ತಲೆ ನೋವು, ಅಲರ್ಜಿ, ಅಜೀರ್ಣ ಇಂತಹ ಸಮಸ್ಯೆಗಳನ್ನು ಮನೆ ಮದ್ದು ಬಳಸಿ ನಿವಾರಿಸಿಕೊಳ್ಳಬಹುದು. ಕೆಲವೊಮ್ಮೆ ಮನೆಯಲ್ಲಿ ಅಡುಗೆಗೆ ಬಳಸುವ ತರಕಾರಿ ಹಾಗೂ ಇತರೆ ಪದಾರ್ಥಗಳಿಂದಲೇ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಲ್ಲದೆ, ಕೆಲವು ಸಮಸ್ಯೆಗಳಿಗೆ ಮನೆಯಲ್ಲಿಯೇ ಔಷಧಿ ತಯಾರಿಸಿಕೊಳ್ಳಬಹುದು. ಇದೇ ಮನೆಮದ್ದು. 


COMMERCIAL BREAK
SCROLL TO CONTINUE READING

ಈ ಸಸ್ಯದಲ್ಲಿ ಸಿಟ್ರೊನೆಲ್ಲಾ ಎಂಬ ಸುಗಂಧ ದ್ರವ್ಯ ಯಥೇಚ್ಛವಾಗಿರುವುದರಿಂದ ಇದು ನೆಗಡಿ, ಕೆಮ್ಮು, ತಲೆ ನೋವು, ಜ್ವರ ಮೊದಲಾದ ಆರೋಗ್ಯ ಸಮಸ್ಯೆಗಳಿಂದ ನರಳುವವರಿಗೆ ಉತ್ತಮ ಔಷದ. ಇದರಲ್ಲಿ ಟರ್‍ಸೀನ್ಸ್, ಜೀವ ಸತ್ವ-ಸಿ ಮತ್ತು ಎ, ಸುಣ್ಣ, ಮೆಗ್ನಿಷಿಯಂ, ಕೆಟೆ ಚಿನ್, ಲಿನೋಲಿಯಿರ್, ಆಮ್ಲ ಇರುವುದರಿಂದ ರೋಗ ನಿರೋಧಕ ಶಕ್ತಿ ಹೊಂದಿವೆ. ಇದನ್ನು ಹಾಗೆಯೇ ತಿನ್ನಬಹುದು ಅಥವಾ ಪಲ್ಯ ಮಾಡಿಯೂ ತಿನ್ನಬಹುದು. ಸಸ್ಯಶಾಸ್ತ್ರದಲ್ಲಿ ಮೆಲಿಸ್ಸ ಅಫಿಷಿನಾಲಿಕ್ ಎಂದು ಕರೆಯಲ್ಪಡುವ ಲೆಮನ್ ಬಾಮ್ ಹಲವು ಕಾಯಿಲೆಗಳಿಗೆ ದಿವ್ಯೌಷಧ.


ಲೆಮನ್ ಬಾಮ್ ಬಳಸುವುದರ ಉಪಯೋಗಗಳು


* ಪ್ರತಿನಿತ್ಯ ಲೆಮನ್ ಬಾಮ್ ಎಳೆಗಳ ಸೇವನೆಯಿಂದ ಹೃದಯದ ರಕ್ತನಾಳಗಳನ್ನು ಬಲಗೊಂಡು 
ರಕ್ತಚಲನೆಯನ್ನು ಸರಾಗವಾಗುತ್ತದೆ. 
* ಲೆಮನ್ ಬಾಮ್ ಎಲೆಯನ್ನು ಜಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ. 
* ಪ್ರತಿನಿತ್ಯ ಬಿಸಿ ನೀರಿಗೆ ಲೆಮನ್ ಬಾಮ್ ಎಲೆ ಹಾಕಿ ಕುಡಿಸಿ ಚಹಾ ತಯಾರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗಿ, ಮಲಬದ್ಧತೆ ನಿವಾರಣೆಯಾಗುತ್ತದೆ. 
* ತಲೆನೋವು ಮತ್ತು ದೀರ್ಘಕಾಲದಿಂದ ಬಳಲುತ್ತಿರುವ ಮೈಗ್ರೇನ್ ಗುಣವಾಗುತ್ತದೆ.
* ಮುಖದಲ್ಲಿ ಮೊಡವೆಗಳನ್ನು ಗುಣಪಡಿಸುತ್ತದೆ.
* ಪ್ರತಿನಿತ್ಯ ಲೆಮೆನ್ ಬಾಮ್ ಚಹಾ ಕುಡಿದರೆ ಮನಸಿನ ಉದ್ವೇಗ ಕಡಿಮೆಯಾಗುತ್ತದೆ. ಅಲ್ಲದೆ,  ಖಿನ್ನತೆಗೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ.
* ಲೆಮನ್ ಬಾಮ್ ಎಳೆಯನ್ನು ಅರೆದು ಆಕಸ್ಮಿಕವಾಗಿ ಆಗುವ ಗಾಯ, ಜೇನು ಕಡಿತ ಮೊದಲಾದ ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗ ಗುಣವಾಗುತ್ತದೆ. 
* ದೇಹದ ದುರ್ಗಂಧ ನಿವಾರಿಸುತ್ತದೆ. 
* ದಿನ ನಿತ್ಯ ಲೆಮೆನ್ ಬಾಮ್ ಚಹಾ ಸೇವನೆಯಿಂದ ಫಿಟ್‌ ನೆಸ್ ಕಾಪಾಡಿಕೊಂಡು ಆರೋಗ್ಯಕರವಾಗಿರಲು ಸಾಧ್ಯವಾಗುತ್ತದೆ.