ವಿಟಮಿನ್ ಸಿ ಕೊರತೆಯಾದರೆ ದೇಹದ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ವಿಪರೀತ ನೋವು !

Vitamin C Deficiency Symptom: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ದೇಹದಲ್ಲಿನ ಇತರ ಕೆಲವು ಪ್ರಕ್ರಿಯೆಗಳಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ದೇಹದಲ್ಲಿ ವಿಟಮಿನ್ ಸಿ ಕೊರತೆಯು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.  

Written by - Ranjitha R K | Last Updated : Mar 3, 2025, 06:24 PM IST
  • ದೇಹವು ಆರೋಗ್ಯಕ್ಕೆ ಅಗತ್ಯವಾದ ಕೆಲವು ಪೋಷಕಾಂಶಗಳನ್ನು ಉತ್ಪಾದಿಸುತ್ತದೆ
  • ಆಹಾರದಿಂದ ಪಡೆದ ಪೋಷಕಾಂಶಗಳನ್ನು ದೇಹದಲ್ಲಿ ಸಂಗ್ರಹಿಸುತ್ತದೆ.
  • ವಿಟಮಿನ್ ಸಿ ದೇಹದಲ್ಲಿ ಶೇಖರಿಸಿಡಲು ಸಾಧ್ಯವಾಗದ ಪೋಷಕಾಂಶವಾಗಿದೆ.
ವಿಟಮಿನ್ ಸಿ ಕೊರತೆಯಾದರೆ ದೇಹದ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ವಿಪರೀತ ನೋವು !

Vitamin C Deficiency Symptom : ನಮ್ಮ ದೇಹವು ಆರೋಗ್ಯಕ್ಕೆ ಅಗತ್ಯವಾದ ಕೆಲವು ಪೋಷಕಾಂಶಗಳನ್ನು ಉತ್ಪಾದಿಸುತ್ತದೆ.ಅದೇ ಸಮಯದಲ್ಲಿ, ಆಹಾರದಿಂದ ಪಡೆದ ಪೋಷಕಾಂಶಗಳನ್ನು ದೇಹದಲ್ಲಿ ಸಂಗ್ರಹಿಸುತ್ತದೆ.  ಆದರೆ, ವಿಟಮಿನ್ ಸಿ ದೇಹದಲ್ಲಿ ಶೇಖರಿಸಿಡಲು ಸಾಧ್ಯವಾಗದ ಪೋಷಕಾಂಶವಾಗಿದೆ. ಅದಕ್ಕಾಗಿಯೇ, ಉತ್ತಮ ಆಹಾರವನ್ನು ಸೇವಿಸಿದರೂ, ನಿಮ್ಮ ದೇಹದಲ್ಲಿ ವಿಟಮಿನ್ ಸಿ ಕೊರತೆಯಿರಬಹುದು. ದೇಹದಲ್ಲಿ ವಿಟಮಿನ್ ಸಿ ಕೊರತೆಯಿದೆ ಎನ್ನುವುದು ಅಷ್ಟು ಸುಲಭದಲ್ಲಿ ಯಾರಿಗೂ ತಿಳಿದು ಬರುವುದಿಲ್ಲ. 

Add Zee News as a Preferred Source

ವಿಟಮಿನ್ ಸಿ ಕೊರತೆಯ ಪ್ರಮುಖ ಲಕ್ಷಣಗಳು : 
ರಕ್ತಹೀನತೆ:

ವಿಟಮಿನ್ ಸಿ ಕೊರತೆಯಿಂದಾಗಿ, ರಕ್ತದ ಕೊರತೆ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿಟಮಿನ್ ಸಿ ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಆದರೆ, ದೇಹವು ಕಡಿಮೆ ಪ್ರಮಾಣದ ವಿಟಮಿನ್ ಸಿ ಪಡೆದಾಗ, ಕಬ್ಬಿಣದ ಕೊರತೆಯೂ ಉಂಟಾಗುತ್ತದೆ. 

ಇದನ್ನೂ ಓದಿ : ಬಾರ್‌ನಲ್ಲಿ ಎಣ್ಣೆ ಜೊತೆ ತಿನ್ನೋಕೆ ಮಸಾಲೆ ಶೆಂಗಾ ಏಕೆ ಕೊಡ್ತಾರೆ ಗೊತ್ತೆ..? ರುಚಿಗೆ ಅಲ್ಲ.. ಇದರ ಹಿಂದಿನ ಉದ್ದೇಶವೇ ಬೇರೆ

ಕಡಿಮೆ ಮಟ್ಟದ ವಿಟಮಿನ್ ಸಿ ದೇಹದ ಕೀಲುಗಳಲ್ಲಿ ನೋವು ಮತ್ತು ಊತವನ್ನು ಹೆಚ್ಚಿಸುತ್ತದೆ. ಆದ್ದರಿಂದ, ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. 

ಊದಿಕೊಂಡ ಒಸಡುಗಳು : 
ಒಸಡುಗಳಲ್ಲಿ ರಕ್ತಸ್ರಾವ ಮತ್ತು ಊತದಂತಹ ಸಮಸ್ಯೆಗಳು ವಿಟಮಿನ್ ಸಿ ಕೊರತೆಯ ಪ್ರಮುಖ ಲಕ್ಷಣಗಳಾಗಿರಬಹುದು. ವಿಟಮಿನ್ ಸಿ ಕಡಿಮೆಯಾಗುವುದರಿಂದ ದೇಹದಲ್ಲಿ ಕಾಲಜನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದು ಒಸಡುಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುತ್ತದೆ.  

ಗಾಯ ಬೇಗನೆ ಗುಣವಾಗದೇ ಇರುವುದು :
ಯಾವುದೇ ಗಾಯ ಬೇಗನೆ ಗುಣವಾಗದಿದ್ದರೆ, ನಿಮ್ಮ ದೇಹದಲ್ಲಿ ವಿಟಮಿನ್ ಸಿ ಯ ತೀವ್ರ ಕೊರತೆ ಇರುವ ಸಾಧ್ಯತೆಯಿದೆ. ವಿಟಮಿನ್ ಸಿ ಮಟ್ಟಗಳು ಕಡಿಮೆಯಾದಾಗ, ಗಾಯ ಗುಣವಾಗುವ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ.

ಇದನ್ನೂ ಓದಿ : ಈ ಹಣ್ಣು ಕ್ಯಾನ್ಸರ್ ಕೂಡ ಗುಣಪಡಿಸುತ್ತದೆ.. ಒಮ್ಮೆ ತಿಂದರೂ ಸಾಕು ವರ್ಷವಿಡಿ ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್‌ ‌!

ವಿಟಮಿನ್ ಸಿ ಕೊರತೆಯಿಂದ ಪರಿಹಾರ : 
ಸಿಟ್ರಸ್ ಹಣ್ಣುಗಳನ್ನು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿರುತ್ತದೆ.  ಅದಕ್ಕಾಗಿಯೇ, ನಿಂಬೆ, ಕಿತ್ತಳೆ ಮತ್ತು ಕಿವಿಯಂತಹ ಹಣ್ಣುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು. ಇದಲ್ಲದೆ, ಆಹಾರದಲ್ಲಿ ಪೇರಳೆ, ನೆಲ್ಲಿಕಾಯಿ, ಹಸಿರು ಎಲೆಗಳ ತರಕಾರಿಗಳನ್ನು ಸೇರಿಸಿಕೊಳ್ಳಬೇಕು. 

(ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News