆದರೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಬೇಕಾದರೆ, ಅವರ ದೇಹದಿಂದ ಕೆಲವು ಹನಿ ರಕ್ತವನ್ನು ತೆಗೆಯಬೇಕಾಗುತ್ತದೆ. ಯಾಕೆಂದರೆ ರಕ್ತವನ್ನು ಹೊರ ತೆಗೆಯದೆ ರಕ್ತವನ್ನು ಪರೀಕ್ಷಿಸುವುದು ಸಾಧ್ಯವಾಗುವುದಿಲ್ಲ, ಬ್ಲಡ್ ಶುಗರ್ ಪರೀಕ್ಷಿಸುವುದೂ ಸಾಧ್ಯವಾಗುವುದಿಲ್ಲ. ಆದರೆ ಈಗ ಬ್ಲಡ್ ಟೆಸ್ಟ್ ಮಾಡಿಸದೆಯೇ ಬ್ಲಡ್ ಶುಗರ್ ಎಷ್ಟಿದೆ ಎನ್ನುವುದನ್ನು ಕಂಡು ಹಿಡಿಯಬಹುದು.
ಇದೀಗ ಬ್ಲಡ್ ಶುಗರ್ ಪತ್ತೆ ಹಚ್ಚುವ ಸಾಧನವನ್ನು ಕಂಡುಹಿಡಿಯಲಾಗಿದೆ. ಈ ಸಾಧನದಲ್ಲಿ ಬ್ಲಡ್ ಶುಗರ್ ಅನ್ನು ಪತ್ತೆ ಹಚ್ಚಲು, ಬ್ಲಡ್ ಟೆಸ್ಟ್ ಮಾಡುವ ಅಗತ್ಯವಿಲ್ಲ, ಬದಲಿಗೆ ಕೇವಲ ಉಸಿರಿನ ಮೂಲಕ ಸಕ್ಕರೆ ಮಟ್ಟವನ್ನು ಪರಿಶೀಲಿಸಬಹುದಾಗಿದೆ. ಹೌದು, MPಯ ವಿದ್ಯಾರ್ಥಿನಿಯೊಬ್ಬರು ಉಸಿರಿನ ಮೂಲಕವೇ ಸಕ್ಕರೆ ಮಟ್ಟವನ್ನು ಪರೀಕ್ಷಿಸಬಹುದಾದ ಸಾಧನವನ್ನು ತಯಾರಿಸಿದ್ದಾರೆ. ಈ ಸಾಧನಕ್ಕೆ ಶುಗರ್ ಬ್ರೀತ್ ಅಸಿಟೋನ್ 3.0' ಎನ್ನುವ ಹೆಸರಿಡಲಾಗಿದೆ.
ಇದನ್ನೂ ಓದಿ : ಅಧಿಕ ಯೂರಿಕ್ ಆಮ್ಲದಿಂದ ಬಳಲುತ್ತಿದ್ರೆ ಖಾಲಿ ಹೊಟ್ಟೆಯಲ್ಲಿ ಈ ಆಹಾರ ಸೇವಿಸಿ; ಕೀಲು ನೋವಿನಿಂದ ಪರಿಹಾರ ಸಿಗುತ್ತೆ!
ಸಕ್ಕರೆ ಮಟ್ಟವನ್ನು ಪರಿಶೀಲಿಸಲಾಗುತ್ತದೆ :
ಪ್ರಸ್ತುತ, 'ಶ್ರೀಜನ್-2025' ಕಾರ್ಯಕ್ರಮವು ಭೋಪಾಲ್‌ನ ರಾಜೀವ್ ಗಾಂಧಿ ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದು, ಇದರಲ್ಲಿ ಸುಮಾರು 1627 ನಾವೀನ್ಯತೆಗಳಿಂದ ಆಯ್ಕೆಯಾದ ಟಾಪ್-150 ನವೀನ ಯೋಜನೆಗಳನ್ನು ಪ್ರದರ್ಶಿಸಲಾಗಿದೆ. ವಿದ್ಯಾರ್ಥಿಯು ವಿನ್ಯಾಸಗೊಳಿಸಿದ ಶುಗರ್ ಬ್ರೀತ್ ಅಸಿಟೋನ್ 3.0 ಸಾಧನವನ್ನು ಇಲ್ಲಿ ಇರಿಸಲಾಗಿದ್ದು, ಇದು ಸಕ್ಕರೆ ಮಟ್ಟವನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಅಭಿಲಾಷಾ ಎಂಬ ವಿದ್ಯಾರ್ಥಿ ರಚಿಸಿದ ಈ ಸಾಧನವು ವಿಶಿಷ್ಟವಾಗಿದ್ದು, ಭವಿಷ್ಯದಲ್ಲಿ ರೋಗಿಗಳಿಗೆ ಉಪಯುಕ್ತವಾಗಬಹುದು.
