)
Uric Acid Treatment: ಅನಾರೋಗ್ಯಕರ ಆಹಾರ ಪದ್ಧತಿ, ಆಧುನಿಕ ಜೀವನಶೈಲಿಯಿಂದಾಗಿ ಬಹುತೇಕ ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಯೂರಿಕ್ ಆಸಿಡ್ ಕೂಡ ಒಂದು. ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ ಮೂಳೆ ಮತ್ತು ಕೀಲುಗಳಲ್ಲಿ ಊತ, ಅತೀವವಾದ ನೋವು ಕಾಣಿಸಿಕೊಳ್ಳುತ್ತದೆ. ವೈದ್ಯಕೀಯ ಪರಿಭಾಷೆಯಲ್ಲಿ ಇಂನು 'ಗೌಟ್' ಎಂತಲೂ ಕರೆಯಲಾಗುತ್ತದೆ. ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ದುಬಾರಿ ಔಷಧಿಗಳು ಲಭ್ಯವಿವೆ. ಆದರೆ, ನಿಮ್ಮ ಮನೆಯಲ್ಲಿಯೇ ಬೆಳೆಯ ಬಹುದಾದ, ಅಂಗಡಿಗಳಲ್ಲಿ ಕೇವಲ 2 ರೂ.ಗೆ ಖರೀದಿಸಬಹುದಾದ ಎಲೆ ಸಹಾಯದಿಂದ ಯೂರಿಕ್ ಆಸಿಡ್ ಸಮಸ್ಯೆಯಿಂದ ನೈಸರ್ಗಿಕ ಪರಿಹಾರ ಪಡೆಯಬಹುದು.
ಯೂರಿಕ್ ಆಸಿಡ್ ಸಮಸ್ಯೆಗೆ ಅಥವಾ ಗೌಟ್ ಸಮಸ್ಯೆಗೆ ನೈಸರ್ಗಿಕ ಪರಿಹಾರ ನೀಡಬಲ್ಲ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಎಲೆ ಬೇರಾವುದೂ ಅಲ್ಲ 'ವೀಳ್ಯದೆಲೆ'. ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಗುಣಗಳಿಂದ ತುಂಬಿರುವ ವೀಳ್ಯದೆಲೆ ಕೀಲುಗಳಲ್ಲಿ ಶೇಖರಣೆಯಾಗಿರುವ ಯೂರಿಕ್ ಆಮ್ಲವನ್ನು ಮಂಜಿನಂತೆ ಕರಗಿಸುತ್ತದೆ. ಹಾಗಿದ್ದರೆ, ದೇಹದಲ್ಲಿ ಶೇಖರಣೆ ಆಗಿರುವ ಯೂರಿಕ್ ಆಮ್ಲ ಕರಗಿಸಲು ವೀಳ್ಯದೆಲೆ ಹೇಗೆ ಸಹಾಯಕ, ಇದನ್ನು ಹೇಗೆ ಬಳಸಬೇಕು ಎಂಬಿತ್ಯಾದಿ ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ವೀಳ್ಯದೆಲೆ ಸೇವನೆಯ ಪ್ರಯೋಜನಗಳು:
ಆಯುರ್ವೇದದಲ್ಲಿ, ಶತಮಾನಗಳಿಂದ ಅನೇಕ ರೋಗಗಳನ್ನು ತಡೆಗಟ್ಟಲು ವೀಳ್ಯದ ಎಲೆಗಳನ್ನು ಬಳಸಲಾಗುತ್ತಿದೆ.ನಿಯಮಿತವಾಗಿ ವೀಳ್ಯದೆಲೆ ಸೇವಿಸುವುದರಿಂದ ದೇಹವು ಡಿಟಾಕ್ಸ್ ಆಗುತ್ತದೆ. ಕಿಡ್ನಿ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಶಕ್ತಿ ಹೊಂದಿರುವ ವೀಳ್ಯದ ಎಲೆಗಳು ಕೀಲುಗಳಲ್ಲಿ ಹರಳುಗಟ್ಟಿರುವ ಯೂರಿಕ್ ಆಮ್ಲವನ್ನು ಕರಗಿಸಿ ಮೂತ್ರದ ಮೂಲಕ ತ್ಯಾಜ್ಯವನ್ನು ಹೊರಹಾಕುತ್ತದೆ. ಇದು ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕ್ರಮೇಣ ಕಡಿಮೆ ಮಾಡುವುದರಿಂದ ಕೀಲುಗಳ ನೋವು ಕಡಿಮೆಯಾಗುತ್ತದೆ.
ಯೂರಿಕ್ ಆಮ್ಲವನ್ನು ನ್ಯಾಚುರಲ್ ಆಗಿ ನಿಯಂತ್ರಿಸಲು ವೀಳ್ಯದೆಲೆಯನ್ನು ಹೇಗೆ ಬಳಸಬೇಕು?
ನೀವು ನೈಸರ್ಗಿಕವಾಗಿ ಯೂರಿಕ್ ಆಸಿಡ್ ಕಡಿಮೆ ಮಾಡಲು ಬಯಸಿದರೆ ಪ್ರತಿದಿನ ಊಟದ ನಂತರ ಒಂದು ವೀಳ್ಯದೆಲೆಯನ್ನು ಚೆನ್ನಾಗಿ ಜಗಿದು ತಿನ್ನುವುದನ್ನು ರೂಢಿಸಿಕೊಳ್ಳಿ.ನೆನಪಿಡಿ: ಉತ್ತಮ ಮತ್ತ ತ್ವರಿತ ಫಲಿತಾಂಶಕ್ಕಾಗಿ ವೀಳ್ಯದೆಲೆಯಲ್ಲಿ ಸುಣ್ಣ, ಬೆಲ್ಲ, ಕೊಬ್ಬರಿ, ಕಲ್ಲುಸಕ್ಕರೆ ಏನೂ ಹಾಕದೆ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.