ಈ ಸಾಧನ ಹೇಗೆ ಕೆಲಸ ಮಾಡುತ್ತದೆ? :
ಈ ಸಾಧನವು ನಮ್ಮ ಉಸಿರಾಟದಲ್ಲಿರುವ ಕೀಟೋನ್ ದೇಹವನ್ನು ವಿಶ್ಲೇಷಿಸುತ್ತದೆ. ಇದು ರೋಗಿಯ ದೇಹದಲ್ಲಿನ ಸಕ್ಕರೆಯ ಹೆಚ್ಚಿದ ಮಟ್ಟವನ್ನು ತೋರಿಸುತ್ತದೆ. ರೋಗಿಯು ಈ ಸಾಧನದೊಳಗೆ ಊದಿದಾಗ, ಅದು ಮೂರು ವರ್ಗಗಳಲ್ಲಿ ರೀಡಿಂಗ್ ತೋರಿಸುತ್ತದೆ. ಇದರಲ್ಲಿ ಲೋ ಎಂದರೆ ಕಡಿಮೆ ಸಕ್ಕರೆ ಮಟ್ಟ. ಮೋಡರೇಟ್ ಎಂದರೆ 'ಮಧ್ಯಮ' ಹೈ ಎಂದರೆ ಅಧಿಕ ರಕ್ತದ ಸಕ್ಕರೆ ಎನ್ನುವುದನ್ನು ತೋರಿಸುತ್ತದೆ. ಹೀಗಾಗಿ ಇನ್ನು ಮುಂದೆ ಸೂಜಿ ಚುಚ್ಚಿಸಿಕೊಂಡು ಬ್ಲಡ್ ಟೆಸ್ಟ್ ಮಾಡಿಸುವ ಅಗತ್ಯವಿಲ್ಲ. ಬದಲಿಗೆ ಈ ಸಾಧನದ ಒಳಗೆ ಊದುವ ಮೂಲಕವೇ ಬ್ಲಡ್ ಶುಗರ್ ಎಷ್ಟಿದೆ ಎನ್ನುವ ನಿಖರ ಮಾಹಿತಿ ತಿಳಿದುಕೊಳ್ಳಬಹುದು.
ಇದನ್ನೂ ಓದಿ : ಬೆಳಗ್ಗೆ ಎದ್ದ ತಕ್ಷಣ ಈ 5 ಲಕ್ಷಣ ಕಂಡುಬಂದ್ರೆ ಎಚ್ಚರ! ಇದು ಕಡಿಮೆ ಬಿಪಿಯ ಸಂಕೇತವಾಗಿರಬಹುದು!
ಭಾರತ ಸರ್ಕಾರದಿಂದ ಪೇಟೆಂಟ್ :
ಅಭಿಲಾಷಾ ಅವರ ಆವಿಷ್ಕಾರ 'ಶುಗರ್ ಬ್ರೀತ್ ಅಸಿಟೋನ್ 3.0 ಡಿವೈಸ್' ಭಾರತ ಸರ್ಕಾರದಿಂದ ಪೇಟೆಂಟ್ ಪಡೆದುಕೊಂಡಿದೆ. ಭೋಪಾಲ್‌ಗಿಂತ ಮುಂಚೆಯೇ, ದೆಹಲಿಯ ರಾಷ್ಟ್ರೀಯ ಯುವ ದಿನದಂದು ಇದನ್ನು ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿತ್ತು. ಅಲ್ಲಿ ಇದನ್ನು ಸರ್ಕಾರ ಮತ್ತು ತಾಂತ್ರಿಕ ತಜ್ಞರು ಗುರುತಿಸಿದ್ದಾರೆ. ಈ ತಂತ್ರಜ್ಞಾನವು ಬಾಡಿ ಡಿಟೆಕ್ಷನ್ ಪ್ರಯೋಗಗಳಲ್ಲಿ ಪಾಸ್ ಆಗಿದ್ದು, ವಿಶ್ವಾಸಾರ್ಹ ಸಾಧನವಾಗಿ ಹೊರ ಹೊಮ್ಮಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.